ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಮಂಗಳವಾರ, 25 ಡಿಸೆಂಬರ್ 2018 (08:50 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಚಿನ್ನ, ಬೆಳ್ಳಿ ಇತ್ಯಾದಿ ಆಭರಣಗಳ ಖರೀದಿ ಮಾಡುವಿರಿ. ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರುವುದು.
 
ವೃಷಭ: ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಇಂದು ನೀವು ಅಂದುಕೊಂಡ ಕಾರ್ಯ ನೆರವೇರಬೇಕಾದರೆ ದೈವಾನುಗ್ರಹ . ಅಗತ್ಯ ಹಾಗಾಗಿ ದೇವರ ಪ್ರಾರ್ಥನೆ ಮಾಡಿ.
 
ಮಿಥುನ: ಕುಲದೇವರ ಪೂಜೆ ಸಲ್ಲಿಸಿದರೆ ಇಂದು ಉತ್ತಮ ಫಲ ಪ್ರಾಪ್ತಿ. ದೂರ ಸಂಚಾರದ ಯೋಗವಿದ್ದು, ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.
 
ಕರ್ಕಟಕ: ಯಾರಿಗೂ ಅಂಜದ ನಿಮ್ಮ ಗುಣ ಇಂದು ನಿಮ್ಮ ನೆರವಿಗೆ ಬರಲಿದೆ. ಅನಿರೀಕ್ಷಿತವಾಗಿ ಆಘಾತಕಾರಿ ಸುದ್ದಿಯೊಂದು ಎದುರಾದರೂ ಆತ್ಮಸ್ಥೈರ್ಯದಿಂದ ಎದುರಿಸಿ.
 
ಸಿಂಹ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಹಿತಶತ್ರುಗಳಿಂದ ವಂಚನೆಗೊಳಗಾಗುವ ಸಂಭವವಿದೆ. ಕುಟುಂಬದವರೊಂದಿಗೆ ಚರ್ಚಿಸಿ ಹೊಸ ಕೆಲಸಕ್ಕೆ ಕೈ ಹಾಕಿ.
 
ಕನ್ಯಾ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಪ್ರೀತಿ ಪ್ರೇಮದಲ್ಲಿ ಬಿದ್ದವರಿಗೆ ಇಂದು ಹಿರಿಯರ ಸಮ್ಮತಿ ಸಿಗುವುದು. ಆರ್ಥಿಕ ಲಾಭ ಸಿಗಲಿದೆ.
 
ತುಲಾ: ಸಂಗಾತಿಯೊಡನೆ ಮಾತನಡುವಾಗ ನಾಲಿಗೆ ತಪ್ಪದಿರಲಿ. ಆಡುವ ಮಾತಿನಿಂದ ಸಂಬಂಧಗಳು ಕೆಡಬಾರದು. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದ ಯಶಸ್ಸು. ದಿನದಂತ್ಯಕ್ಕೆ ಶುಭ ಸುದ್ದಿ.
 
ವೃಶ್ಚಿಕ: ವ್ಯವಹಾರಗಳಲ್ಲಿ ಜಯ ಸಿಗಲಿದೆ. ಎಷ್ಟೋ ದಿನಗಳಿಂದ ಬಾಕಿ ಇದ್ದ ಹಣ ನಿಮಗೆ ಇಂದು ಮರಳಿ ಸಿಗುವುದು. ಬಂಧು ಮಿತ್ರರ ಆಗಮನದಿಂದ ಮನಸ್ಸಿಗೆ ಖುಷಿ ಸಿಗಲಿದೆ.
 
ಧನು: ವಿರಾಮದ ದಿನ ಕಳೆಯುತ್ತೀರಿ. ಹಾಗಿದ್ದರೂ ಬೇಡದ ಆಲೋಚನೆ ಮನಸ್ಸಿಗೆ ತುಂಬಿಕೊಂಡು ಕ್ಲೇಶ ಮಾಡಿಕೊಳ್ಳಬೇಡಿ. ನಿಮ್ಮ ಈ ಸ್ವಭಾವದಿಂದ ಹತ್ತಿರವಿದ್ದವರಿಗೂ ಬೇಸರ ಉಂಟುಮಾಡುತ್ತೀರಿ.
 
ಮಕರ: ಬಹುದಿನದ ಅನಾರೋಗ್ಯ ಸಮಸ್ಯೆಗೆ ಇಂದು ಪರಿಹಾರ ಸಿಗಲಿದೆ. ಹೊಸ ನೆಂಟಸ್ತಿಕೆ ಬೆಳೆಸಲು ಮುಂದಾಗುತ್ತೀರಿ. ಹೊಸ ವ್ಯವಹಾರದಲ್ಲಿ ಎಚ್ಚರವಿರಲಿ. ದಿನದಂತ್ಯಕ್ಕೆ ಶುಭ ಸುದ್ದಿ.
 
ಕುಂಭ: ಯಾರಿಗಾದರೂ ಸಾಲ ಕೊಟ್ಟಿದ್ದರೆ ಅದರ ವಾಪಸಾತಿಗೆ ಓಡಾಟ ನಡೆಸಬೇಕಾದೀತು. ಕೋರ್ಟು ಕಚೇರಿ ಕೆಲಸಗಳಲ್ಲಿ ಕೊಂಚ ಹಿನ್ನಡೆ ಉಂಟಾದೀತು. ದೈವತಾ ಪ್ರಾರ್ಥನೆಯಿಂದ ಕಾರ್ಯಸಿದ್ಧಿ.
 
ಮೀನ: ನಿರ್ಧಾರ ತೆಗೆದುಕೊಳ್ಳುವ ವಿಚಾರದಲ್ಲಿ ಕೊಂಚ ಚಂಚಲ ಮನಸ್ಸು ನಿಮ್ಮದಾಗಲಿದೆ. ಹಾಗಾಗಿ ಕುಟುಂಬದ ಹಿರಿಯರೊಂದಿಗೆ ಚರ್ಚಿಸಿ ಮಹತ್ವದ ನಿರ್ಧಾರಗಳನ್ನು ಮಾಡಿ. ಧನ ಲಾಭವಾಗಲಿದೆ. ಖರ್ಚುಗಳ ಬಗ್ಗೆ ಹಿಡಿತವಿರಲಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.              ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಶಾಸ್ತ್ರಗಳ ಪ್ರಕಾರ ಒಳ್ಳೆಯ ಮಕ್ಕಳು ಹುಟ್ಟಬೇಕಾದರೆ ಈ ಮೂರು ದಿನ ಸೇರಬಾರದು!

ಬೆಂಗಳೂರು: ಮಕ್ಕಳಾಗಲು ಬಯಸುವ ಗಂಡ-ಹೆಂಡತಿ ವಾರದ ಈ ಮೂರು ದಿನಗಳಲ್ಲಿ ಒಂದಾದರೆ ಹುಟ್ಟುವ ಮಕ್ಕಳ ಗುಣ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.