ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಮನೆಯಲ್ಲಿ ಸಣ್ಣಪುಟ್ಟ ಕಿರಿ ಕಿರಿ ಇದ್ದೇ ಇರುತ್ತದೆ. ಆದರೆ ಮೌನವೇ ಎಲ್ಲದಕ್ಕೂ ಪರಿಹಾರ. ಮಾಡಬೇಕಾದ ಕೆಲಸಗಳಲ್ಲಿ ಕೊಂಚ ಉದಾಸೀನತೆ ಕಂಡುಬಂದೀತು. ಆದರೆ ಧನಲಾಭವಾಗಲಿದೆ. ಸಾಲ ಮರುಪಾವತಿಯಾಗಲಿದೆ. ಹೊಸ ವಸ್ತು ಖರೀದಿ ಮಾಡಲಿದ್ದೀರಿ.ವೃಷಭ: ಎಷ್ಟೋ ದಿನದಿಂದ ಬಾಕಿಯಿದ್ದ ಸಮಸ್ಯೆಗಳಿಗೆ ಇಂದು ಮುಕ್ತಿ ಸಿಗಲಿದೆ. ಹಳೆಯ ಗೆಳೆಯರನ್ನು ಭೇಟಿಯಾಗುವಿರಿ. ನೂತನ ದಂಪತಿಗಳು ಸರಸದ ಕ್ಷಣ ಕಳೆಯುವರು. ಪ್ರೇಮಿಗಳಿಗೆ ಹಿರಿಯರಿಂದ ಕೊಂಚ ಅಡೆತಡೆ