ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಮಂಗಳವಾರ, 11 ಡಿಸೆಂಬರ್ 2018 (09:27 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಮೇಲಧಿಕಾರಿಗಳಿಂದ ಕಿರಿ ಕಿರಿ ಇದ್ದು, ಕಾರ್ಯಕ್ಷೇತ್ರದಲ್ಲಿ ಒತ್ತಡ ತೋರಿಬಂದೀತು. ಕುಟುಂಬದವರ ಸಹಕಾರದಿಂದ ನೆಮ್ಮದಿ.
 
ವೃಷಭ: ಹಳೆಯ ಬಾಕಿಯೊಂದು ಪಾವತಿಯಾಗಲಿದೆ. ನೆಮ್ಮದಿಯ ಸಂತೋಷದ ದಿನ ಇಂದು ನಿಮ್ಮದಾಗಲಿದೆ. ಹೊಸ ವೃತ್ತಿಯಲ್ಲಿ ತೊಡಗಿಸಿಕೊಳ್ಳಲಿದ್ದೀರಿ.
 
ಮಿಥುನ: ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಕೌಟುಂಬಿಕ ಸಮಸ್ಯೆಗಳಿಂದ ತಾಳ್ಮೆ ಕಳೆದುಕೊಳ್ಳುವಿರಿ. ಸಮಾಧಾನವಿರಲಿ.
 
ಕರ್ಕಟಕ: ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ. ಹೊಸ ಸುದ್ದಿ ಕೇಳಿಬರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
 
ಸಿಂಹ: ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ದೊರೆಯಲಿದೆ. ತುಸು ತಾಳ್ಮೆ ಅಗತ್ಯ. ಕೀಳರಿಮೆ ಆಲೋಚನೆಗಳಿಂದ ಚಿಂತೆಯಲ್ಲಿ ಮುಳುಗದಿರಿ.
 
ಕನ್ಯಾ: ವೃತ್ತಿ ರಂಗದಲ್ಲಿ ಯಶಸ್ಸು ಲಭಿಸುತ್ತದೆ. ಕೊಂಚ ಮಾನಸಿಕ ಒತ್ತಡಗಳಿದ್ದರೂ ಅವು ನಿಮ್ಮ ದೈನಂದಿನ ಜೀವನವನ್ನು ಹೆಚ್ಚಾಗಿ ಬಾಧಿಸಲಾರದು.
 
ತುಲಾ: ಮಹಿಳೆಯರಿಗೆ ಸಂತಸದ ದಿನವಿದು. ಪ್ರಯತ್ನ ಬಲದಿಂದ ಯಶಸ್ಸು ಗಳಿಸುತ್ತೀರಿ. ಬೇರೆಯವರ ಮಾತುಗಳಿಗೆ ಕಿವಿಗೊಡಬೇಕಿಲ್ಲ.
 
ವೃಶ್ಚಿಕ: ವಿವಾಹ ಸಂಬಂಧವಾಗಿ ಕುಟುಂಬದವರ ಜತೆ ಕೊಂಚ ಕಿರಿ ಕಿರಿ ಅನುಭವಿಸುವಿರಿ. ತಾಳ್ಮೆ ಸಮಾಧಾನವಿದ್ದಲ್ಲಿ ಯಶಸ್ಸು ಸಾಧ್ಯ.
 
ಧನು: ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಂಗಾತಿಯ ಅಭಿಪ್ರಾಯ ಕೇಳಿ ಮುಂದುವರಿಯಿರಿ. ದಿನದಂತ್ಯಕ್ಕೆ ಶುಭ ವಾರ್ತೆ ಲಭಿಸಬಹುದು.
 
ಮಕರ: ಮನೆಯವರ ಪ್ರೀತಿ ಸಹಕಾರದಿಂದ ಇಂದು ನೀವು ಅಂದುಕೊಂಡ ಕೆಲಸ ಪೂರ್ಣಗೊಳಿಸುವಿರಿ. ದೇವಾಲಯಗಳಿಗೆ ಭೇಟಿ ನೀಡುವಿರಿ.
 
ಕುಂಭ: ಯಾರ ಜತೆಗೂ ಇಂದು ಶತ್ರುತ್ವ ಕಟ್ಟಿಕೊಳ್ಳಬೇಡಿ. ಎಷ್ಟೇ ಅಡಚಣೆಗಳಿದ್ದರೂ ತಾಳ್ಮೆಯಿಂದ ನಿಭಾಯಿಸಿದರೆ ಇಂದು ನೀವು ಅಂದುಕೊಂಡ ಕಾರ್ಯ ನೆರವೇರುತ್ತದೆ.
 
ಮೀನ: ದೂರ ಸಂಚಾರ ಮಾಡುವಿರಿ ಮತ್ತು ಧನವ್ಯಯವೂ ಆಗುವುದು. ಏನೇ ಕೆಲಸ ಮಾಡುವುದಿದ್ದರೂ ಕುಟುಂಬದವರೊಂದಿಗೆ ಚರ್ಚಿಸದೇ ಮುಂದುವರಿಯಬೇಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಈ ವಾರ ನಿಮ್ಮ ಜಾತಕದಲ್ಲಿ ಏನಿದೆ? ವಾರದ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ!

ಬೆಂಗಳೂರು: ದಿನಾಂಕ 10 ಡಿಸೆಂಬರ್ ನಿಂದ 16 ನೇ ಡಿಸೆಂಬರ್ ವರೆಗಿನ ದ್ವಾದಶ ರಾಶಿಗಳ ವಾರಭವಿಷ್ಯ ಹೇಗಿದೆ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮೇಷ: ಹೊಸ ಬಟ್ಟೆ, ವಸ್ತು ಖರೀದಿ ಸಾಧ್ಯತೆಯಿದ್ದು, ಖರ್ಚು ವೆಚ್ಚ ಅಧಿಕವಾಗಲಿದೆ. ಆದರೆ ಕುಟುಂಬದವರೊಂದಿಗೆ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ವೃತ್ತಿ ರಂಗದಲ್ಲಿ ಮೇಲಧಿಕಾರಿಗಳಿಂದ ಕೊಂಚ ಕೊಂಚ ಕಿರಿ ಕಿರಿಯಾದರೂ, ಕುಟುಂಬದಲ್ಲಿ ...