ನಿಮ್ಮ ಭವಿಷ್ಯದ ಮುನ್ಸೂಚನೆಗೆ ಕನಸುಗಳು ನೆರವಾಗುತ್ತವೆಯೇ?

ನವದೆಹಲಿ, ಮಂಗಳವಾರ, 21 ಜೂನ್ 2016 (13:02 IST)

ಮಾನವ ಜೀವನದಲ್ಲಿ ಕನಸುಗಳಿಗೆ ಪ್ರಾಮುಖ್ಯತೆ ಮತ್ತು ಉದ್ದೇಶವಿರುವುದು ಸಂಶೋಧನೆ ಮತ್ತು ವೈಜ್ಞಾನಿಕ ಅಧ್ಯಯನಗಳು ಸಾಬೀತುಮಾಡಿವೆ. ಕನಸು ಕಾಣುವ ಮನಸ್ಸು ಸುಪ್ತ ಮನಸ್ಸಿನಲ್ಲಿ ಸಂಗ್ರಹವಾಗಿರುವ ಮಾಹಿತಿಯಾಗಿದ್ದು, ಎಚ್ಚರವಾದಾಗ ಅದು ಲಭ್ಯವಿರುವುದಿಲ್ಲ. ವಾಸ್ತವವಾಗಿ ನಮ್ಮ ಸುಪ್ತ ಮನಸ್ಸಿಗೆ ಕಿಟಕಿಯಾಗಿ ಕನಸುಗಳು ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದು ನಿಮ್ಮ ಭವ್ಯ ರೂಪಿಸಿಕೊಳ್ಳಲು ಉಪಯುಕ್ತವಾಗಿರುತ್ತದೆ. 
 
ಆದ್ದರಿಂದ ನಮ್ಮ ಕನಸುಗಳನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ನಮ್ಮ ಭವಿಷ್ಯದ ಸಂಕೀರ್ಣ ಕ್ರಮಾವಳಿಯನ್ನು ನಾವು ಬಿಡಿಸಲು ಸಾಧ್ಯವಾಗುತ್ತದೆ. ಕೆಳಗೆ 5 ಸಾಮಾನ್ಯ ಕನಸುಗಳು ನಿಮ್ಮ ಭವಿಷ್ಯವನ್ನು ಮುಂಗಾಣಲು ನೆರವಾಗುತ್ತವೆ.
 
1. ನೀವು ಆಕಾಶದಲ್ಲಿ ಹಾರುವ ಅಥವಾ ಕೆಳಕ್ಕೆ ಬೀಳುವ ಕನಸುಗಳು: ನೀವು ಗಗನಚುಂಬಿಯಿಂದ , ಎತ್ತರದ ಪ್ರದೇಶದಿಂದ, ಹತೋಟಿ ತಪ್ಪಿದ ವಿಮಾನದಿಂದ ಕೆಳಕ್ಕೆ ಬೀಳುವ ಕನಸುಗಳು ನೀವು ನಿಮ್ಮ ಜೀವನದಲ್ಲಿ ಕಠಿಣ ಸಂದರ್ಭಗಳನ್ನು ಎದುರಿಸುತ್ತಿದ್ದೀರಿ ಎಂದು ಸಂಕೇತಿಸುತ್ತದೆ. ನೀವು ರೆಕ್ಕೆಗಳೊಂದಿಗೆ ಆಕಾಶದ ಮೇಲೆ ಹಾರುತ್ತಿದ್ದರೆ ನಿಮ್ಮ ಜೀವನದ ಭಿನ್ನ ಪರಿಸ್ಥಿತಿಗಳ ಮೇಲೆ ನಿಮ್ಮ ನಿಯಂತ್ರಣವನ್ನು ಸಂಕೇತಿಸುತ್ತದೆ. ನೀವು ಆಕಾಶದಲ್ಲಿ ಹಾರುವ ಕನಸು ನಿಮ್ಮ ಪ್ರಬಲ ಇಚ್ಛಾಶಕ್ತಿಯನ್ನು ಮತ್ತು ಅಧಿಕ ಆತ್ಮವಿಶ್ವಾಸವನ್ನು ಮತ್ತು ಜೀವನದಲ್ಲಿ ಯಶಸ್ಸು ಸಾಧಿಸುವ ಮಹತ್ವಾಕಾಂಕ್ಷೆಗಳನ್ನು ಬಿಂಬಿಸುತ್ತದೆ. 
 
 2. ಹಸಿವಿನಿಂದ ಕೂಡಿರುವ ಅಥವಾ ಭೋಜನದ ಕನಸುಗಳು:  ನೀವು ಹಸಿವಿನಿಂದ ಕೂಡಿರುವ ಕನಸು ಬಿದ್ದರೆ, ನಿಮ್ಮ ಜೀವನದ ಕೆಲವು ಅಂಶಗಳ ಬಗ್ಗೆ ನಿಮಗೆ ಅತೃಪ್ತಿಯ ಪ್ರಬಲ ಭಾವನೆ ಇರುವುದನ್ನು ಸಂಕೇತಿಸುತ್ತದೆ. ಇದು ನಿಮಗೆ ಪ್ರೀತಿಯ ಹಸಿವು,  ಗೌರವ, ಪ್ರಭಾವ, ಸಂಪತ್ತು ಮತ್ತು ಖ್ಯಾತಿಯ ಹಸಿವನ್ನು ಸಂಕೇತಿಸುತ್ತವೆ. ನೀವು ಬಹಳ ಸಮಯದಿಂದ ಇಚ್ಛಿಸುತ್ತಿರುವ ಕಾರ್ಯಗಳನ್ನು ಸಾಧಿಸಲು ಹಂಬಲಿಸುತ್ತೀರೆಂದು ಇಂತಹ ಕನಸುಗಳು ಬಿಂಬಿಸುತ್ತವೆ. ನಿಮ್ಮ ಕನಸಿನಲ್ಲಿ ಭೋಜನ ಮಾಡಿದರೆ, ಇದರ ಅರ್ಥ ನೀವು ಜೀವನದಲ್ಲಿ ಸಂತೋಷವಾಗಿದ್ದೀರೆಂದು ಆಗುತ್ತದೆ. ಇದು ಸಂತೋಷ ಮತ್ತು ವಿಲಾಸ ಜೀವನವನ್ನು ಸಂಕೇತಿಸುತ್ತದೆ.
3.ಹುಟ್ಟು ಅಥವಾ ಸಾವಿನ ಕನಸುಗಳು: ಹುಟ್ಟಿನ ಕನಸು ನಿಮ್ಮ ಜೀವನದ ಹೊಸ ಹಂತ ಆರಂಭಿಸುತ್ತೀರೆಂದು ಅರ್ಥ. ನಿಮ್ಮ ಭವಿಷ್ಯದ ಜೀವನದಲ್ಲಿ ಭಾರೀ ಬದಲಾವಣೆಗಳನ್ನು ಇದು ಬಿಂಬಿಸುತ್ತದೆ. ಇದಕ್ಕೆ ವಿರುದ್ದವಾಗಿ ಸಾವಿನ ಕನಸುಗಳು ನೀವು ಜೀವನದಲ್ಲಿ ಕೆಲವನ್ನು ಕೊನೆಗಳಿಸಲು ಅಥವಾ ನಿಯಂತ್ರಣದಲ್ಲಿರಿಸುವ ಅಗತ್ಯವನ್ನು ಅದು ಸೂಚಿಸುತ್ತದೆ. ಇದು ಭವಿಷ್ಯದಲ್ಲಿ ಉಂಟಾಗುವ ದಿಢೀರ್ ಸನ್ನಿವೇಶಗಳ ಬದಲಾವಣೆಯಿಂದ  ನಿಮಗೆ ಮಾನಸಿಕ ಒತ್ತಡ ನೀಡುವುದನ್ನು ಸಂಕೇತಿಸುತ್ತದೆ. 
 
4. ನೀವು ಬೆನ್ನಟ್ಟುವ ಅಥವಾ ನಿಮ್ಮನ್ನು ಬೆನ್ನಟ್ಟುವ ಕನಸುಗಳು: ನೀವು ಕನಸುಗಳಲ್ಲಿ ಯಾರನ್ನಾದರೂ ಚೇಸ್ ಮಾಡಿದರೆ ನೀವು ಅವರು ಕೆಟ್ಟ ದಾರಿ ಹಿಡಿಯದಂತೆ ಅವರ ಭವಿಷ್ಯ ಹಾಳಾಗದಂತೆ ಅಥವಾ ನಿಮ್ಮ ಜೀವನದ ಮೇಲೆ ನೇರವಾಗಿ, ಪರೋಕ್ಷವಾಗಿ ಪರಿಣಾಮ ಬೀರುವಂತಹ ವಿಷಯಗಳಿಂದ ಆ ವ್ಯಕ್ತಿಯನ್ನು ರಕ್ಷಿಸಲು ಯತ್ನಿಸುತ್ತೀರೆಂದು ಅರ್ಥ. ನಿಮ್ಮನ್ನು ಬೆನ್ನಟ್ಟುವ ಕನಸುಗಳು ಬಿದ್ದರೆ, ನೀವು ಕೆಲವು ಭವಿಷ್ಯದ ಸನ್ನಿವೇಶಗಳ ಬಗ್ಗೆ ಭಯಭೀತ ಮತ್ತು ಆತಂಕಕಾರಿಯಾಗಿದ್ದೀರೆಂದು ಅರ್ಥ. ನೀವು ಸಂಘರ್ಷವನ್ನು ತಪ್ಪಿಸಲು ಯತ್ನಿಸುತ್ತೀರೆಂದು ಕೂಡ ಅರ್ಥ ಕೊಡುತ್ತದೆ.
 
5. ನೀವು ಏನನ್ನಾದರೂ ಹುಡುಕಿದ ಅಥವಾ ಪತ್ತೆಮಾಡಿದ ಕನಸು: ನೀವು ಏನನ್ನಾದರೂ ಹುಡುಕುವ ಕನಸು ಬಿದ್ದರೆ, ನೀವು ಜೀವನದ ಕೆಲವು ಅಂಶಗಳ ಬಗ್ಗೆ ಅತೃಪ್ತಿಯ ಭಾವನೆ ಹೊಂದಿದ್ದೇರೆಂದು ಅರ್ಥ. ನೀವು ಅಪೂರ್ಣರೆಂದು, ನೀವು ಅದಕ್ಷರೆಂದು ಭಾವಿಸುವ ಜೀವನದ ಕ್ಷೇತ್ರವನ್ನು ಇದು ಬಿಂಬಿಸುತ್ತದೆ. ನಿಮಗೆ ಕನಸಿನಲ್ಲಿ ಏನಾದರೂ ಸಿಕ್ಕಿದರೆ, ನೀವು ಆಧ್ಯಾತ್ಮಿಕ ಅಥವಾ ಉನ್ನತ ಶಕ್ತಿಯಲ್ಲಿ ನಂಬಿಕೆ ಇರಿಸಿರುವುದನ್ನು ಸಂಕೇತಿಸುತ್ತದೆ. ಈ ಕನಸುಗಳು ಆಧ್ಮಾತ್ಮಿಕತೆಯ ಜಗತ್ತಿಗೆ ಮತ್ತು ಬಲಾಢ್ಯ ಶಕ್ತಿಯಲ್ಲಿನ ನಂಬಿಕೆಗೆ ಹತ್ತಿರ ತರುತ್ತದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
ನಿಮ್ಮ ಭವಿಷ್ಯದ ಮುನ್ಸೂಚನೆಗೆ ಕನಸುಗಳು ನೆರವಾಗುತ್ತವೆಯೇ? ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ವೃತ್ತಿಜೀವನದ ಹಾದಿಯಲ್ಲಿ ಜೋತಿಷ್ಯದ ಪರಿಣಾಮ

ಜೀವನದ ಸಾಗರವನ್ನು ಮಾನವ ದಾಟಲು ಜಾತಕಕ್ಕಿಂತ ಉತ್ತಮ ದೋಣಿ ಬೇರೊಂದಿಲ್ಲ ಎಂಬ ಮಾತಿದೆ. ಸಂಪೂರ್ಣ ...

news

ವಿವಾಹಕ್ಕೆ ಮುಂಚೆ ಸಂಗಾತಿಗಳ ನಡುವೆ ಹೊಂದಾಣಿಕೆ ಅತ್ಯವಶ್ಯಕ

ವಿವಾಹ ಬಂಧಕ್ಕೆ ಮುಂಚೆ ಸಂಗಾತಿಗಳ ನಡುವೆ ಹೊಂದಾಣಿಕೆ ಗಮನಾರ್ಹ ಅಂಶವಾಗಿದೆ. ವಿವಾಹ ಸಂಬಂಧ ...

news

ಹೊಸ ವರ್ಷದಲ್ಲಿ ನಿಮ್ಮ ಭವಿಷ್ಯ ಹೇಗಿರುತ್ತದೆ? ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಈ ರಾಶಿಯವರಿಗೆ ಗುರು ಸಪ್ತಮ ಸ್ಥಾನದಲ್ಲಿರುವುದರಿಂದ ಕುಟುಂಬದಲ್ಲಿ ಮಂಗಳ ಕಾರ್ಯಗಳು ನೆರವೇರುತ್ತವೆ, ...

ಸೂರ್ಯನ ರಾಶಿ ಪರಿವರ್ತನೆ: ನಿಮ್ಮ ರಾಶಿಯ ಮೇಲೆ ಪರಿಣಾಮವೆಷ್ಟು ?

ರಾಶಿ ಪರಿವರರ್ತನೆ ಮಾಡಿದ ಸೂರ್ಯ , ನಿಮ್ಮ ಮೇಲೆ ಏನು ಪ್ರಭಾವಬೀರಲಿದೆ.? ಎಪ್ರಿಲ್‌‌ 14 ರಂದು ಸೂರ್ಯ ಮೇಷ ...