ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಮಕ್ಕಳ ಭವಿಷ್ಯದ ಬಗ್ಗೆ ಹೊಸ ಯೋಜನೆಯೊಂದನ್ನು ರೂಪಿಸುವಿರಿ. ವೃತ್ತಿ ರಂಗದಲ್ಲಿ ಕೊಂಚ ಅಡೆತಡೆಯುಂಟಾದೀತು. ಆದರೆ ದಿನದಂತ್ಯಕ್ಕೆ ಶುಭ ಸುದ್ದಿಯಿದೆ.ವೃಷಭ: ಅನಿರೀಕ್ಷಿತವಾಗಿ ಬಂಧುಮಿತ್ರರ ಆಗಮನದಿಂದ ಶುಭ ಸಮಾಚಾರ ಕೇಳುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು.ಮಿಥುನ: ಕುಟುಂಬದವರೊಂದಿಗೆ ವೈಮನಸ್ಯಕ್ಕೆ ಎಡೆಮಾಡಿ ಕೊಡದಿರಿ.ವೃತ್ತಿ ರಂಗದಲ್ಲಿ ಅಪವಾದದ ಭೀತಿ ಇದೆ. ದೇವರ ಪ್ರಾರ್ಥನೆಯಿಂದ ಎಲ್ಲವೂ ಮಂಗಲವಾಗಲಿದೆ.ಕರ್ಕಟಕ: ಧನಾಗಮನವಾಗಿ ಆರ್ಥಿಕ ಪರಿಸ್ಥಿತಿಗಳು ಸುಧಾರಿಸಲಿವೆ.