ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಮ್ಮ ವೃತ್ತಿ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ.6,15 ಮತ್ತು 24 ರಂದು ಜನಿಸಿದವರು ಈ ದಿನಾಂಕಗಳಂದು ಜನಿಸಿದವರು ಒಂದು ರೀತಿಯಲ್ಲಿ ಆಕರ್ಷಣೀಯ ವ್ಯಕ್ತಿತ್ವದವರು. ಬುಧ ಗ್ರಹ ಇವರನ್ನು ಆಳುವವನು. ಇವರು ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳುವಂತಹ ವೃತ್ತಿಗೆ ಹೇಳಿ ಮಾಡಿಸಿದಂತವರು.ಈ ದಿನಾಂಕಗಳನ್ನು ಜನಿಸಿದವರಿಗೆ ಹೋಟೆಲ್ ಮ್ಯಾನೇಜ್ ಮೆಂಟ್ ಅಥವಾ ಗ್ಲಾಮರ್, ಮನರಂಜನೆಯ ಲೋಕ ಹೆಚ್ಚು ಯಶಸ್ಸು ತಂದುಕೊಡುತ್ತದೆ.