ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಗುರುವಾರ, 20 ಡಿಸೆಂಬರ್ 2018 (09:02 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ವೃತ್ತಿ ಮತ್ತು ಕೌಟುಂಬಿಕ ಕೆಲಸಗಳಲ್ಲಿ ಒತ್ತಡದಿಂದ ಓಡಾಡಬೇಕಾಗುತ್ತದೆ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗುತ್ತದೆ. ಖರ್ಚುಗಳು ಮಿತಿಯಲ್ಲಿರಲಿ.
 
ವೃಷಭ:ಕೆಲಸಗಳಲ್ಲಿ ಯಶಸ್ಸು ಸಿಕ್ಕಿ ಆರ್ಥಿಕವಾಗಿ ಲಾಭ ಪಡೆಯುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.
 
ಮಿಥುನ: ಸಾಂಸಾರಿಕವಾಗಿ ಸಂಗಾತಿಯೊಡನೆ ಹೊಂದಾಣಿಕೆಯ ಸಹಬಾಳ್ವೆ ನಡೆಸುವಿರಿ. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾದೀತು.
 
ಕರ್ಕಟಕ: ಆರೋಗ್ಯದ ಬಗ್ಗೆ ಕಾಳಜಿವಹಿಸಿರಿ. ಧನ ಲಾಭವಾಗುವುದು, ಆದರೆ ಅಷ್ಟೇ ಖರ್ಚು ವೆಚ್ಚಗಳೂ ತಲೆದೋರಲಿವೆ. ತಾಳ್ಮೆಯಿರಲಿ.
 
ಸಿಂಹ: ಇಂದು ನೀವು ಎಷ್ಟು ತಾಳ್ಮೆಯಿಂದಿರುತ್ತೀರೋ ಅಷ್ಟೇ ಒಳ್ಳೆಯದು. ಮುಂಗೋಪ ತೋರಿದರೆ ಕೆಲಸ ಕೆಡುತ್ತದೆ. ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಅನುಭವಿಸಿದರೂ ತಾಳ್ಮೆ ಕೆಡಬೇಡಿ.
 
ಕನ್ಯಾ: ನಿಮ್ಮ ಮತ್ತು ಕುಟುಂಬದವರ ಆರೋಗ್ಯದ ಬಗ್ಗೆ ಎಚ್ಚರವಹಿಸಿ. ಹೆಚ್ಚಿನ ಓಡಾಟಗಳು, ಜವಾಬ್ಧಾರಿಗಳು ನಿಮ್ಮನ್ನು ಹೈರಾಣಾಗಿಸಲಿದೆ. ದೇವತಾ ಪ್ರಾರ್ಥನೆ ಮಾಡಿ.
 
ತುಲಾ:ಯಾವುದೇ ಕೆಲಸಕ್ಕೆ ಮೊದಲು ಕುಟುಂಬದವರ ಸಲಹೆ ಪಡೆದು ಮುನ್ನಡೆಯಿರಿ. ಏಕಾಂಗಿಯಾಗಿ ಕೈಗೊಳ್ಳುವ ನಿರ್ಧಾರಗಳು ನಿಮಗೇ ತಿರುಗುಬಾಣವಾಗುವ ಸಾಧ್ಯತೆಯಿದೆ.
 
ವೃಶ್ಚಿಕ: ಆರ್ಥಿಕ ಪರಿಸ್ಥಿತಿಗಳು ಸುಧಾರಿಸಿ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ನೆಲೆಸಲಿದೆ. ದೇವತಾ ಪ್ರಾರ್ಥನೆಯನ್ನು ಶ್ರದ್ಧೆಯಿಂದ ಮಾಡಿದರೆ ಮತ್ತಷ್ಟು ಶುಭಫಲ.
 
ಧನು: ಕಾರ್ಯದ ಒತ್ತಡಗಳಿಂದ ಇಂದು ವಿಶ್ರಾಂತಿ ಪಡೆಯುವಿರಿ. ವಿದ್ಯಾರ್ಥಿಗಳು ಪ್ರಯತ್ನ ಪಟ್ಟರೆ ಮಾತ್ರ ಯಶಸ್ಸು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಮಕರ: ಅನಿರೀಕ್ಷಿತ ಅತಿಥಿಗಳು, ಆರ್ಥಿಕ ಲಾಭ, ಅಚ್ಚರಿಯ ವಾರ್ತೆ ಇಂದು ನಿಮ್ಮನ್ನು ಖುಷಿಗೊಳಿಸಲಿದೆ. ಮಂಗಲ ಕಾರ್ಯಗಳನ್ನು ಕೈಗೊಳ್ಳುವಿರಿ.
 
ಕುಂಭ: ಸಂಸಾರದಲ್ಲಿ ಹೊಂದಾಣಿಕೆಯಿದ್ದು, ನೆಮ್ಮದಿಯ ವಾತಾವರಣ ಕಾಣುವಿರಿ. ಆದರೆ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
 
ಮೀನ: ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ. ದೇವರ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಮತ್ತಷ್ಟು ಫಲ ಸಿಗುತ್ತದೆ. ಆರ್ಥಿಕವಾಗಿ ಖರ್ಚು, ವೆಚ್ಚಗಳ ಬಗ್ಗೆ ಎಚ್ಚರವಹಿಸಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.  ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಅಡುಗೆ ಮನೆ ಈ ಭಾಗದಲ್ಲಿ ಇದ್ದರೆ ಕಲಹ ಗ್ಯಾರಂಟಿ!

ಬೆಂಗಳೂರು: ಮನೆಯ ವಾಸ್ತು ನಮ್ಮ ಜೀವನದ ಸಂತಸ-ಬೇಸರಕ್ಕೆ ಕಾರಣವಾಗುತ್ತದೆ ಎಂಬುದು ನಮ್ಮ ನಂಬಿಕೆ. ಅದರಲ್ಲೂ ...

news

ಮನೆಯ ಈ ಭಾಗದಲ್ಲಿ ಬೆಡ್ ರೂಂ ಇದ್ದರೆ ದಂಪತಿ ನಡುವೆ ವಿರಸ ಜಾಸ್ತಿ!

ಬೆಂಗಳೂರು: ದಂಪತಿ ನಡುವಿನ ಸಾಮರಸ್ಯ ನಿರ್ಧರಿಸಲು ಇಬ್ಬರ ನಡುವಿನ ಹೊಂದಾಣಿಕೆ ಜತೆಗೆ ವಾಸ್ತು ಕೂಡಾ ...

news

ಈ ರಾಶಿಯ ಪುರುಷರ ಮೇಲೆ ಹುಡುಗಿಯರಿಗೆ ಬೇಗನೇ ಲವ್ ಆಗುತ್ತದಂತೆ!

ಬೆಂಗಳೂರು: ಕೆಲವು ರಾಶಿಯವರ ಗುಣ ಸ್ವಭಾವ ಮಹಿಳೆಯರನ್ನು ಆಕರ್ಷಿಸುತ್ತದೆ. ಸಿಂಹ, ತುಲಾ ಮತ್ತು ಮಿಥುನ ರಾಶಿ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.