ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಸಾಂಸಾರಿಕವಾಗಿ ಕಿರಿ ಕಿರಿ ತಪ್ಪದು. ಮಕ್ಕಳ ಕಾರಣಕ್ಕೆ ಸಂಗಾತಿ ಜತೆ ಕಲಹ. ತಾಳ್ಮೆಯಿಂದ ನಿಭಾಯಿಸಿದರೆ ಎಲ್ಲರಿಗೂ ನೆಮ್ಮದಿ. ಆಪ್ತೇಷ್ಟರ ಸಹಕಾರ ಸಿಗಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ.ವೃಷಭ: ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದು ಆಸ್ಪತ್ರೆಗೆ ಅಲೆದಾಡಬೇಕಾದೀತು. ಉದ್ಯೋಗದಲ್ಲಿ ಮುನ್ನಡೆಯ ಸಂಭವವಿದೆ. ಖರ್ಚು ವೆಚ್ಚಗಳು ಅಧಿಕವಾದೀತು. ಮಿಥುನ: ದೊಡ್ಡ ಗಂಡಾಂತರವೊಂದರಿಂದ ಕೂದಲೆಳೆಯ ಅಂತರದಲ್ಲಿ ಪಾರಾಗುವಿರಿ. ಮಂಗಲ ಕಾರ್ಯಗಳನ್ನು ನೆರವೇರಿಸುವಿರಿ.