ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಶುಕ್ರವಾರ, 1 ಫೆಬ್ರವರಿ 2019 (08:55 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಸಂಸಾರದಲ್ಲಿ ನೆಮ್ಮದಿ ನೆಲೆಸಲಿದೆ. ಅವಿವಾಹಿತರಿಗೆ ಮನಸ್ಸಿಗೆ ಹಿಡಿಸುವ ವಿವಾಹ ಪ್ರಸ್ತಾಪಗಳು ಬರುವುದು. ಉದ್ಯೋಗದಲ್ಲಿ ಕಾರ್ಯದೊತ್ತಡವಿರುವುದು. ಆದರೆ ಕಾರ್ಯಸಾಧನೆಗೆ ತೊಂದರೆಯಿಲ್ಲ.
 
ವೃಷಭ: ಬಹುದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗೆ ಪರಿಹಾರ ದೊರಕಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಮನೆಗೆ ಅನಿರೀಕ್ಷಿತವಾಗಿ ಅತಿಥಿಗಳು ಬಂದು ಸಂತಸ ತರುವರು. ಹೊಸ ವ್ಯವಹಾರ ಮಾಡಲು ಸೂಕ್ತ ದಿನ.
 
ಮಿಥುನ: ಅವಿವಾಹಿತರ ಮಕ್ಕಳ ಮದುವೆ ಬಗ್ಗೆ ಯೋಚನೆ ಮಾಡುವಿರಿ. ಆದರೆ ಮನೆಯ ಹಿರಿಯ ಸದಸ್ಯರ ಆರೋಗ್ಯ ಹದಗೆಟ್ಟು ಚಿಂತೆಗೆ ಕಾರಣವಾಗುವುದು. ನೂತನ ದಂಪತಿಗಳು ಸರಸಮಯ ಕ್ಷಣ ಕಳೆಯುವರು. ಆರ್ಥಿಕವಾಗಿ ಲಾಭ ಗಳಿಸುವಿರಿ.
 
ಕರ್ಕಟಕ: ದೂರ ಸಂಚಾರ ಮಾಡಬೇಕಾಗಿ ಬರುವುದು. ಆದರೆ ವಾಹನ ಚಾಲನೆಯಲ್ಲಿ ಎಚ್ಚರ ಅಗತ್ಯ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ಬರಲಿವೆ. ಆದರೆ ಖರ್ಚು ವೆಚ್ಚಗಳು ಅಧಿಕವಾದೀತು.
 
ಸಿಂಹ: ನಿಮ್ಮ ಬಗ್ಗೆ ಇರುವ ಕೀಳರಿಮೆಯನ್ನು ತೊಡೆದು ಹಾಕಿದರೆ ಹೊಸ ಅವಕಾಶಗಳು ನಿಮ್ಮ ಕೈ ಹಿಡಿಯುತ್ತವೆ. ಆರ್ಥಿಕವಾಗಿ ಕೊಂಚ ಖರ್ಚು ವೆಚ್ಚಗಳು ತೋರಿ ಬಂದೀತು. ಅಪರೂಪಕ್ಕೆ ಬರುವ ಅತಿಥಿಯಿಂದ ಸಂತಸ.
 
ಕನ್ಯಾ: ಉದ್ಯೋಗದಲ್ಲಿ ಕಾರ್ಯದೊತ್ತಡವಿದ್ದರೂ ಸಹೋದ್ಯೋಗಿಗಳಿಂದ ಸಹಕಾರ ಸಿಕ್ಕಿ ಎಲ್ಲವೂ ಸುಗಮವಾಗುವುದು. ಆರ್ಥಿಕ ಮುಗ್ಗಟ್ಟುಗಳು ದೂರವಾಗುವುದು. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.
 
ತುಲಾ: ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ದಾಯಾದಿಗಳಿಂದ ವಂಚನೆಗೊಳಗಾಗುವ ಸಂಭವವಿದೆ. ಆದರೆ ಸಂಗಾತಿಯಿಂದ ನಿಮಗೆ ಸಹಕಾರ ಸಿಗುವುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
 
ವೃಶ್ಚಿಕ: ವಾಹನ ಖರೀದಿಗೆ ಮುಂದಾಗುವಿರಿ. ಮನೆಗೆ ಬೇಕಾದ ವಸ್ತುಗಳಿಗಾಗಿ ಹಲವು ಖರ್ಚು ವೆಚ್ಚ ಮಾಡುವಿರಿ. ನಿರುದ್ಯೋಗಿಗಳು ಸ್ವಲ್ಪ ದಿನ ಕಾಯಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲವಿದ್ದರೆ ಯಶಸ್ಸೂ ಸಿಗುತ್ತದೆ.
 
ಧನು: ನಿಮ್ಮಿಂದ ಸಾಲ ಪಡೆದವರು ಮರು ಪಾವತಿ ಮಾಡುವರು. ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯಿದೆ. ಸಂಸಾರದಲ್ಲಿ ನಿಮ್ಮ ಮಾತಿನ ಮೇಲೆ ನಿಗಾ ಇದ್ದರೆ ಸುಖ ಶಾಂತಿಯಿರುತ್ತದೆ. ದೂರ ಸಂಚಾರ ಮಾಡುವುದಿದ್ದರೆ ಜಾಗ್ರತೆ ಇರಲಿ.
 
ಮಕರ: ಆರೋಗ್ಯ ಸಮಸ್ಯೆಗಳು ಕಂಡುಬರುವುದು. ಅನಿರೀಕ್ಷಿತವಾಗಿ ಬಂಧು ಮಿತ್ರರು ಆಗಮಿಸಿ ಮನಸ್ಸಿಗೆ ಮುದ ನೀಡುವರು. ನಿಮ್ಮ ಶತ್ರುಗಳಿಗೆ ನಿಮ್ಮನ್ನು ಸೋಲಿಸಲಾಗದು. ಸಂಗಾತಿಯ ಸಹಕಾರದೊಂದಿಗೆ ನೆಮ್ಮದಿಯ ದಿನ ನಿಮ್ಮದಾಗಲಿದೆ.
 
ಕುಂಭ: ನಿಮ್ಮ ಬುದ್ಧಿಮತ್ತೆಯೇ ನಿಮಗೆ ಜಯ ತಂದುಕೊಡಲಿದೆ. ಉದ್ಯೋಗದಲ್ಲಿ ಬರುವ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವಿರಿ. ಕ್ರೀಡಾ ಪಟುಗಳಿಗೆ ಯಶಸ್ಸು. ಆದರೆ ಆರೋಗ್ಯದ ಬಗ್ಗೆ ಎಚ್ಚರ ಅಗತ್ಯ.
 
ಮೀನ: ಹಿಂದೆ ಕೈಗೊಂಡ ಕೆಲಸದಲ್ಲಿ ಫಲ ಕಾಣುವಿರಿ. ಆರ್ಥಿಕ ಮುಗ್ಗಟ್ಟುಗಳು ದೂರವಾಗಿ ಚೇತರಿಕೆ, ಅಭಿವೃದ್ಧಿ ಕಾಣುವಿರಿ. ಕುಟುಂಬದಲ್ಲಿ ಬರುವ ಭಿನ್ನಾಭಿಪ್ರಾಯಗಳನ್ನು ತಾಳ್ಮೆಯಿಂದ ನಿಭಾಯಿಸಿದರೆ ಎಲ್ಲವೂ ಶುಭವಾಗುವುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.                          ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ವಿಷ್ಣು ಸಹಸ್ರನಾಮ ಮತ್ತು ಗಾಯತ್ರಿ ಮಂತ್ರ ಜಪಿಸುವುದರಿಂದ ಆರೋಗ್ಯದಲ್ಲಿ ಎಂತಹಾ ಬದಲಾವಣೆಯಾಗುತ್ತದೆ ಗೊತ್ತಾ?

ಬೆಂಗಳೂರು: ನಮ್ಮ ವೇದ, ಮಂತ್ರಗಳು ಕೇವಲ ದೇವರ ಪ್ರಾರ್ಥನೆಗೆ ಮಾತ್ರವಲ್ಲ, ಅದು ನಮ್ಮ ದೇಹದ ಮೇಲೂ ಪರಿಣಾಮ ...

news

ಮಂಗಳವಾರ ಜನಿಸಿದವರು ಯಾವ ಉದ್ಯೋಗ ಮಾಡಿದರೆ ಯಶಸ್ಸು ಸಿಗುತ್ತದೆ?

ಬೆಂಗಳೂರು: ನಿಮ್ಮ ಜನ್ಮ ದಿನಕ್ಕೆ ಅನುಗುಣವಾಗಿ ಯಾವ ಉದ್ಯೋಗ ಮಾಡಿದರೆ ನಿಮಗೆ ಯಶಸ್ಸು ಸಿಗುತ್ತದೆ ನೋಡೋಣ. ...

news

ಹೇಮಂತ ಋತುವಿನಲ್ಲಿ ಯಾವುದು ನಿಷಿದ್ಧ?

ಬೆಂಗಳೂರು: ಪ್ರತಿಯೊಂದು ಋತುವಿಗೆ ಅನುಸಾರವಾಗಿ ನಮ್ಮ ಆಹಾರದ ನಿಯಮಗಳು ಬದಲಾಗಬೇಕು. ಹಾಗಿದ್ದರೆ ಮಾತ್ರ ...

news

ಕರ್ಕಟಕ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?

ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ...