ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಶುಕ್ರವಾರ, 11 ಜನವರಿ 2019 (08:46 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ನಿಮ್ಮ ಮಾತಿನ ಜಾ‍ಣ್ಮೆ, ಸರಳವಾದ ನಡೆ ನುಡಿಗಳಿಂದ ಜನರ ಪ್ರಶಂಸೆ ಪಡೆಯುವಿರಿ. ಉದ್ಯೋಗಾವಕಾಶಗಳು ಬರುವುದು. ಸಂಗಾತಿಯಿಂದ ಪ್ರಶಂಸೆಗೊಳಗಾಗುವಿರಿ. ಆರ್ಥಿಕ ಸಮಸ್ಯೆ ಕಡಿಮೆಯಾಗುವುದು.
 
ವೃಷಭ: ಸಾಕಷ್ಟು ಒತ್ತಡಗಳಿಂದಾಗಿ ತಾಳ್ಮೆ ಕಳೆದುಕೊಳ್ಳುವಿರಿ. ಮನೋನಿಯಾಮಕ ರುದ್ರದೇವರನ್ನು, ದುರ್ಗಾಸುಳಾದಿಯನ್ನು ಏಕ ಮನಸ್ಸಿನಿಂದ ಭಜಿಸಿ.
 
ಮಿಥುನ: ಸಾಕ್ಷಾತ್ ಗುರುವೇ ನಿಮ್ಮ ಬಳಿ ಬಂದು ನಿಮ್ಮನ್ನು ತಿದ್ದುವುದಿಲ್ಲ. ಮನೆಯ ಹಿರಿಯರ ರೂಪದಲ್ಲಿ ಸಕಾಲಕ್ಕೆ ಎಚ್ಚರಿಕೆ, ಸಲಹೆ ಪಡೆಯುವಿರಿ. ಅದನ್ನು ಅರ್ಥ ಮಾಡಿಕೊಳ್ಳಬೇಕಷ್ಟೆ. ಹೀಗಾಗಿ ಹಿರಿಯರ ಬಗ್ಗೆ ಉದಾಸೀನ ಬೇಡ.
 
ಕರ್ಕಟಕ: ದಿಡೀರಾಗಿ ಅನೇಕ ಸಮಸ್ಯೆಗಳು ಎದುರಾಗಲಿವೆ. ವಿದೇಶದಿಂದ ಬರುವ ಸುದ್ದಿಯೊಂದು ನಿಮಗೆ ಸಂತಸವುಂಟುಮಾಡುತ್ತದೆ. ವಿವಿಧ ಮೂಲಗಳಿಂದ ಹಣಕಾಸು ಒದಗಿ ಬಂದು ಅಂದುಕೊಂಡ ಕಾರ್ಯಗಳು ನೆರವೇರುವುದು.
 
ಸಿಂಹ: ಸಂಕಷ್ಟಗಳನ್ನು ಎದುರಿಸುವ ನಿಮ್ಮ ಎದೆಗಾರಿಕೆ ನಿಮ್ಮನ್ನು ಕಾಪಾಡುವುದು. ಎಲ್ಲವನ್ನೂ ನಗುತ್ತಾ ನಿಭಾಯಿಸುವ ನಿಮ್ಮ ಗುಣ ಅನುಕರಣೀಯವಾದುದು. ಆದರೆ ನಿಮ್ಮ ಮನೆ ಮಂದಿಯಿಂದಲೇ ಇಂದು ನಿಮಗೆ ಕಿರಿ ಕಿರಿ ಆಗಬಹುದು.
 
ಕನ್ಯಾ: ಬಹುವಿಧದ ಪ್ರತಿಭೆ ಅನಾವರಣಗೊಳ್ಳುವುದು. ನಿಮ್ಮ ನಿರೀಕ್ಷೆಯಂತೇ ಕೆಲಸ ಕಾರ್ಯಗಳು ನಡೆದು ಮನಸ್ಸಿಗೆ ನೆಮ್ಮದಿಯಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುತ್ತದೆ.
 
