ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಸೋಮವಾರ, 21 ಜನವರಿ 2019 (08:49 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಇಂದು ನಿಮಗೆ ವೈಯಕ್ತಿಕವಾಗಿ ಅಷ್ಟೇನೂ ಶುಭ ದಿನವಲ್ಲ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟುಗಳು ಎದುರಾಗುವುದು. ಕೆಲಸ ಕಾರ್ಯಗಳಲ್ಲಿ ಕೆಲವೊಂದು ವಿಘ್ನಗಳು ಎದುರಾದೀತು. ಆದರೆ ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ.
 
ವೃಷಭ: ಹಿರಿಯರನ್ನು ತೀರ್ಥ ಯಾತ್ರೆಗೆ ಕಳುಹಿಸುವಿರಿ. ವಿದ್ಯಾರ್ಥಿಗಳಿಗೆ ಕಠಿಣ ಪ್ರಯತ್ನದಿಂದ ಮಾತ್ರವೇ ಫಲ. ಹಣಕಾಸಿನ ಮುಗ್ಗಟ್ಟುಗಳು ದೂರವಾಗಿ ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ಇಷ್ಟವಸ್ತುಗಳನ್ನು ಖರೀದಿಸುವಿರಿ.
 
ಮಿಥುನ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ದಾಯಾದಿಗಳೊಂದಿಗೆ ಕಲಹವಾಗಬಹುದು. ಕುಟುಂಬದಲ್ಲಿ ಸಮಸ್ಯೆಗಳು ತಲೆದೋರಿ ಅಂದುಕೊಂಡ ಶುಭ ಕಾರ್ಯಗಳನ್ನ ಮುಂದೂಡಬೇಕಾದೀತು. ಹಿರಿಯರ ಸಲಹೆ ಪಡೆದು ಮುನ್ನಡೆಯಿರಿ.
 
ಕರ್ಕಟಕ: ಖರ್ಚು ವೆಚ್ಚಗಳಿದ್ದರೂ ಧನಾಗಮನಕ್ಕೇನೂ ಕೊರತೆಯಾಗದು. ತುಂಬಾ ದಿನದಿಂದ ಬಾಕಿಯಿದ್ದ ಹರಕೆಯನ್ನು ತೀರಿಸುವಿರಿ. ಸಂಗಾತಿಯ ಮಾತಿಗೆ ಕಿವಿಗೊಡಬೇಕಾದೀತು. ದಿನದಂತ್ಯಕ್ಕೆ ಶುಭ ಸುದ್ದಿ.
 
ಸಿಂಹ: ಉದ್ಯೋಗದಲ್ಲಿ ಮೇಲಧಿಕಾರಿಗಳ ಕೃಪೆಗೆ ಪಾತ್ರರಾಗಲಿದ್ದೀರಿ. ಸಹಜವಾಗಿ ಬಡ್ತಿ, ವೇತನ ಹೆಚ್ಚಳ ಸಾಧ್ಯತೆಯಿದೆ. ಆದರೆ ಸಹೋದ್ಯೋಗಿಗಳ ಕಿರಿ ಕಿರಿ ತಪ್ಪದು. ಖರ್ಚು ವೆಚ್ಚಗಳು ಅಧಿಕವಾಗುವುದು.
 
ಕನ್ಯಾ: ಮಕ್ಕಳಾಗಲು ಬಯಸುವ ದಂಪತಿಗೆ ಶುಭ ಸೂಚನೆಯಿದೆ. ದೇವರ ಪ್ರಾರ್ಥನೆ ಅಗತ್ಯ. ಮನೆಗೆ ಬೇಕಾದ ವಸ್ತುಗಳ ಖರೀದಿ ಮಾಡುವಿರಿ. ಆದರೆ ಹೊಸ ವ್ಯವಹಾರ ಮಾಡಲು ಸ್ವಲ್ಪ ದಿನ ತಡೆಯಿರಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
 
ತುಲಾ: ಹಿರಿಯರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ನಾನಾ ಮೂಲಗಳಿಂದ ಬರಬೇಕಿದ್ದ ಹಣ ಸಂದಾಯವಾಗಿ ಆರ್ಥಿಕ ಲಾಭ ಪಡೆಯುವಿರಿ. ದೇವಾಲಯವನ್ನು ಸಂದರ್ಶಿಸುವ ಸಾಧ್ಯತೆಯಿದೆ.
 
