Widgets Magazine

ಕುಂಭ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?

ಬೆಂಗಳೂರು| Krishnaveni K| Last Modified ಶುಕ್ರವಾರ, 8 ಫೆಬ್ರವರಿ 2019 (08:49 IST)
ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ಆ ಸ್ವಭಾವಕ್ಕೆ ತಕ್ಕಂತ ವ್ಯಕ್ತಿಗಳನ್ನು ಮದುವೆಯಾದರೆ ಮಾತ್ರ ಸುಖವಾಗಿರಲು ಸಾಧ್ಯ. ಇಂದು ಕುಂಭ ರಾಶಿ ನೋಡೋಣ.

 
ಕುಂಭ ರಾಶಿಯವರು ತಮ್ಮದೇ ಸಿದ್ಧಾಂತಗಳನ್ನು ಹೊಂದಿದವರು. ಇವರು ತಮ್ಮ ಹೃದಯದ ಮಾತನ್ನು ಮಾತ್ರ ಕೇಳುವ ಹಠವಾದಿಗಳು. ಇವರ ಈ ಸ್ವಭಾವವನ್ನು ಅರ್ಥ ಮಾಡಿಕೊಳ್ಳುವವರನ್ನು ವಿವಾಹವಾದರೆ ಮಾತ್ರ ಇವರು ಸುಖವಾಗಿರಲು ಸಾಧ್ಯ.
 
ಇವರದ್ದೇ ಸ್ವಭಾವಕ್ಕೆ ಸಾಮ್ಯತೆ ಹೊಂದಿರುವ ಮಿಥುನ ರಾಶಿಯವರನ್ನು ಮದುವೆಯಾದರೆ ಭಾವನಾತ್ಮಕವಾಗಿ ಇವರು ಹೆಚ್ಚು ಹೊಂದಾಣಿಕೆಯುಳ್ಳವರಾಗುತ್ತಾರೆ. ಸ್ವತಂತ್ರ ವ್ಯಕ್ತಿತ್ವ ಬಯಸುವವರಾದರೆ ಧನು ರಾಶಿಯವರನ್ನು ಮದುವೆಯಾಗಬಹುದು. ಅದಲ್ಲದೇ ಹೋದರೆ ಮೇಷ ರಾಶಿಯವರೂ ಇವರಿಗೆ ಉತ್ತಮ ಜತೆಗಾರರಾಗುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :