ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ಆ ಸ್ವಭಾವಕ್ಕೆ ತಕ್ಕಂತ ವ್ಯಕ್ತಿಗಳನ್ನು ಮದುವೆಯಾದರೆ ಮಾತ್ರ ಸುಖವಾಗಿರಲು ಸಾಧ್ಯ. ಮೊದಲಗೆ ವೃಷಭ ರಾಶಿ ನೋಡೋಣ.ವೃಷಭ ರಾಶಿಯವರಿಗೆ ತಾಳ್ಮೆ ಜಾಸ್ತಿ. ಇವರ ಈ ಸ್ವಭಾವದಿಂದಾಗಿಯೇ ಇವರ ಸುತ್ತಮುತ್ತಲಿದ್ದವರನ್ನೂ ಶಾಂತಿಯಿಂದ ಬಾಳುವಂತೆ ಮಾಡುತ್ತಾರೆ. ಇವರು ಕನ್ಯಾ ರಾಶಿಯವರನ್ನು ಮದುವೆಯಾದರಂತೂ ಸಂಸಾರ ಸ್ವರ್ಗವಾಗುತ್ತದೆ.ನೀವು ನಿಮ್ಮ ಶಾಂತ ಸ್ವಭಾವದಿಂದಾಗಿ ಜತೆಗಿದ್ದವರನ್ನೂ ನಿಮ್ಮೊಡನೆ ಒಯ್ಯುವ ಸ್ವಭಾವದವರಾಗಿರುತ್ತೀರಿ. ಅದು