ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಶುಕ್ರವಾರ, 8 ಫೆಬ್ರವರಿ 2019 (08:46 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಅವಿರತ ಪ್ರಯತ್ನಿಸಿದರೆ ಯಾವುದೇ ಕಾರ್ಯವಾದರೂ ಜಯ ಸಿಗುವುದು. ಉದರ ಸಂಬಂಧೀ ರೋಗಗಳು ಬರುವುದು. ಆರ್ಥಿಕವಾಗಿ ಸಮಸ್ಥಿತಿ ಇರಲಿದೆ.
 
ವೃಷಭ: ಹಣಕಾಸಿನ ಮುಗ್ಗಟ್ಟು ಎದುರಾಗಬಹುದು. ವಿದ್ಯಾರ್ಥಿಗಳಿಗೆ ಶುಭ ದಿನ. ವೃತ್ತಿಯಲ್ಲಿ ಸಹೋದ್ಯೋಗಿಗಳ ಕಿರಿ ಕಿರಿ ಇದ್ದರೂ ಮುನ್ನಡೆಗೆ ಕೊರತೆಯಿಲ್ಲ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಸಿಗುವುದು.
 
ಮಿಥುನ: ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ತಲೆದೋರುವುದು. ಖರ್ಚು  ವೆಚ್ಚಗಳ ಬಗ್ಗೆ ನಿಗಾ ಇರಲಿ. ಹಿತ ಶತ್ರುಗಳಿಂದ ಕಂಟಕವಿದೆ. ಕಾರ್ಯ ನಿಮಿತ್ತ ಪ್ರಯಾಣ ಮಾಡಬೇಕಾಗಿ ಬರುತ್ತದೆ.
 
ಕರ್ಕಟಕ: ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಸಾಕಷ್ಟು ಖರ್ಚು ವೆಚ್ಚಗಳಾಗಲಿವೆ. ನಿರುದ್ಯೋಗಿಗಳಿಗೆ ಸತತ ಪ್ರಯತ್ನ ಅಗತ್ಯ. ಹೊಸ ಕೆಲಸಗಳಿಗೆ ಕೈ ಹಾಕಿದರೆ ಆರಂಭಿಕ ವಿಘ್ನ ಎದುರಾಗಬಹುದು. ದಿನದಂತ್ಯಕ್ಕೆ ಶುಭ.
 
ಸಿಂಹ: ಹೊಸ ವ್ಯವಹಾರಗಳಿಗೆ ಕೈ ಹಾಕಿದರೆ ಲಾಭ ಗಳಿಸುವಿರಿ. ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಅಲೆದಾಡಬೇಕಾದೀತು. ವಾಹನ ಚಲಾಯಿಸುವಾಗ ಎಚ್ಚರ ಅಗತ್ಯ. ಸಂಗಾತಿಯೊಂದಿಗೆ ಶುಭ ಸಮಯ ಕಳೆಯುವಿರಿ.
 
ಕನ್ಯಾ: ವೃತ್ತಿ ರಂಗದಲ್ಲಿ ಸಹಕಾರ ಸಿಗದೇ ಒದ್ದಾಡಬೇಕಾದೀತು. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡುವಿರಿ. ವಿನಾಕಾರಣ ಅಪಮಾನಕ್ಕೆ ಗುರಿಯಾಗುವಿರಿ. ಹೀಗಾಗಿ ಇನ್ನೊಬ್ಬರೊಂದಿಗೆ ವ್ಯವಹರಿಸುವಾಗ ಎಚ್ಚರ ಅಗತ್ಯ.
 
ತುಲಾ: ಕೆಲಸ ಕಾರ್ಯಗಳು ನಿರೀಕ್ಷೆಯಂತೇ ನಡೆದು ಆರ್ಥಿಕವಾಗಿಯೂ ಚೇತರಿಕೆ ಕಾಣುವಿರಿ. ನೂತನ ದಂಪತಿಗಳು ಸರಸದ ಕ್ಷಣ ಕಳೆಯುವರು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ.
 
ವೃಶ್ಚಿಕ: ಕಾರ್ಯ ನಿಮಿತ್ತ ದೂರ ಪ್ರಯಾಣ ಮಾಡಿ ಜಯಗಳಿಸುವಿರಿ. ಆದರೆ ಅಪಘಾತ ಭಯವಿದೆ. ಉದ್ಯೋಗದಲ್ಲಿ ಅನುಕೂಲಕರ ವಾತಾವರಣವಿರುವುದು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.
 
ಧನು: ಉದ್ಯಮಿಗಳಿಗೆ ವಂಚನೆಯ ಅಪಾಯವಿದೆ. ಆರೋಗ್ಯ ಹದಗೆಡುವ ಸಾಧ್ಯತೆಯಿದೆ. ಆದರೆ ತಾಳ್ಮೆಯಿಂದ ನಿಭಾಯಿಸಿದರೆ ಎಲ್ಲವೂ ಸುಖಾಂತ್ಯ. ಖರ್ಚು ವೆಚ್ಚಗಳ ಬಗ್ಗೆ ಕೊಂಚ ನಿಗಾವಹಿಸುವುದು ಒಳ್ಳೆಯದು.
 
ಮಕರ: ಹೊಸ ಮನೆ, ಹೊಸ ಸ್ಥಳಕ್ಕೆ ಸ್ಥಳಾಂತರ ಮಾಡುವಿರಿ. ಮನೆಗೆ ಬೇಕಾದ ಹೊಸ ವಸ್ತುಗಳಿಗಾಗಿ ಖರ್ಚು ವೆಚ್ಚಗಳು ಅಧಿಕವಾಗಬಹುದು. ಸಂಗಾತಿಯ ಸಹಕಾರ ಸಿಗುವುದರಿಂದ ನೆಮ್ಮದಿಗೆ ಕೊರತೆಯಿರದು.
 
ಕುಂಭ: ತಾಳ್ಮೆ ಕಳೆದುಕೊಂಡು ಕೂಗಾಡುವುದರಿಂದ ನೀವೇ ಮಾನಸಿಕ ಕ್ಷೋಭೆಗೆ ಒಳಗಾಗಬೇಕಾಗುತ್ತದೆ. ಹಿರಿಯರ ಮಾತಿಗೆ ಮನ್ನಣೆ ನೀಡಿ. ಹಿತಶತ್ರುಗಳಿಂದ ದೂರವಿರಿ. ಆರ್ಥಿಕವಾಗಿ ಲಾಭ ಗಳಿಕೆಗೆ ಕೊರತೆಯಾಗದು.
 
ಮೀನ: ಎಷ್ಟೋ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಅನಿರೀಕ್ಷಿತವಾಗಿ ಬರುವ ನೆಂಟರು ಶುಭ ಸುದ್ದಿ ಕೊಡಲಿದ್ದಾರೆ. ವೃತ್ತಿರಂಗದಲ್ಲಿ ನಿಮ್ಮ ಕೆಲಸಗಳಿಗೆ ಮನ್ನಣೆ ಸಿಗಲಿದೆ. ಆದರೆ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿದರೆ ಒಳ್ಳೆಯದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.                          ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿಮ್ಮ ವೃತ್ತಿ ಬದುಕಿನ ಭವಿಷ್ಯ ಹೀಗಿರುತ್ತದೆ

ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ...

news

ಜನ್ಮ ದಿನಾಂಕಕ್ಕೆ ಅನುಗುಣವಾಗಿ ಈ ವರ್ಷ ನಿಮ್ಮ ಭವಿಷ್ಯ ಹೇಗಿರುತ್ತದೆ ಗೊತ್ತಾ?

ಬೆಂಗಳೂರು: ಜನ್ಮ ದಿನಾಂಕಕ್ಕೆ ಅನುಗುಣವಾಗಿ ಒಬ್ಬೊಬ್ಬರಿಗೆ ಅದೃಷ್ಟ ಸಂಖ್ಯೆ ಎಂದಿರುತ್ತದೆ. ಆಯಾ ಜನ್ಮ ...

news

ಭಾನುವಾರ ಜನಿಸಿದವರು ಈ ಉದ್ಯೋಗ ಮಾಡಿದರೆ ಯಶಸ್ಸು ಖಂಡಿತಾ

ಬೆಂಗಳೂರು: ನಿಮ್ಮ ಜನ್ಮ ದಿನಕ್ಕೆ ಅನುಗುಣವಾಗಿ ಯಾವ ಉದ್ಯೋಗ ಮಾಡಿದರೆ ನಿಮಗೆ ಯಶಸ್ಸು ಸಿಗುತ್ತದೆ ನೋಡೋಣ. ...

news

ಮಕರ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?

ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ...