ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಶನಿವಾರ, 19 ಜನವರಿ 2019 (09:20 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ನಿಮ್ಮ ದುಡುಕು ವರ್ತನೆಯಿಂದ ಸಂಬಂಧ ಹಾಳಾಗುವುದು. ಸಂಗಾತಿಯ ಮನಸ್ಸಿಗೆ ಬೇಸರ ಮಾಡುವಿರಿ. ಆರೋಗ್ಯ ಹಾಳಾಗುವ ಸಾಧ್ಯತೆಯಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬಂದರೂ ಮನಸ್ಸಿಗೆ ಒಪ್ಪಿಗೆಯಾಗದು.
 
ವೃಷಭ: ಮನೆಗೆ ನೆಂಟರ ಆಗಮನವಾಗಲಿದ್ದು, ಖರ್ಚು ವೆಚ್ಚಗಳು ಹೆಚ್ಚಾಗುವುದು. ಉದ್ಯೋಗದಲ್ಲಿ ಮುನ್ನಡೆ ತೋರಿಬಂದೀತು. ವ್ಯವಹಾರಗಳಲ್ಲಿ ಜಯ ನಿಮ್ಮದಾಗುವುದು.
 
ಮಿಥುನ: ಹಿರಿಯರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಬೇಕಾಗಿದೆ. ಹಣಕಾಸಿನ ವ್ಯವಹಾಗಳಲ್ಲಿ ಜಯ ಸಿಗುವುದು. ಆರ್ಥಿಕ ಲಾಭ ಗಳಿಸುವಿರಿ. ಮಂಗಲ ಕಾರ್ಯಗಳು ನಿರೀಕ್ಷಿತವಾಗಿ ನೆರವೇರದು. ಹೀಗಾಗಿ ಮನಸ್ಸಿಗೆ ಕೊಂಚ ಕಿರಿ ಕಿರಿ ಆಗುವುದು.
 
ಕರ್ಕಟಕ: ಹಳೆಯ ಮಿತ್ರರನ್ನು ಭೇಟಿಯಾಗಿ ಮನಸ್ಸಿಗೆ ಸಂತಸವಾಗುವುದು. ಕೆಲಸ ಕಾರ್ಯಗಳಲ್ಲಿ ಮಿತ್ರರ ಸಹಕಾರ ದೊರೆಯುವುದು. ಆದರೆ ವಾದ ವಿವಾದಗಳಿಂದ ದೂರವಿರುವುದೇ ಒಳ್ಳೆಯದು.
 
ಸಿಂಹ: ನಿಮ್ಮ ಕೆಲಸ ಕಾರ್ಯಗಳಿಗೆ ಹಿರಿಯರ ಆಶೀರ್ವಾದ, ಒಪ್ಪಿಗೆ ಸಿಗಲಿದೆ. ಹೀಗಾಗಿ ಕೆಲಸ ಕಾರ್ಯಗಳಲ್ಲಿ ಜಯ ನಿಮ್ಮದಾಗಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದ ಅಗತ್ಯವಿದೆ.
 
ಕನ್ಯಾ: ಬೇಡದ ವಿಚಾರಕ್ಕೆ ಮೂಗು ತೂರಿಸಿ ತೊಂದರೆ ಮೈ ಮೇಲೆಳೆದುಕೊಳ್ಳುವಿರಿ. ಕೆಲವು ಅನಿರೀಕ್ಷಿತ ಘಟನೆಗಳು ನಿಮ್ಮ ಜೀವನದ ದಿಕ್ಕು ಬದಲಾಯಿಸಲಿದೆ. ಧನಾಗಮನವಿದ್ದರೂ ಅಷ್ಟೇ ಖರ್ಚು ವೆಚ್ಚಗಳು ತಲೆದೋರುವವು.
 
ತುಲಾ: ವಿದ್ಯಾರ್ಥಿಗಳಿಗೆ ಅಭ್ಯಾಸ ಬಲದಿಂದ ಯಶಸ್ಸು. ದೂರ ಸಂಚಾರ ನಡೆಸುವ ಸಾಧ್ಯತೆಯಿದೆ. ವಾಹನ ಚಾಲನೆ ಮಾಡುವುದಿದ್ದರೆ ಎಚ್ಚರಿಕೆ ಅಗತ್ಯ. ವೃತ್ತಿರಂಗದಲ್ಲಿ ನೀವು ಬಯಸಿದ ವಾತಾವರಣವಿರಲಿದೆ.
 
