ಹೊಸ ವರ್ಷದ ಹೊಸ ದಿನ ಹೇಗಿರುತ್ತೆ? ರಾಶಿ ಭವಿಷ್ಯ

ಬೆಂಗಳೂರು| Krishnaveni K| Last Modified ಮಂಗಳವಾರ, 1 ಜನವರಿ 2019 (08:54 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 
ಮೇಷ: ಉದ್ಯೋಗಿಗಳಿಗೆ ಆರ್ಥಿಕ ಲಾಭ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲವಿಲ್ಲದೇ ಕೆಲಸ ಸಾಗದು. ಸಂಗಾತಿಯ ಮಾತುಗಳಿಗೆ ಕಿವಿಗೊಡಬೇಕಾದೀತು. ಹಿರಿಯರ ಮಾತಿಗೆ ಮನ್ನಣೆ ಕೊಡಿ.
 
ವೃಷಭ: ವಾಹನ ಖರೀದಿ ಯೋಗವಿದ್ದು, ಲಾಭವಾಗಲಿದೆ. ಮನೆಗೆ ಹೊಸ ವಸ್ತುಗಳನ್ನು ಖರೀದಿ ಮಾಡಲು ಆಸಕ್ತಿ ವಹಿಸುವಿರಿ. ಯಾವುದಕ್ಕೂ ಮೊದಲು ಕುಟುಂಬದವರೊಂದಿಗೆ ಚರ್ಚಿಸಿ ಮುಂದುವರಿಯಿರಿ.
 
ಮಿಥುನ: ಸಂಗಾತಿಯ ಮಾತಿಗೆ ಕಿವಿಗೊಟ್ಟು ನಡೆದರೆ ಅಂದುಕೊಂಡ ಕಾರ್ಯದಲ್ಲಿ ಜಯ ಸಿಗುವುದು. ಬಂಧು ಮಿತ್ರರಿಂದ ಶುಭ ಸುದ್ದಿ. ದೂರ ಸಂಚಾರದ ಯೋಗವಿದೆ.
 
ಕರ್ಕಟಕ: ಕೈ ಹಿಡಿದ ವ್ಯವಹಾರದಲ್ಲಿ ಲಾಭ ಪಡೆಯುವಿರಿ. ಆದರೆ ಹಿತಶತ್ರುಗಳ ಬಗ್ಗೆ ಎಚ್ಚರವಿರಲಿ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡುವಿರಿ. ದೇವರ ಪ್ರಾರ್ಥನೆಯಿಂದ ದಿನದಂತ್ಯಕ್ಕೆ ಇನ್ನಷ್ಟು ಶುಭ ಸುದ್ದಿ.
 
ಸಿಂಹ: ಎಷ್ಟೋ ದಿನದಿಂದ ಬಾಕಿ ಇದ್ದ ಸಾಲ ಮರುಪಾವತಿಯಾಗುವುದು. ವ್ಯವಹಾರದಲ್ಲಿ ಆರ್ಥಿಕ ಲಾಭ ಸಿಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರಕಲಿದೆ. ದೂರ ಸಂಚಾರ ಕೈಗೊಳ್ಳುವಿರಿ.
 
ಕನ್ಯಾ: ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿದೆ. ಆರ್ಥಿಕ ಲಾಭವಾಗಿ ಅಂದುಕೊಂಡ ಕಾರ್ಯಗಳನ್ನು ಸುಲಭವಾಗಿ ನೆರವೇರಿಸುವಿರಿ. ಹೊಸ ವ್ಯವಹಾರಗಳಿಗೆ ಕೈ ಹಾಕುವ ಮುನ್ನ ಎಚ್ಚರವಾಗಿರಿ.
 
ತುಲಾ: ಅವಿವಾಹಿತರಿಗೆ ಕಂಕಣ ಬಲ, ಪ್ರೇಮಿಗಳಿಗೆ ಶುಭ ಸುದ್ದಿ ಸಿಗಲಿದೆ. ಹೊಸ ವ್ಯವಹಾರಗಳಲ್ಲಿ ಹೂಡಿಕೆ ಮಾಡುವಿರಿ. ಖರೀದಿ ವ್ಯವಹಾರ ಮಾಡುವಾಗ ವಂಚನೆಗೊಳಗಾದಂತೆ ಮುನ್ನೆಚ್ಚರಿಕೆ ಕೈಗೊಳ್ಳಿ.
 
ವೃಶ್ಚಿಕ: ದೂರದ ಬಂಧುಗಳಿಗೆ ಬೇಡದ ವಿಚಾರಕ್ಕೆ ಕಿರಿ ಕಿರಿ ಎದುರಿಸುವಿರಿ. ಮನೆಯಲ್ಲಿ ಹಿರಿಯರಿದ್ದರೆ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಅನವಶ್ಯಕವಾಗಿ ಅಪವಾದಕ್ಕೆ ಗುರಿಯಾಗುವ ಸಾಧ್ಯತೆಯಿದೆ, ಎಚ್ಚರಿಕೆಯಿರಲಿ.
 
ಧನು: ದೇವತಾ ಪ್ರಾರ್ಥನೆ, ದೇವಾಲಯಗಳಿಗೆ ಭೇಟಿ ಕೊಡುವುದು ಇತ್ಯಾದಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ನೀವು ಮಾಡುವ ಕೆಲಸದಲ್ಲಿ ನಿಮಗೆ ಪ್ರಶಂಸೆ ಸಿಗಲಿದೆ. ಎಷ್ಟೋ ದಿನದಿಂದ ಬಾಕಿಯಿದ್ದ ಕೆಲಸಗಳು ನೆರವೇರುವುದು.
 
ಮಕರ: ಶೀತ ಸಂಬಂಧೀ ಅನಾರೋಗ್ಯ ಕಾಡಬಹುದು. ಶತ್ರುಕಾಟದಿಂದ ಮಾನಸಿಕವಾಗಿ ನೊಂದುಕೊಳ್ಳುವಂತಹ ಪರಿಸ್ಥಿತಿ ಬರಬಹುದು. ಪರಿಶ್ರಮ ಪಟ್ಟಲ್ಲಿ ಮಾತ್ರ ಫಲ ಸಿಗುವುದು. ದಿನದಂತ್ಯಕ್ಕೆ ನೆಮ್ಮದಿ.
 
ಕುಂಭ: ಎಷ್ಟೇ ಪರಿಶ್ರಮಪಟ್ಟರೂ ಫಲ ಸಿಗದೇ ನಿರಾಶೆ ಅನುಭವಿಸಬೇಕಾದೀತು. ವ್ಯವಹಾರಗಳಲ್ಲಿ ಆರ್ಥಿಕ ಲಾಭವಿದ್ದರೂ, ಕೆಲವು ಆರಂಭಿಕ ವಿಘ್ನಗಳನ್ನೂ ಎದುರಿಸಬೇಕಾದೀತು. ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ.
 
ಮೀನ: ಹೊಸ ವಸ್ತುಗಳ ಖರೀದಿಗೆ ನೀರಿನಂತೆ ಹಣ ಖರ್ಚು ಮಾಡಬೇಕಾದೀತು. ಆದರೆ ಅಷ್ಟೇ ಆದಾಯವೂ ಇರುವುದರಿಂದ ತಲೆಕೆಡಿಸಿಕೊಳ್ಳಬೇಕಿಲ್ಲ. ಸಾಂಸಾರಕವಾಗಿ ಕಿರಿ ಕಿರಿ ಇದ್ದೀತು. ಧೈರ್ಯದಿಂದ ಎದುರಿಸಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.                          


ಇದರಲ್ಲಿ ಇನ್ನಷ್ಟು ಓದಿ :