ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಬುಧವಾರ, 30 ಜನವರಿ 2019 (09:00 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಅನವಶ್ಯಕ ಮಾತುಗಳಿಂದ ಕಲಹಕ್ಕೆ ಕಾರಣವಾಗುವಿರಿ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಬರುವುದು. ಉದ್ಯೋಗ ರಂಗದಲ್ಲೂ ತಾಳ್ಮೆಯಿಂದ ಮುನ್ನಡೆದರೆ ಮಾತ್ರ ಮುನ್ನಡೆ. ಆದರೆ ವಿದ್ಯಾರ್ಥಿಗಳಿಗೆ ಶುಭ ಧಿನ.
 
ವೃಷಭ: ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವುದು. ಶುಭ ಮಂಗಲ ಕಾರ್ಯ ನೆರವೇರಿಸುವಿರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ. ಕಾರ್ಯಕ್ಷೇತ್ರದಲ್ಲೂ ನಿರೀಕ್ಷಿತ ಮುನ್ನಡೆ ದೊರಕಿ ನೆಮ್ಮದಿ ಕಾಣುವಿರಿ.
 
ಮಿಥುನ: ವೃತ್ತಿ ರಂಗದಲ್ಲಿ ಸಹೋದ್ಯೋಗಿಗಳಿಂದ ಸಹಕಾರ ಸಿಗದು. ಹಾಗಿದ್ದರೂ ನಿಮ್ಮ ಸ್ವ ಪ್ರಯತ್ನದಿಂದ ಮೇಲೇರುವಿರಿ. ವ್ಯಾಪಾರ ವ್ಯವಹಾರದಲ್ಲಿ ಲಾಭ ಕಾಣುವಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ.
 
ಕರ್ಕಟಕ: ಸಮಾಜ ಸೇವೆಗೆ ಮುಂದಾಗುವಿರಿ. ಇದರಿಂದ ನಿಮ್ಮ ಗೌರವ, ಸ್ಥಾನ ಮಾನ ಹೆಚ್ಚುವುದು. ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ. ಹೊಸ ವ್ಯವಹಾರಗಳಿಗೆ ಕೈ ಹಾಕಿದರೆ ಲಾಭ ಗಳಿಸಬಹುದು. ಧನಾಗಮನ ಯೋಗವಿದೆ.
 
ಸಿಂಹ: ಮಾನಸಿಕವಾಗಿ ಯಾವುದೋ ಒಂದು ಚಿಂತೆ ನಿಮ್ಮನ್ನು ಕಾಡಲಿದೆ. ಇದುವರೆಗೆ ಇದ್ದ ಆರೋಗ್ಯ ಸಮಸ್ಯೆ ನಿವಾರಣೆಯಾಗುವುದು. ಅವಿವಾಹಿತರಿಗೆ ಕಂಕಣ ಬಲ, ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವುದು.
 
ಕನ್ಯಾ: ಕಚೇರಿಯಲ್ಲಿ ಕಾರ್ಯದೊತ್ತಡ, ಕಿರಿ ಕಿರಿ ಹೆಚ್ಚುವುದು. ಆದರೆ ಮುನ್ನಡೆಗೆ ಅಡ್ಡಿಯಾಗದು. ಆದಾಯದಷ್ಟೇ ಖರ್ಚು ವೆಚ್ಚಗಳೂ ತಲೆದೋರಲಿವೆ. ನಿರುದ್ಯೋಗಿಗಳಿಗೆ ತಾತ್ಕಾಲಿಕವಾಗಿ ಉದ್ಯೋಗ ಲಭಿಸಲಿದೆ.
 
ತುಲಾ: ಪಾಲಿಗೆ ಬಂದಿದ್ದೇ ಪಂಚಾಮೃತ ಎಂದು ಮುನ್ನಡೆಯಬೇಕು. ಕಚೇರಿಯಲ್ಲಿ ನಿರೀಕ್ಷಿತ ಫಲ ಸಿಗದೇ ಇದ್ದರೂ ಮುಂದೆ ಒಳ್ಳೆಯ ದಿನಗಳಿದೆ. ಆದರೆ ಸಾಂಸಾರಿಕವಾಗಿ ಮನೆಯವರ ಸಹಕಾರ ಸಿಕ್ಕಿ ನೆಮ್ಮದಿ ಹೊಂದುವಿರಿ.
 
ವೃಶ್ಚಿಕ: ಬೇಡದ ಆಲೋಚನೆಗಳಿಂದ ಮನಸ್ಸು ಹೈರಾಣಾಗುವುದು. ಆರೋಗ್ಯ ಸಮಸ್ಯೆ ಕಂಡುಬರುವುದು. ವೃತ್ತಿ ರಂಗದಲ್ಲಿ ಮುನ್ನಡೆ ಇದೆ. ಹಣಕಾಸಿನ ಮುಗ್ಗಟ್ಟುಗಳು ನಿಧಾನವಾಗಿ ಚೇತರಿಕೆ ಕಾಣುವುದು.
 