ವೃಶ್ಚಿಕ: ಉದ್ಯೋಗದಲ್ಲಿ ಅಧಿಕಾರಿಗಳ ಕಿರಿ ಕಿರಿ ಇರಲಿದೆ. ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡಬೇಕಾದೀತು. ಕಾರ್ಯಕ್ಷೇತ್ರದಲ್ಲಿ ನಿರೀಕ್ಷಿತ ಮುನ್ನಡೆ ಸಿಗದು. ದೇವತಾ ಆರಾಧನೆಯಿಂದ ದಿನದಂತ್ಯಕ್ಕೆ ಶುಭವಾಗಲಿದೆ.
 
ಧನು: ಅನವಶ್ಯಕ ಖರ್ಚುಗಳ ತಲೆದೋರುತ್ತವೆ. ಕುಟುಂಬದಲ್ಲಿ ಸಂಗಾತಿಯ ಸಹಕಾರ ಸಿಗಲಿದೆ. ಹೀಗಾಗಿ ಎಷ್ಟೇ ಕಾರ್ಯದೊತ್ತಡವಿದ್ದರೂ ಕುಟುಂಬದವರ ಬಲದಿಂದ ಆತ್ಮವಿಶ್ವಾಸದಿಂದ ಮುನ್ನುಗ್ಗುವಿರಿ.
 
ಮಕರ: ಅಪಘಾತವಾಗುವ ಭಯವಿದ್ದು, ವಾಹನ ಚಾಲನೆ ಮಾಡದೇ ಇರುವುದೇ ಒಳ್ಳೆಯದು. ಹಿರಿಯರು ಸೂಕ್ತ ಸಮಯದಲ್ಲಿ ಸಲಹೆ ನೀಡುವುದರಿಂದ ಸಂಭಾವ್ಯ ಸಂಕಷ್ಟದಿಂದ ಪಾರಾಗುವಿರಿ. ಅವಿವಾಹತರಿಗೆ ಕಂಕಣ ಬಲ ಕೂಡಿಬರುವುದು.
 
ಕುಂಭ: ವ್ಯಾಪಾರ ವ್ಯವಹಾರಗಳಲ್ಲಿ ಸಾಕಷ್ಟು ಲಾಭ ಕಂಡುಬಂದು ಆರ್ಥಿಕ ಮುಗ್ಗಟ್ಟುಗಳು ದೂರವಾಗುವುದು. ಆದಾಯ ಹೆಚ್ಚಿದಂತೇ ಖರ್ಚುಗಳೂ ಅಧಿಕವಾಗುವುದು. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ.
 
ಮೀನ: ಕಠಿಣ ಪರಿಸ್ಥಿತಿಯಲ್ಲಿ ಮಿತ್ರರ ಸಹಕಾರ ಸಿಕ್ಕಿ ಪರಿಸ್ಥಿತಿ ನಿಭಾಯಿಸಲು ಅನುಕೂಲವಾದೀತು. ಕುಟುಂಬದಲ್ಲಿ ನೆಮ್ಮದಿಗೆ ಭಂಗವಾಗುವ ಘಟನೆ ನಡೆಯಲಿದೆ. ತಾಳ್ಮೆಯಿಂದ ನಿಭಾಯಿಸಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.                          ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಮಕರ ರಾಶಿಯವರಿಗೆ ಈ ಸಂಖ್ಯೆ ಅದೃಷ್ಟ ತರುತ್ತದೆ!

ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಸಂಖ್ಯೆ ಅದೃಷ್ಟ ತರುತ್ತದೆ ಎಂದು ಸಂಖ್ಯಾ ಶಾಸ್ತ್ರದ ಪ್ರಕಾರ ...

news

ಹಸು-ಕರುವಿಗೆ ಈ ರೀತಿ ತೊಂದರೆ ಕೊಟ್ಟರೆ ಮುಂದಿನ ಜನ್ಮದಲ್ಲಿ ಈ ಪಾಪ ನಿಮಗೆ ಕಾಡುತ್ತದೆ!

ಬೆಂಗಳೂರು: ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ದೈವ ಸಮಾನ ಸ್ಥಾನವಿದೆ. ಪಶುವನ್ನು ದೇವರು ಎಂದು ಪೂಜಿಸುವ ನಾವು ...

news

ಲಕ್ಷ್ಮೀ ಕೃಪೆ ನಮಗೆಷ್ಟು ಮುಖ್ಯ ಗೊತ್ತಾ?

ಬೆಂಗಳೂರು: ಹಣವಿಲ್ಲದವನನ್ನು ಯಾರೂ ಮೂಸಿಯೂ ನೋಡುವುದಿಲ್ಲ ಎಂಬ ಮಾತಿದೆ.ಅದರಂತೆ ಲಕ್ಷ್ಮೀ ಕಟಾಕ್ಷ ನಮ್ಮ ...

news

ವೃಶ್ಚಿಕಾ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?

ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ವೃಶ್ಚಿಕಾ ರಾಶಿಯವರ ಗುಣ ...