ಇಂದಿನ ದಿನ ಯಾವ ರಾಶಿಯವರಿಗೆ ಶುಭ?

ಬೆಂಗಳೂರು, ಗುರುವಾರ, 13 ಡಿಸೆಂಬರ್ 2018 (09:01 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ವಾದ ವಿವಾದಗಳಲ್ಲಿ ಇಂದು ಜಯ ನಿಮ್ಮದೇ ಆದರೆ ಹಿತಶತ್ರುಗಳ ಕಾಟ ತಪ್ಪದು.ಆರ್ಥಿಕವಾಗಿ ತುಸು ಚೇತರಿಕೆ ಕಂಡುಬರುವುದು.
 
ವೃಷಭ: ನಿಮ್ಮ ಕೈ ಕೆಳಗೆ ಕೆಲಸ ಮಾಡುವವರಿಂದ ಅಪಾಯ ಎದುರಾಗಬಹುದು. ಆರ್ಥಿಕವಾಗಿ ಸದೃಢರಾಗುತ್ತೀರಿ. ಶುಭ ಕಾರ್ಯಗಳನ್ನು ಕೈಗೊಳ್ಳಲು ಅಡ್ಡಿಯಿಲ್ಲ.
 
ಮಿಥುನ: ಪತ್ನಿಯಿಂದ ಸಮಸ್ಯೆಗಳು ಎದುರಾಗಬಹುದು. ಸಾಂಸಾರಿಕವಾಗಿ ಕಿರಿ ಕಿರಿ ಇದ್ದರೂ ವೃತ್ತಿಯಲ್ಲಿ ಯಶಸ್ಸು ಕಾಣುವಿರಿ. ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿ.
 
ಕರ್ಕಟಕ: ಆರೋಗ್ಯದ ಬಗ್ಗೆ ಎಚ್ಚರಿಕೆಯಿರಿಲಿ. ಆರ್ಥಿಕವಾಗಿ ಚೇತರಿಸಿಕೊಳ್ಳುವಿರಿ. ಕೆಲವು ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಾಣುವಿರಿ.
 
ಸಿಂಹ: ಶುಭ ಕಾರ್ಯಗಳನ್ನು ಕೈಗೊಳ್ಳುವಿರಿ. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗುತ್ತವೆ. ಹಿತಶತ್ರುಗಳ ಬಗ್ಗೆ ಎಚ್ಚರವಾಗಿರಿ.
 
ಕನ್ಯಾ: ಸಂಗಾತಿಯಿಂದ ಸಿಹಿ ಸುದ್ದಿ ಇದೆ. ಸಾಂಸಾರಿಕವಾಗಿ ನೆಮ್ಮದಿ ಕಾಣುವಿರಿ. ಉದ್ಯೋಗದಲ್ಲಿ ಬಡ್ತಿ ಪಡೆಯುವಿರಿ.
 
ತುಲಾ: ವೃತ್ತಿಯಲ್ಲಿ ಕೊಂಚ ಕಿರಿ ಕಿರಿ ಇರುತ್ತದೆ. ಮನೆಗೆ ಸಂಬಂಧಿಸಿದ ವಸ್ತು ಖರೀದಿ ಮಾಡುವಿರಿ. ಶುಭ ಕಾರ್ಯಗಳನ್ನು ಮಾಡುತ್ತೀರಿ.
 
ವೃಶ್ಚಿಕ: ಧಾರ್ಮಿಕ ಕಾರ್ಯಕ್ರಮಗಳಿಗೆ ಧನವ್ಯಯ ಮಾಡುವಿರಿ. ಆರೋಗ್ಯ ಸುಧಾರಿಸುವುದು. ಮನೆಯಲ್ಲಿ ಕೊಂಚ ಕಿರಿ ಕಿರಿ ವಾತಾವರಣ ಇರಬಹುದು.
 
ಧನು: ನೀವು ಮಾಡುವ ವ್ಯವಹಾರದಲ್ಲಿ ಕೊಂಚ ಜಾಗ್ರತೆ ಇರಲಿ. ಆರೋಗ್ಯ ಸಮಸ್ಯೆಯಿದ್ದರೆ ಇಂದು ಪರಿಹಾರವಾಗುವುದು. ಸಾಂಸಾರಿಕವಾಗಿ ನೆಮ್ಮದಿ ಕಾಣುವಿರಿ.
 
ಮಕರ: ವಿವಾಹವಾಗಲು ಬಯಸುವವರಿಗೆ ಇಂದು ಕೊಂಚ ಅಡಚಣೆ ಕಂಡುಬರಬಹುದು. ಇದರಿಂದ ಮಾನಸಿಕವಾಗಿ ಕೊಂಚ ಬೇಸರ ಅನುಭವಿಸುವಿರಿ. ದಿನದಂತ್ಯಕ್ಕೆ ಶುಭವಾರ್ತೆ ಇದೆ.
 
ಕುಂಭ: ಸಂತಾನ ಭಾಗ್ಯದ ಆಕಾಂಕ್ಷಿಗಳಿಗೆ ಇಂದು ಫಲ ಸಿಗುವುದು. ಸಾಂಸಾರಿಕವಾಗಿ ಸಂತಸದ ವಾತಾವರಣವಿರಲಿದೆ.
 
ಮೀನ: ವೃತ್ತಿ ರಂಗದಲ್ಲಿ ಯಶಸ್ಸು ಕಾಣುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡರೆ ಒಳಿತಾಗುತ್ತದೆ. ದಿನದಂತ್ಯಕ್ಕೆ ಶುಭವಾರ್ತೆ ಕೇಳುವಿರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಮದುವೆ ತಡವಾಗಲು ಕಾರಣವಾಗುವ ಯೋಗವೇನು ಗೊತ್ತಾ?

ಬೆಂಗಳೂರು: ಮದುವೆಯಾಗುವ ವಯಸ್ಸಾದರೂ ಜಾತಕ ಹೊಂದಾಣಿಕೆ ಕೊರತೆಯಿಂದ ಯೋಗ್ಯ ವರ/ವಧು ಸಿಗುತ್ತಿಲ್ಲ ಎಂಬ ...

news

ಜಾತಕದಲ್ಲಿ ಈ ದೋಷವಿದ್ದರೆ ವಿಚ್ಛೇದನ ಸಾಧ್ಯತೆ ಹೆಚ್ಚು!

ಬೆಂಗಳೂರು: ಪತಿ-ಪತ್ನಿ ವಿರಸ, ವಿಚ್ಛೇದನ ಇತ್ತೀಚೆಗಿನ ದಿನಗಳಲ್ಲಿ ಸಾಮಾನ್ಯವೆಂಬಂತೆ ಆಗಿಬಿಟ್ಟಿದೆ. ದಂಪತಿ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.