ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಮಂಗಳವಾರ, 22 ಜನವರಿ 2019 (08:50 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ವೃತ್ತಿ ಜೀವನದಲ್ಲಿ ಎಷ್ಟೋ ದಿನದಿಂದ ಇದ್ದ ಗೊಂದಲಗಳು ಇಂದು ನಿವಾರಣೆಯಾಗುವುದು. ಅಧಿಕಾರಿ ವರ್ಗದವರಿಂದ ಕಿರಿ ಕಿರಿ ಇದ್ದರೂ ನಿಮ್ಮ ಏಳಿಗೆಯನ್ನು ತಡೆಯಲಾಗದು. ಆರ್ಥಿಕ ಪರಿಸ್ಥಿತಿಯೂ ಸುಧಾರಿಸುವುದು.
 
ವೃಷಭ: ಆರ್ಥಿಕ ಲಾಭವಾಗಿ ಸಾಲಬಾಧೆಗಳು ನಿವಾರಣೆಯಾಗುವುದು. ಕುಟುಂಬದಲ್ಲಿ ಕೆಲವೊಂದು ವಿಚಾರಕ್ಕೆ ಭಿನ್ನಾಭಿಪ್ರಾಯಗಳಿದ್ದರೂ ಮಂಗಲ ಕಾರ್ಯ ನೆರವೇರಿಸುವಿರಿ. ಆರೋಗ್ಯದಲ್ಲೂ ಸುಧಾರಣೆಯಾಗಲಿದೆ.
 
ಮಿಥುನ: ಹೊಸ ವ್ಯವಹಾರಕ್ಕೆ ಕೈ ಹಾಕುವುದಿದ್ದರೆ ಇಂದು ಅಷ್ಟೊಂದು ಒಳ್ಳೆಯ ದಿನವಲ್ಲ. ನಂಬಿದವರಿಂದಲೇ ವಂಚನೆಗೊಳಗಾಗುವ ಸಾಧ್ಯತೆಯಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.
 
ಕರ್ಕಟಕ: ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟುಗಳಿದ್ದಿದ್ದರೆ ಅದೆಲ್ಲವೂ ಇಂದು ನಿವಾರಣೆಯಾಗಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವುದು. ವ್ಯವಹಾರದಲ್ಲಿ ಜಯ ಸಿಕ್ಕು, ನೆಮ್ಮದಿಯ ವಾತಾವರಣವಿರುವುದು.
 
ಸಿಂಹ: ವ್ಯಾಪಾರ, ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಸಕಾಲ. ಸಾಕಷ್ಟು ಲಾಭ ಗಳಿಸುವಿರಿ. ಆದರೆ ಹಿತಶತ್ರುಗಳ ಬಗ್ಗೆ ಎಚ್ಚರವಿರಬೇಕು. ಉದ್ಯೋಗಸ್ಥರಿಗೆ ಬಡ್ತಿ ಮತ್ತು ವೇತನ ಹೆಚ್ಚಳ ಸಾಧ್ಯತೆಯಿದೆ.
 
ಕನ್ಯಾ: ಹಳೆಯ ಸಂಬಂಧವೊಂದು ನಿಮ್ಮನ್ನು ಹುಡುಕಿಕೊಂಡು ಬರಲಿದ್ದು, ಹೊಸ ಬೆಸುಗೆ ಮಾಡಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಸಂಸಾರದಲ್ಲಿ ಸುಖ ಕಾಣುವಿರಿ. ದಿನದಂತ್ಯಕ್ಕೆ ಮತ್ತಷ್ಟು ಶುಭಫಲ ಸಿಗುವುದು.
 
ತುಲಾ: ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ವ್ಯವಹಾರದಲ್ಲಿ ಭಾಗಿಯಾಗದೇ ಇರುವುದೇ ಒಳ್ಳೆಯದು. ನಂಬಿದವರಿಂದಲೇ ಕೆಟ್ಟ ಮಾತು ಕೇಳಿಬಂದೀತು. ಆದರೆ ಆರ್ಥಿಕವಾಗಿ ನಿಧಾನವಾಗಿ ಚೇತರಿಕೆ ಕಂಡುಬರುವುದು.
 
ವೃಶ್ಚಿಕ: ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲ ಸಿಗುವುದು. ಹಣಕಾಸಿನ ಬಗ್ಗೆ ಹೆಚ್ಚಿನ ಎಚ್ಚರಿಕೆ ಅಗತ್ಯ. ಕೆಲವರು ನಿಮಗೆ ಮೋಸ ಮಾಡಬಹುದು. ಆದರೆ ಮನಸ್ಸಿಗೆ ಬೇಡದ ಆಲೋಚನೆ ತಂದುಕೊಳ್ಳಬೇಡಿ.
 
ಧನು: ಎಷ್ಟೇ ಕಷ್ಟಗಳಿದ್ದರೂ ನಿಮ್ಮ ಸಮಯ ಪ್ರಜ್ಞೆ, ಜವಾಬ್ಧಾರಿಯುತ ನಡವಳಿಕೆಯಿಂದ ಅದನ್ನು ಸರಿಪಡಿಸುವಿರಿ. ಸಹೋದರರಿಂದ ಕೆಟ್ಟ ಮಾತು ಕೇಳಿಬಂದೀತು. ಆದರೆ ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಸತತ ಅಭ್ಯಾಸ ಅಗತ್ಯ.
 
ಮಕರ: ಅವಿವಾಹಿತರಿಗೆ ಮನಸ್ಸಿಗೆ ಒಪ್ಪಿಗೆಯಾಗುವಂತಹ ವಿವಾಹ ಪ್ರಸ್ತಾಪಗಳು ಬರಬಹುದು. ಶೈಕ್ಷಣಿಕ ಕ್ಷೇತ್ರದಲ್ಲಿ ವೃತ್ತಿಯಲ್ಲಿದ್ದವರಿಗೆ ಶುಭವಾಗಲಿದೆ. ಆದರೆ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ.
 
ಕುಂಭ: ಆರ್ಥಿಕ ಲಾಭ ಗಳಿಸುವಿರಿ. ತಾಳ್ಮೆಯಿಂದ ಮುನ್ನಡೆಯದೇ ಇದ್ದರೆ ಕುಟುಂಬದಲ್ಲೂ ಕಿರಿ ಕಿರಿ ತಪ್ಪದು. ಆರೋಗ್ಯ ಸಮಸ್ಯೆಗಳು ದೂರವಾಗಿ ಸಮಾಧಾನ ನೆಲೆಸಲಿದೆ. ಅಭಿಪ್ರಾಯಗಳಿಗೆ ಕಿವಿಗೊಡುವುದು ಮುಖ್ಯ.
 
ಮೀನ: ಮನೆಯಲ್ಲಿ ದೇವರಿಗೆ ಸಂಬಂಧಿಸಿದ ಶುಭ ಕಾರ್ಯಗಳನ್ನು ನೆರವೇರಿಸುವಿರಿ. ಇದರಿಂದಾಗಿ ಮನಸ್ಸಲ್ಲಿದ್ದ ಚಿಂತೆಗಳು ದೂರವಾಗುವುದು. ಪ್ರೇಮಿಗಳಿಗೆ ಶುಭ ದಿನ. ವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ತಕ್ಕ ಫಲ ಸಿಗದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.                          ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇವುಗಳನ್ನು ಉಡುಗೊರೆ ಕೊಟ್ಟರೆ ನಮಗೆ ಅದೃಷ್ಟ

ಬೆಂಗಳೂರು: ಯಾವುದ್ಯಾವುದೋ ಕಾರಣಕ್ಕೆ ನಮ್ಮ ಪ್ರೀತಿ ಪಾತ್ರರಿಗೆ,, ಗೌರವಕ್ಕೆ ಪಾತ್ರರಾದವರಿಗೆ ...

news

ಒಳ್ಳೆಯ ಉದ್ಯೋಗ ಸಿಗಲು ಪ್ರತಿ ನಿತ್ಯ ಹೀಗೆ ಮಾಡಿ

ಬೆಂಗಳೂರು: ಒಳ್ಳೆಯ ಉದ್ಯೋಗ, ಉತ್ತಮ ಜೀವನ ಎಲ್ಲರ ಕನಸು. ನೀವು ಮಾಡುವ ಉದ್ಯೋಗದಲ್ಲಿ ನಿರಾಶೆಯಾಗಿದೆಯೇ? ...

news

ಮಕರ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?

ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ಮಕರ ರಾಶಿಯವರ ಗುಣ ...

news

ಕುಂಭ ರಾಶಿಯವರಿಗೆ ಈ ಸಂಖ್ಯೆ ಅದೃಷ್ಟ ತರುತ್ತದೆ!

ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಸಂಖ್ಯೆ ಅದೃಷ್ಟ ತರುತ್ತದೆ ಎಂದು ಸಂಖ್ಯಾ ಶಾಸ್ತ್ರದ ಪ್ರಕಾರ ...