ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಶನಿವಾರ, 26 ಜನವರಿ 2019 (08:46 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಕಾರ್ಯದೊತ್ತಡದ ನಡುವೆ ಕುಟುಂಬಕ್ಕಾಗಿ ಸಮಯ ಮೀಸಲಿಡಲು ಹೆಣಗಾಡಬೇಕಾದೀತು. ಆದರೆ ಕೊನೆಯ ಗಳಿಗೆಯಲ್ಲಿ ಸಹಾಯ ಸಿಕ್ಕಿ ಗಂಡಾಂತರಗಳಿಂದ ಪಾರಾಗುವಿರಿ. ಆರ್ಥಿಕವಾಗಿ ಕೊಂಚ ಚೇತರಿಕೆ ಕಂಡುಬರುವುದು.
 
ವೃಷಭ: ದೂರದ ನೆಂಟರ ಆಗಮನದಿಂದ ಅನಗತ್ಯ ಖರ್ಚು ವೆಚ್ಚಗಳು ತಲೆದೋರಿದಾವು. ಬೇಡದ ಅಪವಾದಕ್ಕೆ ಗುರಿಯಾಗುವಿರಿ. ಆದರೆ ಯಾರಿಗೂ ಕಿವಿಗೊಡದೇ ಮುನ್ನಡೆಯಲು ಸಂಗಾತಿಯ ಸಹಕಾರ ಸಿಗುವುದು.
 
ಮಿಥುನ: ಮನೆಯಲ್ಲಿ ಶುಭ ಕಾರ್ಯ ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ. ಅವಿವಾಹಿತರಿಗೆ ಮನಸ್ಸಿಗೆ ಹಿಡಿಸುವ ಸಂಬಂಧಗಳು ಕೂಡಿಬರುತ್ತವೆ. ವಿದ್ಯಾರ್ಥಿಗಳಿಗೆ ಹೊಸ ಪ್ರಯತ್ನಕ್ಕೆ ಕೈ ಹಾಕುವ ಉತ್ಸಾಹ ಬರಲಿದೆ.
 
ಕರ್ಕಟಕ: ವಾಹನ ಚಾಲಕರು, ದೂರ ಸಂಚಾರ ಮಾಡುವವರು ಇಂದು ಪ್ರಯಾಣದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ. ಕಳ್ಳತನದ ಭೀತಿ ಇದೆ. ಹಲವು ದಿನಗಳಿಂದ ಇದ್ದ ಆರೋಗ್ಯ ಸಮಸ್ಯೆ ನಿವಾರಣೆಯಾಗಿ ನೆಮ್ಮದಿ ಮೂಡುವುದು.
 
ಸಿಂಹ: ಬೇಡದ ವಿಚಾರದಲ್ಲಿ ಮೂಗು ತೂರಿಸಲು ಹೋಗಬೇಡಿ. ಅಪವಾದಕ್ಕೆ ಗುರಿಯಾಗಬೇಕಾದೀತು. ಸಹೋದರರ ವ್ಯಾಜ್ಯಗಳನ್ನು ಬಗೆಹರಿಸಲು ಮುಂದಾಗಬೇಕಾದೀತು. ಆರ್ಥಿಕವಾಗಿ ಖರ್ಚು ವೆಚ್ಚಗಳೂ ಅಧಿಕವಾಗಲಿದೆ. ತಾಳ್ಮೆಯಿಂದ ಮುನ್ನಡೆಯಬೇಕು.
 
ಕನ್ಯಾ: ಸಮಾಜದಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚಲಿದೆ. ನೀವು ಮಾಡಿದ ಕಾರ್ಯಗಳಿಂದ ಪ್ರಶಂಸೆಗೊಳಗಾಗುವಿರಿ. ಉದ್ಯೋಗದಲ್ಲಿ ಮುನ್ನಡೆಯ ಲಾಭವಾಗಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಕೊಂಚ ಚಿಂತೆ ಮಾಡಬೇಕಾಗುತ್ತದೆ.
 
ತುಲಾ: ಮನೆಗಾಗಿ ಹೊಸ ವಸ್ತುಗಳ ಖರೀದಿ ಮಾಡುವಿರಿ. ಆದರೆ ಆಸ್ತಿ ವ್ಯವಹಾರಗಳಿದ್ದರೆ ಕೆಲ ದಿನ ಮುಂದೂಡುವುದು ಒಳ್ಳೆಯದು. ದೈವತಾ ಕಾರ್ಯಗಳನ್ನು ನೆರವೇರಿಸಲು ಮುಂದಾಗುವಿರಿ. ಆರ್ಥಕವಾಗಿ ಹಣಕಾಸಿ ಮುಗ್ಗಟ್ಟುಗಳು ದೂರವಾಗುವುದು.
 
ವೃಶ್ಚಿಕ: ಕುಟುಂಬದಲ್ಲಿ ನಿಮ್ಮ ಗೌರವ, ಸ್ಥಾನ ಮಾನ ಹೆಚ್ಚುವುದು. ನಿಮ್ಮ ಕೆಲಸಗಳಿಗೆ ಕೆಲವೊಂದು ವಿಘ್ನಗಳು ಎದುರಾದರೂ ಅಂತಿಮವಾಗಿ ಜಯ ನಿಮ್ಮದೇ. ವಿದ್ಯಾರ್ಥಿಗಳಿಗೆ ಕಠಿಣ ಪ್ರಯತ್ನ ಅಗತ್ಯ. ಹೊಸ ವಿಚಾರಗಳು ನಿಮ್ಮ ನೆಮ್ಮದಿಗೆ ಭಂಗ ತರುವುದು.
 
ಧನು: ದೂರ ಸಂಚಾರ ಕೈಗೊಳ್ಳುವಿರಿ. ಸಂಗಾತಿಯಿಂದ ಸಹಕಾರ ಸಿಗಲಿದೆ. ಎಷ್ಟೋ ದಿನದ ಬಳಿಕ ಆಪ್ತರೊಬ್ಬರು ನಿಮ್ಮನ್ನು ಭೇಟಿಯಾಗಲಿದ್ದಾರೆ. ಸಂಗಾತಿಯೊಡನೆ ಸರಸಮಯ ಕ್ಷಣ ಕಳೆಯುವಿರಿ. ದೇವರ ಪ್ರಾರ್ಥನೆ ಮಾಡಿ.
 
ಮಕರ: ಉದ್ಯೋಗದಲ್ಲಿ ಮೇಲಧಿಕಾರಿಗಳಿ ಕಿರಿ ಕಿರಿ ತಪ್ಪದು. ಆದರೆ ನಿಮ್ಮ ಬುದ್ಧಿವಂತಿಕೆಯಿಂದ ಸವಾಲುಗಳನ್ನು ಮೆಟ್ಟಿ ನಿಂತು ಪ್ರಶಂಸೆಗೊಳಗಾಗುವಿರಿ. ಅಧಿಕ ಧನಾಗಮನದ ಜತೆಗೆ ಅಷ್ಟೇ ಖರ್ಚೂ ತಲೆದೋರಲಿವೆ. ಹಳೆಯ ಮಿತ್ರರೊಬ್ಬರನ್ನು ಭೇಟಿಯಾಗುವಿರಿ.
 
ಕುಂಭ: ಹೊಸ ವ್ಯಾಪಾರ, ವ್ಯವಹಾರಗಳಿಗೆ ಕೈ ಹಾಕುವಿರಿ. ಆದರೆ ಯಾರನ್ನೂ ಅತಿಯಾಗಿ ನಂಬಬೇಡಿ. ಹಿತಶತ್ರುಗಳಿಂದ ವಂಚನೆಗೊಳಗಾಗುವ ಭೀತಿಯಿದೆ. ಸಂಗಾತಿಯೊಡನೆ ಮನಸ್ತಾಪ ಮಾಡಿಕೊಳ್ಳುವಿರಿ. ತಾಳ್ಮೆಯಿಂದ ನಿಭಾಯಿಸಿ.
 
ಮೀನ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಪ್ರೇಮಿಗಳಿಗೆ ಹಿರಿಯರಿಂದ ಒಪ್ಪಿಗೆ ಸಿಗಲಿದೆ. ಆರ್ಥಿಕವಾಗಿಯೂ ಸಾಕಷ್ಟು ಗಳಿಕೆ ಮಾಡಲಿದ್ದೀರಿ. ಅನಿರೀಕ್ಷಿತವಾಗಿ ಬಂಧು ಮಿತ್ರರು ಆಗಮಿಸಿ ಮತ್ತಷ್ಟು ಸಂತೋಷ ನೀಡುವರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.                          ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಸಪ್ಪೆ ವ್ರತ ಎಂದರೆ ಏನು ಗೊತ್ತಾ?! ಅದರ ಮಹತ್ವ ತಿಳಿಯಿರಿ!

ಬೆಂಗಳೂರು: ನಮ್ಮ ಹಿಂದೂ ಸಂಪ್ರದಾಯದಲ್ಲಿ ಏಕಾದಶಿ ಉಪವಾಸ, ಷಷ್ಠಿ ಉಪವಾಸ ಎಂದು ನಾನಾ ರೀತಿಯ ಉಪವಾಸ ವ್ರತಗಳ ...

news

ಋತುಗಳಿಗೆ ಅನುಸಾರವಾಗಿ ಆಹಾರ: ವಸಂತ ಋತುವಿನ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರು: ಪ್ರತಿಯೊಂದು ಋತುವಿಗೆ ಅನುಸಾರವಾಗಿ ನಮ್ಮ ಆಹಾರದ ನಿಯಮಗಳು ಬದಲಾಗಬೇಕು. ಹಾಗಿದ್ದರೆ ಮಾತ್ರ ...

news

ಪೂಜೆಯ ಪೂರ್ಣ ಫಲ ದೊರೆಯಬೇಕಾದರೆ ಹೀಗೆ ಮಾಡಬೇಕು

ಬೆಂಗಳೂರು: ಏನೇ ಪೂಜೆ ಪುನಸ್ಕಾರ ಮಾಡಿದರೂ ಆಡಂಭರ, ವೈಭವಕ್ಕಿಂತ ಅದನ್ನು ಎಷ್ಟು ಭಕ್ತಿಯಿಂದ, ...

news

ಕರ್ಕಟಕ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?

ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ...