ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಗುರುವಾರ, 27 ಡಿಸೆಂಬರ್ 2018 (09:08 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಉದ್ಯೋಗದಲ್ಲಿ ಬಡ್ತಿ ಅಥವಾ ಸ್ಥಾನ ಪಲ್ಲಟವಾಗುವ ಸಾಧ್ಯತೆಯಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ಕಾರ್ಯ ಕೆಲಸಗಳಿಗಾಗಿ ಹೆಚ್ಚಿನ ಓಡಾಟ ನಡೆಸಬೇಕಾದೀತು.
 
ವೃಷಭ: ವೃತ್ತಿರಂಗದಲ್ಲಿ ನಿರೀಕ್ಷಿತ ಫಲಗಳು ದೊರೆಯುವುದು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು. ಮನೆಯಲ್ಲಿ ಶುಭ ಕಾರ್ಯ ನೆರವೇರಿಸುವಿರಿ.
 
ಮಿಥುನ: ಆರೋಗ್ಯದ ಬಗ್ಗೆ ಕಾಳಜಿವಹಿಸಿ. ದೂರ ಸಂಚಾರ ಮಾಡುವಾಗ ಎಚ್ಚರಿಕೆ ಅಗತ್ಯ. ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವುದು. ಉದ್ಯೋಗಿಗಳಿಗೆ ಸ್ಥಾನ ಪಲ್ಲಟವಾಗುವುದು.
 
ಕರ್ಕಟಕ: ಹೊಸ ವಸ್ತುಗಳು, ನಿವೇಶನ ಖರೀದಿಗೆ ಹೇಳಿ ಮಾಡಿಸಿದ ದಿನ. ನಿಮ್ಮ ಬಹಳ ದಿನಗಳ ಕನಸು ಈಡೇರಿಸಿಕೊಳ್ಳುವಿರಿ. ಋಣಾತ್ಮಕ ಚಿಂತನೆಗಳು ಕಾಡಿದರೂ ಅದು ನಿಮ್ಮನ್ನು ಆಳಲು ಬಿಡಬೇಡಿ.
 
ಸಿಂಹ: ಅವಿವಾಹಿತರಿಗೆ ವಿವಾಹಕ್ಕಾಗಿ ಹೊಸ ಸಂಬಂಧಗಳ ಪ್ರಸ್ತಾಪಗಳು ಬರುವುದು. ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸುವುದು ಅಗತ್ಯ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿದೆ.
 
ಕನ್ಯಾ: ಕುಟುಂಬದವರ ಸಹಕಾರದಿಂದ ಅಂದುಕೊಂಡ ಕಾರ್ಯಗಳು ನೆರವೇರುವುದು. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಸಾಹಿತ್ಯ, ಸಾಮಾಜಿಕ ಕ್ಷೇತ್ರಗಳಲ್ಲಿ ಉದ್ಯೋಗ ಹೊಂದಿರುವವರಿಗೆ ಮುನ್ನಡೆ ಸಿಗುತ್ತದೆ.
 
ತುಲಾ: ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಹಿತ ಶತ್ರುಗಳಿಂದ ತೊಂದರೆ ಉಂಟಾಗಬಹುದು. ಯಾವುದೇ ವ್ಯವಹಾರ ನಡೆಸುವ ಮೊದಲು ಎಚ್ಚರಿಕೆ. ಉದ್ಯೋಗಸ್ಥರಿಗೆ ವೇತನ ಹೆಚ್ಚಳವಾಗಬಹುದು.
 
ವೃಶ್ಚಿಕ: ನಿರುದ್ಯೋಗಿಗಳಿಗೆ ಅಪೇಕ್ಷಿಸಿರದ ಹೊಸ ವಿಭಾಗದಲ್ಲಿ ಕೆಲಸ ದೊರಕುವುದು. ಹೊಸ ವಸ್ತುಗಳ ಖರೀದಿಯಲ್ಲಿ ವಂಚನೆಗೊಳಗಾಗುವ ಸಾಧ್ಯತೆಯಿದೆ. ಆರೋಗ್ಯ ಹದಗೆಡುವ ಸಂಭವವಿದೆ.
 
ಧನು: ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗುವುದು. ಹತ್ತಿರದ ಸಂಬಂಧಿಕರಿಂದ ಕಿರಿ ಕಿರಿ ಎದುರಾಗಬಹುದು. ಕಷ್ಟದ ಸಮಯದಲ್ಲಿ ಮಿತ್ರರು ಸಹಾಯಕ್ಕೆ ಬರುವರು. ದಿನದಂತ್ಯಕ್ಕೆ ಶುಭ ಸುದ್ದಿ.
 
ಮಕರ: ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದ ಯಶಸ್ಸು. ದಂಪತಿಗಳಲ್ಲಿ ಸರಸಕ್ಕೆ ಅಡ್ಡಿ. ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ತೊಂದರೆ ಎದುರಾಗಬಹುದು. ಯಾವುದೇ ಕೆಲಸಕ್ಕೂ ಮೊದಲು ಎಚ್ಚರಿಕೆ ಅಗತ್ಯ.
 
ಕುಂಭ: ಧನಾಗಮನವಾದಷ್ಟೇ ಖರ್ಚುಗಳೂ ಹೆಚ್ಚುವುದು. ಆರೋಗ್ಯದ ವಿಚಾರಕ್ಕೆ ಖರ್ಚು ವೆಚ್ಚಗಳಾಗಬಹುದು. ಬೇಡದ ವಾಗ್ವಾದಗಳಿಂದ ದೂರವಿರಿ.
 
ಮೀನ: ಮಾನಸಿಕವಾಗಿ ಯಾವುದೋ ವಿಚಾರ ನಿಮ್ಮನ್ನು ಕೊರೆಯುತ್ತಿದ್ದು, ಕೊಂಚ ಬೇಸರ ಮೂಡಿಸಬಹುದು. ಆದರೆ ಕುಟುಂಬದವರ ಸಹಕಾರ ದೊರೆತು ನೆಮ್ಮದಿ ದೊರಕಲಿದೆ. ದೇವತಾ ಪ್ರಾರ್ಥನೆ ಮಾಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಶಾಸ್ತ್ರಗಳ ಪ್ರಕಾರ ಒಳ್ಳೆಯ ಮಕ್ಕಳು ಹುಟ್ಟಬೇಕಾದರೆ ಈ ಮೂರು ದಿನ ಸೇರಬಾರದು!

ಬೆಂಗಳೂರು: ಮಕ್ಕಳಾಗಲು ಬಯಸುವ ಗಂಡ-ಹೆಂಡತಿ ವಾರದ ಈ ಮೂರು ದಿನಗಳಲ್ಲಿ ಒಂದಾದರೆ ಹುಟ್ಟುವ ಮಕ್ಕಳ ಗುಣ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.