ವೃಶ್ಚಿಕ: ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರೆಯಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವುದು. ವೃತ್ತಿಯಲ್ಲೂ ಮುನ್ನಡೆ ಕಾಣುವಿರಿ. ಆರ್ಥಿಕವಾಗಿ ಕೊಂಚ ಹಿನ್ನಡೆಯಾದರೂ ಆತಂಕ ಪಡಬೇಕಿಲ್ಲ.
 
ಧನು: ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರುವುದು. ಶುಭಮಂಗಲ ಕಾರ್ಯಗಳನ್ನು ನೆರವೇರಿಸುವಿರಿ. ಆರೋಗ್ಯ ಹದಗೆಡುವ ಅಪಾಯವಿದೆ. ಸಂಗಾತಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಬಹುದು.
 
ಮಕರ: ವೃತ್ತಿ, ಆರ್ಥಿಕ, ವ್ಯವಹಾರಗಳಲ್ಲಿ ಚೇತರಿಕೆ ಕಂಡುಬಂದು ನೆಮ್ಮದಿ ಮೂಡುವುದು. ಅನಿರೀಕ್ಷಿತವಾಗಿ ಹಳೆಯ ಮಿತ್ರರೊಬ್ಬರನ್ನು ಭೇಟಿಯಾಗುವಿರಿ. ಆದರೆ ಹಿತಶತ್ರುಗಳಿಂದ ವಂಚನೆಗೊಳಗಾಗುವ ಅಪಾಯವಿದೆ ಎಚ್ಚರಿಕೆ.
 
ಕುಂಭ: ಆಸ್ತಿ ವ್ಯವಹಾರ, ಹೊಸ ವಸ್ತು ಖರೀದಿ ಮಾಡುವುದಿದ್ದರೆ ಇಂದೇ ಮಾಡುವುದು ಒಳ್ಳೆಯದು. ಮನೆಯಲ್ಲಿ ಅವಿವಾಹಿತರಾಗಿರುವವರಿದ್ದರೆ ಅವರ ಮದುವೆ ಸಲುವಾಗಿ ಓಡಾಟ ನಡೆಸುವಿರಿ. ಸಂಗಾತಿಯಿಂದ ಸಹಕಾರ ಸಿಗಲಿದೆ.
 
ಮೀನ: ಅನವಶ್ಯಕವಾಗಿ ಅಪವಾದಕ್ಕೆ ಗುರಿಯಾಗಬೇಕಾದೀತು. ಆದರೆ ದೇವರು ನಿಮ್ಮ ಕೈ ಬಿಡಲ್ಲ. ಪ್ರಯತ್ನಕ್ಕೆ ತಕ್ಕ ಫಲ ಸಿಗುವುದು. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸಂಬಂಧಿಸಿದಂತೆ ಓಡಾಟ ನಡೆಸಬೇಕಾಗುತ್ತದೆ ಮತ್ತು ನಿರೀಕ್ಷಿತ ಫಲಿತಾಂಶವೂ ದೊರೆಯಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಶನಿವಾರಗಳಂದು ಈ ಎಂಟು ವಸ್ತುಗಳನ್ನು ಖರೀದಿಸಿದರೆ ಅಪಾಯ ತಪ್ಪಿದ್ದಲ್ಲ!

ಬೆಂಗಳೂರು: ಶನಿವಾರ ಎಂಬುದು ಶನಿ ಗ್ರಹನ ವಾರ. ಈ ದಿನ ಕೆಲವು ವಸ್ತುಗಳನ್ನು ಖರೀದಿ ಮಾಡುವುದು ಮನೆಗೆ, ಮನೆಯ ...

news

ಮಹಿಳೆಯರ ಹುಬ್ಬು ಹೀಗಿದ್ದರೆ ಭವಿಷ್ಯ ಹೀಗಿರುತ್ತದೆ!

ಬೆಂಗಳೂರು: ಮಹಿಳೆಯರ ಮನಸ್ಸು ಮೀನಿನ ಹೆಜ್ಜೆಗಿಂತಲೂ ಸೂಕ್ಷ್ಮ ಎಂಬ ಮಾತಿದೆ. ಆದರೆ ಮಹಿಳೆಯರ ಮುಖದ ...

news

ಧನು ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?

ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ಧನು ರಾಶಿಯವರ ಗುಣ ...