ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಭಾನುವಾರ, 30 ಡಿಸೆಂಬರ್ 2018 (06:00 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಶುಭ ಸಮಾರಂಭಗಳಲ್ಲಿ ಭಾಗವಹಿಸುವಿರಿ. ಹೊಸ ವಿಚಾರಗಳನ್ನು ತಿಳಿದುಕೊಳ್ಳುವಿರಿ. ಹೊಸ ಜನರೊಂದಿಗಿನ ಓಡಾಟ ಇಂದು ನಿಮ್ಮನ್ನು ಉಲ್ಲಾಸದಾಯಕವಾಗಿಡುತ್ತದೆ.
 
ವೃಷಭ: ಭೋಜನ ಪ್ರಿಯರಾಗಿದ್ದರೆ ಇಂದು ಉತ್ತಮ ಭೋಜನ ಸವಿಯುವಿರಿ. ಬಂಧು ಮಿತ್ರರ ಆಗಮನದಿಂದ ಸಂತೋಷ ಕಾಣುವಿರಿ. ಖರ್ಚು ವೆಚ್ಚಗಳೂ ಅಧಿಕವಾಗಲಿದೆ.
 
ಮಿಥುನ: ಮಿತ್ರರ ಅನಾರೋಗ್ಯ ಸುದ್ದಿ ಕೇಳಿಬಂದೀತು. ಇನ್ನೊಬ್ಬರಿಗೆ ಸಹಾಯ ಮಾಡುವ ಮೊದಲು ಯೋಚಿಸಿ ಹೆಜ್ಜೆಯಿಡಿ. ಕುಟುಂಬದವರೊಂದಿಗೆ ಕಿರಿ ಕಿರಿ ಮಾಡಿಕೊಳ್ಳುವ ಸಾಧ್ಯತೆಯಿದೆ.
 
ಕರ್ಕಟಕ: ಯಾವುದೇ ಕೆಲಸ ಮಾಡುವುದಿದ್ದರೂ ಕುಟುಂಬದ ಹಿರಿಯರೊಡನೆ ಸಮಾಲೋಚನೆ ನಡೆಸಿ. ದಾಯಾದಿಗಳಿಂದ ತೊಂದರೆ ಉಂಟಾಗುವ ಸಂಭವವಿದೆ. ಆರ್ಥಿಕ ಲಾಭಗಳಿದ್ದರೂ ಅಷ್ಟೇ ಖರ್ಚು ವೆಚ್ಚಗಳಿರಲಿವೆ.
 
ಸಿಂಹ: ಸಮಾಜದಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚಾಗಿ ಗೌರವ ಸಂಪಾದಿಸುವಿರಿ. ಆರ್ಥಿಕ ಲಾಭವಾಗಲಿದೆ. ಧರ್ಮ ಕಾರ್ಯಗಳಿಗಾಗಿ ಧನ ವಿನಿಯೋಗ ಮಾಡಿಕೊಳ್ಳಬೇಕಾದೀತು. ದೇವತಾ ಪ್ರಾರ್ಥನೆಯಿಂದ ನೆಮ್ಮದಿ.
 
ಕನ್ಯಾ: ಹೊಸ ವಾಹನ ಖರೀದಿಗೆ ಮುಂದಾಗುವಿರಿ. ಆದರೆ ಖರ್ಚುಗಳ ಬಗ್ಗೆ ಹಿಡಿತವಿರಲಿ. ವಿದ್ಯಾರ್ಥಿಗಳಿಗೆ ಇಂದು ಅತೀವ ಪ್ರಯತ್ನ ನಡೆಸಬೇಕಾದೀತು. ಹೊಸ ಜನರೊಂದಿಗೆ ವಿಶ್ವಾಸ ಬೆಳೆಸುವ ಮೊದಲು ಯೋಚಿಸಿ ಹೆಜ್ಜೆಯಿಡಿ.
 
ತುಲಾ: ವ್ಯವಹಾರಸ್ಥರಿಗೆ ಕೊಂಚ ಹಿನ್ನಡೆಯಾದೀತು. ಕುಲದೇವರಿಗೆ ಪ್ರಾರ್ಥನೆ ಮಾಡಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಖರ್ಚು ವೆಚ್ಚಗಳು ಅಧಿಕವಾದೀತು. ಆದರೆ ಕುಟುಂಬದವರೊಂದಿಗೆ ನೆಮ್ಮದಿಯ ವಾತಾವರಣ ಅನುಭವಿಸುವಿರಿ.
 
ವೃಶ್ಚಿಕ: ಪ್ರೇಮಿಗಳಿಗೆ ಶುಭ ದಿನ. ದಂಪತಿಗಳು ಸರಸದ ಸಮಯ ಕಳೆಯುವರು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು. ಹೊಸ ಮನೆ ಖರೀದಿ ಬಗ್ಗೆ ಯೋಚನೆ ಮಾಡುವಿರಿ. ಹಣಕಾಸಿನ ವ್ಯವಹಾರದ ಬಗ್ಗೆ ಎಚ್ಚರವಿರಲಿ.
 
ಧನು: ಕುಟುಂಬದವರೊಂದಿಗೆ ಪ್ರವಾಸ ಹೋಗುವಿರಿ. ಪ್ರಯಾಣದಲ್ಲಿ ಎಚ್ಚರ. ಆದಷ್ಟೂ ವಾಹನ ಚಾಲನೆ ಮಾಡದೇ ಇದ್ದರೆ ಒಳ್ಳೆಯದು. ಆರ್ಥಿಕ ಲಾಭವಾಗಿ ನೆಮ್ಮದಿ ಕಾಣುವಿರಿ.
 
ಮಕರ: ಬೇರೆ ಬೇರೆ ಮೂಲಗಳಿಂದ ಧನಾಗಮನವಾಗಿ ಸಂತಸ ಕಾಣುವಿರಿ. ಬರಬೇಕಿದ್ದ ಬಾಕಿ ಹಣ ಸಂದಾಯವಾಗುವುದು. ಮಕ್ಕಳ ಆರೋಗ್ಯದ ಬಗ್ಗೆ  ಚಿಂತೆ ಮಾಡಬೇಕಾಗಿ ಬರಬಹುದು. ಸಂಗಾತಿಯೊಂದಿಗೆ ಉಪಯುಕ್ತ ಸಮಯ ಕಳೆಯುವಿರಿ.
 
ಕುಂಭ: ಯಾವುದೇ ಹೆಜ್ಜೆಯಿಡಬೇಕಾದರೂ ಏಕಾಂಗಿ ನಿರ್ಧಾರ ಕೈಗೊಂಡರೆ ಕೈ ಸುಟ್ಟುಕೊಳ್ಳಬೇಕಾದ ಪರಿಸ್ಥಿತಿ ಬಂದೀತು. ಸಂಗಾತಿಯೊಡನೆ ಕಿರಿಕ್ ಮಾಡಿಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ.
 
ಮೀನ: ಸ್ನೇಹಿತರಿಂದ ವಂಚನೆಗೊಳಗಾಗುವ ಸಂಭವವಿದೆ. ಹಣಕಾಸಿನ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಯಾರಿಗೂ ಸಾಲ ಕೊಡಲು ಹೋಗಬೇಡಿ. ನೆಮ್ಮದಿಗಾಗಿ ಇಷ್ಟದೇವರ ಸನ್ನಿಧಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.              ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಆಯಾ ರಾಶಿಗನುಗುಣವಾಗಿ ಈ ವರ್ಷ ನಿಮ್ಮ ಉದ್ಯೋಗ ಭವಿಷ್ಯ ಹೇಗಿದೆ? ಉದ್ಯೋಗ ಭವಿಷ್ಯಕ್ಕಾಗಿ ಇಲ್ಲಿ ನೋಡಿ

ಬೆಂಗಳೂರು: ಈ ವರ್ಷ ನಿಮ್ಮ ಉದ್ಯೋಗ ಭವಿಷ್ಯ ಹೇಗಿದೆ? ಯಾವ ಉದ್ಯೋಗ ನಿಮಗೆ ಲಾಭ ಕೊಡುವುದು, ನಷ್ಟ ...

news

ಜಾತಕದಲ್ಲಿ ಈ ಯೋಗವಿದ್ದರೆ ವಿದ್ಯೆ ತಲೆಗೆ ಹತ್ತುತ್ತದೆ!

ಬೆಂಗಳೂರು: ವಿದ್ಯಾಭ್ಯಾಸದಲ್ಲಿ ಮಕ್ಕಳು ಮುಂದಿರಬೇಕು ಎನ್ನುವುದು ಎಲ್ಲಾ ಪೋಷಕರ ಆಸೆ. ಅದಕ್ಕೆ ಸರಸ್ವತಿ ...

news

ದಿನಕ್ಕೊಂದು ರಾಶಿ: ಮೇಷ ರಾಶಿಯ ದಂಪತಿ ಜಗಳವಾಡುತ್ತಿದ್ದರೆ ಪರಿಹಾರವೇನು?

ಬೆಂಗಳೂರು: ವಿವಾಹ ಜೀವನದ ಯಶಸ್ಸಿಗೆ ದಂಪತಿಯ ಜಾತಕ ಹೊಂದಾಣಿಕೆಯೂ ಕಾರಣವಾಗುತ್ತದೆ. ಇಂದಿನಿಂದ ಒಂದೊಂದು ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.