ತುಲಾ: ಗುಂಡಿಗೆ ಬಿದ್ದಾಗ ಆಳಿಗೊಬ್ಬ ಕಲ್ಲು ಎಂಬಂತೆ ನಿಮ್ಮ ತಪ್ಪುಗಳನ್ನು ಎತ್ತಿ ತೋರಿಸುವವರಿರುತ್ತಾರೆ. ಇದು ಒಂದು ರೀತಿಯ ಪರೀಕ್ಷಾ ಕಾಲ. ತಾಳ್ಮೆಯಿಂದಿರಿ. ದೇವರನ್ನು ಪ್ರಾರ್ಥಿಸಿ.
 
ವೃಶ್ಚಿಕ: ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟ ತಕರಾರುಗಳನ್ನು ಹಿರಿಯರ ಮೂಲಕ ಸರಿಪಡಿಸಿಕೊಳ್ಳಿ. ಕೋರ್ಟು ಕಲಾಪವೆಂದು ಹೋದರೆ ನಿಮಗೇ ತೊಂದರೆ.
 
ಧನು: ಸಂಶಯಾತ್ಮ ವಿನಶ್ಯತಿ ಎನ್ನುವಂತೆ ಕೆಲಸ ಕಾರ್ಯಗಳಲ್ಲಿ  ಅನಗತ್ಯ ಸಂಶಯವನ್ನು ಹುಟ್ಟುಹಾಕುವುದರಿಂದ ಸಕಾಲದಲ್ಲಿ ಕೆಲಸ ಪೂರೈಸಲು ಆಗುವುದಿಲ್ಲ. ಇದರಿಂದ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಿರಿ.
 
ಮಕರ: ಧೂರ್ತರನ್ನು ಸಾಮ, ದಾನ, ಭೇದ, ದಂಡ ಎಂಬ ಚತುರೋಪಾಯಗಳಿಂದ ಎದುರಿಸಬೇಕು. ಕೆಲಸ ಮಾಡುವ ನಿಮ್ಮ ಕಚೇರಿಯಲ್ಲಿ ಅನಗತ್ಯ ಕಿರುಕುಳ ಎದುರಾದೀತು. ಅದಕ್ಕೆ ಅಂಜದೇ ಸೂಕ್ತ ರೀತಿಯಲ್ಲಿ ಉತ್ತರಿಸಿ.
 
ಕುಂಭ: ಮನೆಯ ಸಮಸ್ಯೆಗಳನ್ನು ಮನೆಯೊಳಗೇ ಬಗೆಹರಿಸಿಕೊಳ್ಳುವುದು ಉತ್ತಮ. ಸಮಸ್ಯೆಗಳಿಗೆ ನೀವು ಸೂಚಿಸುವ ಪರಿಹಾರ ಎಲ್ಲರಿಗೂ ಮೆಚ್ಚುಗೆಯಾಗಿ ಸಮಸ್ಯೆಗಳು ಪರಿಹಾರವಾಗುವುದು.
 
ಮೀನ: ಮನೆಯಲ್ಲಿ ಕಿರಿ ಕಿರಿ ಇರುವುದು. ಆದರೆ ಮಿತ್ರರ ಸಹಕಾರ ದೊರೆಯುವುದು. ನಿಮ್ಮ ಕಾರ್ಯಗಳಿಗೆ ಮಿತ್ರರಿಂದ ಶಹಬ್ಬಾಶ್ ಗಿರಿ ಪಡೆಯುವಿರಿ. ನಿಮ್ಮ ಹಳೆಯ ಗೆಳೆಯರನ್ನು ಭೇಟಿ ಮಾಡುವಿರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಶನಿವಾರ ಹೀಗೆ ಮಾಡುವುದರಿಂದ ಶನಿಪ್ರಭಾವ ಕಡಿಮೆಯಾಗುತ್ತದೆ

ಬೆಂಗಳೂರು: ಶನಿ ದೆಸೆಯಿಂದಾಗಿ ಎಲ್ಲವೂ ಕೆಡುಕಾಗುತ್ತಿದೆ, ಕಷ್ಟ ಕಾಲ ಬೆನ್ನ ಹಿಂದೆಯೇ ಇದೆ ಎಂಬ ಚಿಂತೆಯೇ? ...

news

ದಿನಕ್ಕೊಂದು ರಾಶಿ: ಧನು ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?

ಬೆಂಗಳೂರು: ಧನು ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ಅದಕ್ಕಿರುವ ...

news

ಮೇಷ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?

ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ಮೇಷ ರಾಶಿಯವರ ಗುಣ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.