ಧನು: ದೇವರ ದರ್ಶನ ಪಡೆಯುವಿರಿ. ಹಂತ ಹಂತವಾಗಿ ಅಭಿವೃದ್ಧಿಯಾಗುವುದು ನಿಮ್ಮ ಗಮನಕ್ಕೆ ಬರಲಿದೆ. ಹೆಚ್ಚಿನ ಖರ್ಚು ವೆಚ್ಚಗಳಾಗುವುದು. ಹಾಗಾಗಿ ಇದರ ಬಗ್ಗೆ ಹಿಡಿತವಿರಲಿ. ಹಿರಿಯರ ಪ್ರವಾಸಕ್ಕೆ ಸಿದ್ಧತೆ ಮಾಡುವಿರಿ.
 
ಮಕರ: ದೇವರ ಆಶೀರ್ವಾದ ನಿಮ್ಮ ಮೇಲಿರಲಿದೆ. ಹೀಗಾಗಿ ಇಂದು ಕೈಗೊಂಡ ಕಾರ್ಯಗಳು ಸುಗಮವಾಗಿ ನೆರವೇರಿ ಜಯ ನಿಮ್ಮದಾಗುವುದು. ಕುಟುಂಬದಲ್ಲೂ ನೆಮ್ಮದಿಯ ವಾತಾವರಣವಿರುವುದು. ಆದರೆ ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ.
 
ಕುಂಭ: ನಿರುದ್ಯೋಗಿಗಳಿಗೆ ಮನಸ್ಸಿಗೆ ಹಿಡಿಸಿದ ಉದ್ಯೋಗವೊಂದು ಅರಸಿಕೊಂಡು ಬರುವುದು. ಕುಟುಂಬದವರ ಸಹಕಾರ ಸಿಗುವುದು. ತಾಳ್ಮೆಯಿಂದ ಮುನ್ನಡೆದರೆ ಜಯ ನಿಮ್ಮದು. ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ದಿನದಂತ್ಯಕ್ಕೆ ಮತ್ತಷ್ಟು ಶುಭವಾಗಲಿದೆ.
 
ಮೀನ: ಖರ್ಚು ವೆಚ್ಚಗಳ ಬಗ್ಗೆ ಹಿಡಿತ ಅಗತ್ಯ. ಉದ್ಯೋಗದಲ್ಲಿ ಮುನ್ನಡೆ, ಬಡ್ತಿ ಸಿಗುವುದು. ಅನಿರೀಕ್ಷಿತವಾಗಿ ಹಳೆಯ ಮಿತ್ರರನ್ನು ಭೇಟಿಯಾಗುವಿರಿ. ದೂರ ಸಂಚಾರ ಯೋಗವಿದ್ದು, ಎಚ್ಚರಿಕೆ ಅಗತ್ಯ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.                          ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಕನ್ಯಾ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?

ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ...

news

ಋತುಗಳಿಗೆ ಅನುಸಾರವಾಗಿ ಆಹಾರ: ವರ್ಷ ಋತುವಿನಲ್ಲಿ ಯಾವ ಅಡಿಗೆ ಮಾಡಬೇಕು?

ಬೆಂಗಳೂರು: ಪ್ರತಿಯೊಂದು ಋತುವಿಗೆ ಅನುಸಾರವಾಗಿ ನಮ್ಮ ಆಹಾರದ ನಿಯಮಗಳು ಬದಲಾಗಬೇಕು. ಹಾಗಿದ್ದರೆ ಮಾತ್ರ ...

news

ನಿಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ಲವ್ ಲೈಫ್ ಹೇಗಿರುತ್ತದೆ ತಿಳಿಯಬಹುದು!

ಬೆಂಗಳೂರು: ಜನ್ಮದಿನಾಂಕಕ್ಕೆ ಅನುಗುಣವಾಗಿ ನಿಮ್ಮ ಲವ್ ಲೈಫ್, ವಿವಾಹ ಜೀವನ ಮತ್ತು ನಿಮ್ಮ ಸಂಗಾತಿ ...

news

ಉದ್ಯೋಗದಲ್ಲಿ ಯಶಸ್ಸು ಸಿಗಬೇಕಾದರೆ ಹೀಗೆ ಮಾಡಿ!

ಬೆಂಗಳೂರು: ಉದ್ಯೋಗ ಸಿಗದೇ ನಿರಾಶರಾದವರು, ಉದ್ಯೋಗದಲ್ಲಿ ಮುನ್ನಡೆ ಇಲ್ಲದೇ ಬೇಸರದಲ್ಲಿರುವವರು ಪ್ರತಿನಿತ್ಯ ...