ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಭಾನುವಾರ, 27 ಜನವರಿ 2019 (08:56 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಮನೆಗೆ ಬೇಕಾದ ವಸ್ತು ಖರೀದಿ, ಕೆಲಸ ಕಾರ್ಯಗಳಲ್ಲಿ ಒತ್ತಡಕ್ಕೊಳಗಾಗುವಿರಿ. ಆದರೆ ಮನೆಯವರ ಸಹಕಾರ ಸಿಗುವುದು. ಅನಿರೀಕ್ಷಿತ ಬಂಧು ಮಿತ್ರರ ಆಗಮನದಿಂದ ಮನಸ್ಸಿಗೆ ಸಂತಸವಾಗಲಿದೆ.
 
ವೃಷಭ: ಉದ್ಯೋಗ ನಿಮಿತ್ತ ದೂರ ಸಂಚಾರ ಕೈಗೊಳ್ಳುವ ಸಾಧ‍್ಯತೆಯಿದೆ. ಪ್ರಯಾಣದಲ್ಲಿ ಎಚ್ಚರವಾಗಿರುವುದು ಒಳ್ಳೆಯದು. ಕಳ್ಳತನದ ಭೀತಿಯಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು.
 
ಮಿಥುನ: ಹಿರಿಯರ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಅಲೆದಾಡಬೇಕಾದೀತು. ನಿರುದ್ಯೋಗಿಗಳು ಹೊಸ ಪ್ರಯತ್ನಕ್ಕೆ ಕೈ ಹಾಕುವರು. ಪ್ರೇಮಿಗಳಿಗೆ ಶುಭ ದಿನ. ದೇವರಿಗೆ ಸಂಬಂಧಿಸಿದ ಹರಕೆಗಳು ಬಾಕಿಯಿದ್ದರೆ ತೀರಿಸಿ.
 
ಕರ್ಕಟಕ: ಹೊಸ ವಾಹನ ಖರೀದಿ ಮಾಡಲಿದ್ದೀರಿ. ಆದಾಯವೂ ಹೆಚ್ಚಿ ಮನಸ್ಸಿಗೆ ಸಂತಸವಾಗಲಿದೆ. ಸಂಗಾತಿಯೊಂದಿಗೆ ಸರಸಮಯ ಕ್ಷಣ ಕಳೆಯುವಿರಿ. ಮಕ್ಕಳಾಗಲು ಬಯಸುವ ದಂಪತಿಗಳಿಗೆ ಶುಭ ಸುದ್ದಿಯಿದೆ.
 
ಸಿಂಹ: ಮನಸ್ಸಿಗೆ ಬೇಡದ ವಿಚಾರಗಳು ಕಿರಿ ಕಿರಿ ಉಂಟು ಮಾಡುತ್ತಿರುತ್ತವೆ. ಆದರೆ ದೇವತಾ ಪ್ರಾರ್ಥನೆಯಿಂದ ನೆಮ್ಮದಿ ಗಳಿಸಬಹುದು. ಆರೋಗ್ಯ ಸಮಸ್ಯೆಗಳು ಸುಧಾರಿಸಲಿದ್ದು, ಚಿಂತೆ ಮಾಡಬೇಕಿಲ್ಲ.
 
ಕನ್ಯಾ: ಗಾಳಕ್ಕೆ ಸಿಕ್ಕ ಮೀನಿನ ಪರಿಸ್ಥಿತಿಯಲ್ಲಿ ನಿಮ್ಮ ಮನಸ್ಸು ಇರಲಿದೆ. ಸಂಗಾತಿಯೊಡನೆ ಮನಸ್ತಾಪ ಮಾಡಿಕೊಳ್ಳುವಿರಿ. ತಾಳ್ಮೆಯಿಂದಿದ್ದರೆ ಎಲ್ಲವೂ ಸಹಜ ಸ್ಥಿತಿಗೆ ಬರಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ.
 
ತುಲಾ: ಅನಿರೀಕ್ಷಿತವಾಗಿ ಬರುವ ಸುದ್ದಿಯೊಂದು ನಿಮ್ಮ ಕುಟುಂಬದ ನೆಮ್ಮದಿಗೆ ಭಂಗ ತರಲಿದೆ. ದಾಯಾದಿಗಳಿಂದ ವಂಚನೆಗೊಳಗಾಗುವ ಸಾಧ್ಯತೆಯಿದೆ. ಆದರೆ ಮಿತ್ರರ ಸಹಕಾರ ದೊರೆತು ಸಂಕಷ್ಟಗಳನ್ನು ಎದುರಿಸುವಿರಿ.
 
ವೃಶ್ಚಿಕ: ವ್ಯಾಪಾರ ವ್ಯವಹಾರ ಮಾಡುವವರಿಗೆ ನಿವ್ವಳ ಲಾಭ ಸಿಗಲಿದೆ. ಆಸ್ತಿ ವ್ಯವಹಾರ ಮಾಡಲಿದ್ದೀರಿ. ಸಹೋದರರೊಂದಿಗೆ ಕೊಂಚ ಮನಸ್ತಾಪವಾದರೂ ಹಿರಿಯರ ಮಧ್ಯಸ್ಥಿಕೆಯಿಂದ ಸರಿ ಹೋಗುವುದು. ದಿನದಂತ್ಯಕ್ಕೆ ಶುಭ ಸುದ್ದಿ.
 
ಧನು: ನಿಮ್ಮ ಇಷ್ಟದ ವ್ಯಕ್ತಿಗಳು ಭೇಟಿ ಮಾಡಿ ಮನಸ್ಸಿಗೆ ಖುಷಿಯಾಗುವುದು. ದೂರ ಸಂಚಾರ ಮಾಡಲು ಸಿದ್ಧತೆ ಮಾಡಿಕೊಳ‍್ಳುವಿರಿ. ಹಾಗಿದ್ದರೂ ಮಾತಿನ ಮೇಲೆ ಕಡಿವಾಣವಿರಲಿ. ನಿಮ್ಮ ಮಾತು ಮನೆಯವರ ಮನಸ್ಸು ನೋಯಿಸೀತು.
 
ಮಕರ: ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಅವಕಾಶಗಳು ಬರಲಿವೆ. ಅವಿವಾಹಿತರಿಗೆ ವಿವಾಹ ಸಂಬಂಧಗಳು ಬಂದರೂ ಮನಸ್ಸಿಗೆ ಒಪ್ಪಿಗೆಯಾಗದು. ಆರ್ಥಿಕವಾಗಿ ಖರ್ಚು ವೆಚ್ಚ ಹೆಚ್ಚುವುದು. ಎಚ್ಚರಿಕೆ ಅಗತ್ಯ.
 
ಕುಂಭ: ಹಣಕಾಸಿನ ಮುಗ್ಗಟ್ಟು ದೂರ ಮಾಡಲು ಹಣ ಗಳಿಕೆಗೆ ನಾನಾ ದಾರಿ ಕಂಡುಕೊಳ್ಳುವಿರಿ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡುವಿರಿ. ಅವರ ಉದಾಸೀನತೆ ನಿಮ್ಮ ಮನೋಕ್ಲೇಶ ಹೆಚ್ಚಿಸೀತು. ಆದರೆ ಸದ್ಯಕ್ಕೆ ತಾಳ್ಮೆಯಿಂದ ಉತ್ತಮ ಸಮಯಕ್ಕಾಗಿ ಕಾಯುವುದೇ ಒಳ್ಳೆಯದು.
 
ಮೀನ: ಚಂಚಲ ಮನಸ್ಸಿನಿಂದ ಕಾರ್ಯ ಕೈಕೊಟ್ಟೀತು. ಹೀಗಾಗಿ ಮನೆಯವರ ಸಲಹೆ, ಸೂಚನೆಗೆ ಮನ್ನಣೆ ನೀಡಿದರೆ ಕೆಲಸ ಸುಗಮವಾಗುತ್ತದೆ. ಅನಿರೀಕ್ಷಿತವಾಗಿ ಬಂಧು ಮಿತ್ರರ ಅಗಮನವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಮಕ್ಕಳು ಪೋಷಕರಿಗೇ ಕೆಟ್ಟದು ಮಾಡಲು ಕಾರಣವೇನು ಗೊತ್ತಾ?

ಬೆಂಗಳೂರು: ನಾವು ಹಿಂದೆ ಮಾಡಿದ ಪಾಪದ ಫಲಗಳನ್ನು ಆ ಭಗವಂತ ಲೆಕ್ಕ ಇಟ್ಟುಕೊಂಡು, ಅದಕ್ಕೆ ಕಾಲ ಕಾಲಕ್ಕೆ ...

news

ಋತುಗಳಿಗೆ ಅನುಸಾರವಾಗಿ ಆಹಾರ: ಗ್ರೀಷ್ಮ ಋತುವಿನ ಬಗ್ಗೆ ತಿಳಿಯಿರಿ

ಬೆಂಗಳೂರು: ಪ್ರತಿಯೊಂದು ಋತುವಿಗೆ ಅನುಸಾರವಾಗಿ ನಮ್ಮ ಆಹಾರದ ನಿಯಮಗಳು ಬದಲಾಗಬೇಕು. ಹಾಗಿದ್ದರೆ ಮಾತ್ರ ...

news

ಈ ಎರಡು ದಿನ ಬಿಟ್ಟು ಉಳಿದ ದಿನಗಳಲ್ಲಿ ದೇವರ ವಿಗ್ರಹ ತೊಳೆಯಬಾರದು!

ಬೆಂಗಳೂರು: ಒಬ್ಬೊಬ್ಬ ದೇವರಿಗೆ ಒಂದೊಂದು ದಿನ ವಿಶೇಷ ಎಂಬಂತೆ ದೇವರ ವಿಗ್ರಹ, ಪಾತ್ರೆ ತೊಳೆಯಲೂ ಒಂದೊಂದು ...

news

ಸಿಂಹ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?

ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ...