ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಮಂಗಳವಾರ, 12 ಫೆಬ್ರವರಿ 2019 (09:10 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಅಪರೂಪದ ಮಿತ್ರರು, ಬಂಧುಗಳನ್ನು ಭೇಟಿಯಾಗಿ ಮನಸ್ಸಿಗೆ ಖುಷಿಯಾಗುವುದು. ಹಿರಿಯರ ಬಗ್ಗೆ ಕಾಳಜಿ ತೆಗೆದುಕೊಳ್ಳುವಿರಿ. ದೂರ ಸಂಚಾರ ಯೋಗವಿದ್ದು, ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ವೃಷಭ: ಆದಾಯದಲ್ಲಿ ನಿರೀಕ್ಷಿತ ಲಾಭ ಕಂಡುಬಂದು ಸ್ಥಿತಿ ಗತಿಗಳು ಸುಧಾರಿಸೀತು. ಹೊಸ ವ್ಯವಹಾರಗಳಿಗೆ ಕೈ ಹಾಕುವಿರಿ. ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ.
 
ಮಿಥುನ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಸಾಮಾಜಿಕವಾಗಿ ನಿಮ್ಮ ಸ್ಥಾನಮಾನಗಳು ಹೆಚ್ಚಿ ಗೌರವ ಸಂಪಾದಿಸಲಿದ್ದೀರಿ. ಹಾಗಿದ್ದರೂ ನೀವು ಮಾಡುವ ಸಣ್ಣ ತಪ್ಪುಗಳು ಅವಮಾನ ಎದುರಿಸಲು ಕಾರಣವಾಗಬಹುದು.
 
ಕರ್ಕಟಕ: ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ದೂರ ಸಂಚಾರ ಮಾಡುವಾಗ ಅನಿರೀಕ್ಷಿತವಾಗಿ ಇಷ್ಟವಸ್ತುವೊಂದನ್ನು ಕಳೆದುಕೊಳ್ಳಲಿದ್ದೀರಿ. ದೂರದ ಸಂಬಂಧಿಕರಿಂದ ವಂಚನೆಗೊಳಗಾಗುವ ಸಾಧ್ಯತೆಯಿದೆ. ಎಚ್ಚರ ಅಗತ್ಯ.
 
ಸಿಂಹ: ಹಲವು ಸಮಸ್ಯೆಗಳು ತೋರಿಬಂದರೂ ಸಂಗಾತಿಯ ಸಲಹೆಯೊಂದಿಗೆ ನಡೆದರೆ ಪರಿಹಾರ ದೊರಕೀತು. ದೂರ ಸಂಚಾರ ಕೈಗೊಳ್ಳಬೇಕಾಗುತ್ತದೆ. ಬಿಡುವಿಲ್ಲದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೀರಿ. ಹಿಂದೆ ನೀಡಿದ್ದ ಸಾಲಗಳು ಮರುಪಾವತಿಯಾಗುತ್ತವೆ.
 
ಕನ್ಯಾ: ಹಣಕಾಸಿನ ಮುಗ್ಗಟ್ಟು ತಲೆದೋರುತ್ತವೆ. ಸರ್ಕಾರಿ ಅಧಿಕಾರಿಗಳಿಗೆ ಕೆಲವೊಂದು ಅಡೆತಡೆಗಳು ಎದುರಾದೀತು. ಆದರೆ ಧನಾಗಮನಕ್ಕೆ ಕೊರತೆಯಿರದು. ಹೊಸ ವ್ಯವಹಾರಕ್ಕೆ ಕೈ ಹಾಕಿದರೆ ಜಯ ಗಳಿಸುವಿರಿ.
 
ತುಲಾ: ಹಣಕಾಸಿನ ಹರಿವಿಗೆ ಏನೂ ಕೊರತೆಯಾಗದು. ಅಷ್ಟೇ ಖರ್ಚುಗಳೂ ತಲೆದೋರುತ್ತದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು. ಮಕ್ಕಳಾಗದ ದಂಪತಿಗಳಿಗೆ ಶುಭ ಸುದ್ದಿ ಸಿಗಲಿದೆ. ಮನೆಯಲ್ಲಿ ಉಲ್ಲಾಸದಾಯಕ ವಾತಾವರಣವಿರುತ್ತದೆ.
 
ವೃಶ್ಚಿಕ: ಮಕ್ಕಳ ಭವಿಷ್ಯದ ಬಗ್ಗೆ ಅನಗತ್ಯ ಚಿಂತೆ ಬೇಡ. ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ. ಎಲ್ಲಾ ಕೆಲಸಗಳಲ್ಲೂ ತಾಳ್ಮೆ ಮುಖ್ಯ. ಅನಿರೀಕ್ಷಿತವಾಗಿ ಸಂಕಷ್ಟದ ಘಟನೆಯಲ್ಲಿ ಸಿಲುಕಿಕೊಳ‍್ಳುವಿರಿ. ದಿನದಂತ್ಯಕ್ಕೆ ಶುಭ.
 
ಧನು: ಹಿರಿಯರಿಗೆ ಮನಸ್ಸಿಗೆ ನೋವಾಗದಂತೆ ನಿಮಗೆ ಇಷ್ಟವಿಲ್ಲದಿದ್ದರೂ ಕೆಲವೊಂದು ಕೆಲಸ ಮಾಡಬೇಕಾಗುತ್ತದೆ. ಮಿತ್ರರ ಭೇಟಿ ಮನಸ್ಸಿಗೆ ಮುದ ನೀಡುವುದು. ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ.
 
ಮಕರ: ವ್ಯವಹಾರದಲ್ಲಿ ವಂಚನೆಗೊಳಗಾಗುವ ಭೀತಿಯಿದೆ. ಹಿತಶತ್ರುಗಳ ಬಗ್ಗೆ ಎಚ್ಚರ ಅಗತ್ಯ. ಆರ್ಥಿಕವಾಗಿ ಮೋಸ, ನಷ್ಟಕ್ಕೆ ಒಳಗಾಗುವ ಸಾಧ್ಯತೆಯಿದೆ. ಹಾಗಿದ್ದರೂ ಕುಲದೇವರ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ, ಕೆಲಸಗಳಲ್ಲಿ ಜಯ ಸಿಗುವುದು.
 
ಕುಂಭ: ಉದ್ದೇಶಿತ ಕೆಲಸಗಳಿಗೆ ಕೆಲವು ಅಡೆತಡೆಗಳು ತೋರಿಬಂದೀತು. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ. ಹಿರಿಯರ ಅನುಗ್ರಹ ನಿಮ್ಮ ಮೇಲಿರುವುದು. ಸಂಗಾತಿಯೊಡನೆ ಸರಸಮಯ ಕ್ಷಣ ಕಳೆಯುವಿರಿ.
 
ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಪ್ರಗತಿ ಕಂಡುಬರುತ್ತದೆ. ಉದ್ಯಮಿಗಳಿಗೆ ವ್ಯವಹಾರದಲ್ಲಿ ಲಾಭ ಸಿಗುವುದು. ಅನಾರೋಗ್ಯ ಸಮಸ್ಯೆಗಳು ದೂರವಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗುವುದು.
 
ಮೀನ: ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಪ್ರಗತಿ ಕಂಡುಬರುತ್ತದೆ. ಉದ್ಯಮಿಗಳಿಗೆ ವ್ಯವಹಾರದಲ್ಲಿ ಲಾಭ ಸಿಗುವುದು. ಅನಾರೋಗ್ಯ ಸಮಸ್ಯೆಗಳು ದೂರವಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗುವುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಪಿತೃ ಋಣದಿಂದ ಮುಕ್ತಿ ಪಡೆಯುವುದು ಹೇಗೆ?

ಬೆಂಗಳೂರು: ತಂದೆ ತಾಯಿಯರ ಋಣವನ್ನು ತೀರಿಸುವುದು ಸುಲಭವಲ್ಲ. ನಮ್ಮ ಪಿತೃಗಳ ಋಣ ತೀರಿಸಲು ಭಗವಂತ ನಮಗೆ ...

news

ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿಮ್ಮ ವೃತ್ತಿ ಬದುಕಿನ ಭವಿಷ್ಯ ಹೀಗಿರುತ್ತದೆ

ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ...

news

ಜನ್ಮ ದಿನಾಂಕಕ್ಕೆ ಅನುಗುಣವಾಗಿ ಈ ವರ್ಷ ನಿಮ್ಮ ಭವಿಷ್ಯ ಹೇಗಿರುತ್ತದೆ ಗೊತ್ತಾ?

ಬೆಂಗಳೂರು: ಜನ್ಮ ದಿನಾಂಕಕ್ಕೆ ಅನುಗುಣವಾಗಿ ಒಬ್ಬೊಬ್ಬರಿಗೆ ಅದೃಷ್ಟ ಸಂಖ್ಯೆ ಎಂದಿರುತ್ತದೆ. ಆಯಾ ಜನ್ಮ ...

news

ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ಉತ್ತಮ ಮತ್ತು ಕೆಟ್ಟ ಸ್ವಭಾವಗಳು ಹೀಗಿರುತ್ತವೆ!

ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ಒಂದೊಂದು ರೀತಿಯಿರುತ್ತದೆ. ದಿನಕ್ಕೊಂದು ರಾಶಿಯವರ ಗುಣ ಮತ್ತು ...