ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಸೋಮವಾರ, 14 ಜನವರಿ 2019 (08:47 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಆದಾಯದಷ್ಟೇ ಖರ್ಚು ವೆಚ್ಚಗಳೂ ತಲೆದೋರಲಿವೆ. ಹಿರಿಯರ ನಡವಳಿಕೆಯಿಂದ ಮನಸ್ಸಿಗೆ ಬೇಸರವಾಗಲಿದೆ. ವ್ಯವಹಾರ, ಉದ್ಯೋಗದಲ್ಲೂ ನಿರೀಕ್ಷಿತ ಸಮಾಧಾನ ಸಿಗದು. ಆದರೆ ದಿನದಂತ್ಯಕ್ಕೆ ಶುಭವಾಗುವುದು.
 
ವೃಷಭ: ಮನೆಯಲ್ಲಿ ಮಂಗಲ ಕಾರ್ಯ ನೆರವೇರಿಸಲು ಓಡಾಟ ನಡೆಸುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಸಂಗಾತಿಯೊಂದಿಗೆ ಮನಸ್ತಾಪಗಳು ದೂರವಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗುವುದು.
 
ಮಿಥುನ: ಮನೆಯಲ್ಲಿ ಬೆಲೆ ಬಾಳುವ ವಸ್ತು ತಂದಿರಿಸದೇ ಇರುವುದೇ ಒಳ್ಳೆಯದು. ಕಚೇರಿಯಲ್ಲಿ ಮೇಲಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾದೀತು. ಸಂಗಾತಿಯೊಂದಿಗೆ ಕಿರಿ ಕಿರಿ ಮಾಡಿಕೊಳ್ಳುವಿರಿ.
 
ಕರ್ಕಟಕ: ಉದ್ಯೋಗದಲ್ಲಿ ಮುನ್ನಡೆ ಸಾಧಿಸುವಿರಿ. ಧನ ಲಾಭ ಯೋಗವಿದೆ. ಸ್ತ್ರೀಯರಿಂದ ಶುಭವಾಗುವುದು. ಮನೆ ಖರ್ಚುಗಳು ಹೆಚ್ಚಾಗುವುದು. ದೂರ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.
 
ಸಿಂಹ: ಮನೆಗೆ ಹೊಸ ವಸ್ತುಗಳ ಖರೀದಿ ಮಾಡುವಿರಿ. ಆದರೆ ಕೆಲಸದಲ್ಲಿ ಉದಾಸೀನತೆ ಕಂಡುಬರುವುದು. ಆರೋಗ್ಯ ಸಮಸ್ಯೆ ಉಲ್ಬಣಿಸಿ ಆಸ್ಪತ್ರೆಗೆ ಅಲೆದಾಡಬೇಕಾದೀತು. ಸ್ವ ಉದ್ಯೋಗಿಗಳಿಗೆ ಆರ್ಥಿಕ ಲಾಭವಾಗುವುದು.
 
ಕನ್ಯಾ: ಸಂಗಾತಿಯೊಂದಿಗೆ ಯಾವುದಾದರೂ ವಿಚಾರಕ್ಕೆ ಮನಸ್ತಾಪ ಮಾಡಿಕೊಳ್ಳುವಿರಿ. ಆದರೆ ಕಚೇರಿಯಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿ ಬಡ್ತಿ ಅನುಭವಿಸುವಿರಿ. ವಾಹನ ಚಲಾಯಿಸುವುದಿದ್ದರೆ ಎಚ್ಚರಿಕೆ ಅಗತ್ಯ.
 
ತುಲಾ: ಯಾವುದೇ ಕೆಲಸವಾದರೂ ಬುದ್ಧಿ ಉಪಯೋಗಿಸಿ ಮುನ್ನಡೆಯಿರಿ. ಆರ್ಥಿಕವಾಗಿ ಇದುವರೆಗಿದ್ದ ಅಡೆತಡೆಗಳು ನಿವಾರಣೆಯಾಗುವುದು. ಆದರೆ ಮೈ ಮರೆತು ಕೆಲಸ ಮಾಡಿ ವಿನಾಕಾರಣ ಆರೋಪಿಗಳಾಗುವ ಸಂಭವವಿದೆ. ಎಚ್ಚರಿಕೆ ಅಗತ್ಯ.
 
