ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಬಂಧು ಮಿತ್ರರ ಅಗಲುವಿಕೆ ಮನಸ್ಸಿಗೆ ಬೇಸರ ಉಂಟುಮಾಡಬಹುದು. ಉದ್ಯೋಗ ಕ್ಷೇತ್ರದಲ್ಲಿ ಕೊಂಚ ಕಾರ್ಯದೊತ್ತಡ ಹೆಚ್ಚುವುದು. ಆದರೆ ಆದಾಯಕ್ಕೆ ಕೊರತೆಯಾಗದು. ದೂರ ಸಂಚಾರ ಮುಂದೂಡುವುದೇ ಒಳ್ಳೆಯದು.ವೃಷಭ: ಕಾರ್ಯನಿಮಿತ್ತ ದೂರದ ಊರಿಗೆ ಪ್ರಯಾಣ ಬೆಳೆಸುವಿರಿ. ಆರ್ಥಿಕವಾಗಿ ಸಾಕಷ್ಟು ಆದಾಯ ಗಳಿಸುವಿರಿ. ಮನೆ ವಸ್ತುಗಳ ಖರೀದಿ ಮಾಡುವಿರಿ. ವ್ಯಾಪಾರಸ್ಥರಿಗೆ ಲಾಭವಿದೆ. ವಿದ್ಯಾರ್ಥಿಗಳಿಗೆ ಶುಭ ದಿನ.ಮಿಥುನ: ಕಾರ್ಯಕ್ಷೇತ್ರಗಳಲ್ಲಿ ಅಡೆತಡೆಗಳು ತೋರಿಬಂದೀತು. ಮನೆ ಬದಲಾವಣೆ ಮಾಡಲಿದ್ದೀರಿ.