ವೃಶ್ಚಿಕ: ದಂಪತಿಗಳ ನಡುವೆ ಸಣ್ಣ ವಿಚಾರಕ್ಕೆ ಮನಸ್ತಾಪ ತಲೆದೋರುವುದು. ಆದರೆ ಶುಭ ಮಂಗಲ ಕಾರ್ಯ ನೆರವೇರಿಸಲು ಮುಂದಾಗುವಿರಿ. ಹಣಕಾಸಿನ ವಿಚಾರದಲ್ಲಿ ನಿಮ್ಮ ಅಜಾಗರೂಕತೆಯಿಂದ ನಷ್ಟವಾಗುವ ಸಂಭವವಿದೆ.
 
ಧನು: ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮನೆಯಲ್ಲಿ ಮದುವೆ ವಯಸ್ಸಿಗೆ ಬಂದವರಿದ್ದರೆ ಅವರ ವಿವಾಹಕ್ಕೆ ಪ್ರಯತ್ನ ಪಡುವಿರಿ. ಸಾಹಿತಿಗಳಿಗೆ ಉತ್ತಮ ದಿನ. ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.
 
ಮಕರ: ನೀವು ನಂಬಿಕೊಂಡಿದ್ದವರಿಂದಲೇ ಬೇಡದ ಮಾತು ಕೇಳಿ ಬಂದು ಮನಸ್ಸಿಗೆ ಬೇಸರವಾಗುವುದು. ಆದರೆ ಆರ್ಥಿಕವಾಗಿ ಲಾಭ ಪಡೆಯುವಿರಿ. ಮನೆಯವರ ಸಹಕಾರವೂ ಸಿಗುವುದರಿಂದ ಬೇಡದ ವಿಷಯಕ್ಕೆ ಚಿಂತೆ ಮಾಡಬೇಡಿ.
 
ಕುಂಭ: ಯಾವುದೇ ಕೆಲಸ ಮಾಡುವುದಿದ್ದರೂ ಸಂಗಾತಿಯ ಸಲಹೆ ಪಡೆಯುವುದು ಉತ್ತಮ. ಸಂಗಾತಿಯ ಸಲಹೆಯಿಂದ ಸಂಭಾವ್ಯ ಅಪಾಯ ತಪ್ಪುವುದು. ಆದರೆ ಕಾರ್ಯದೊತ್ತಡ ಹೆಚ್ಚಿ ದೇಹಾಯಾಸವಾಗುವುದು.
 
ಮೀನ: ತಾಳ್ಮೆಯಿಂದ ವರ್ತಿಸದಿದ್ದರೆ ಅಪಾಯ ತಪ್ಪಿದ್ದಲ್ಲ. ಸಂಬಂಧಗಳಲ್ಲಿ ಬಿರುಕು ಮೂಡದಂತೆ ಎಚ್ಚರವಹಿಸಿ. ಹಿತಶತ್ರುಗಳ ಕಾಟವಿರುವುದು. ಆದರೆ ಅದೆಲ್ಲವನ್ನೂ ಮೀರಿ ನಡೆಯಲು ದೇವತಾ ಪ್ರಾರ್ಥನೆ ಅಗತ್ಯ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಬೆಳ್ಳಿ ಆನೆ ಮನೆಯ ಈ ದಿಕ್ಕಿನಲ್ಲಿದ್ದರೆ ಧನಲಾಭ

ಬೆಂಗಳೂರು: ಆನೆ ಎನ್ನುವುದು ರಾಜ, ಶ್ರೀಮಂತಿಕೆಯ ಸಂಕೇತ. ಆನೆಯನ್ನೇ ಮನೆಯಲ್ಲಿ ತಂದು ಸಾಕುವುದು ಅಷ್ಟು ...

news

ದಿನಕ್ಕೊಂದು ರಾಶಿ: ಕುಂಭ ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?

ಬೆಂಗಳೂರು: ಕುಂಭ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ...

news

ಮಿಥುನ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?

ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ಮಿಥುನ ರಾಶಿಯವರ ಗುಣ ...