ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಶುಕ್ರವಾರ, 15 ಫೆಬ್ರವರಿ 2019 (08:50 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸುವಿರಿ. ದೇವತಾ ಆರಾಧನೆಯಲ್ಲಿ ಪಾಲ್ಗೊಳ್ಳುವಿರಿ. ಮನೆಯಲ್ಲಿ ಶಾಂತಿ ಸಮಾಧಾನವಿರುವುದು. ಆರ್ಥಿಕವಾಗಿ ಧನಾಗಮನಕ್ಕೆ ಕೊರತೆಯಾಗದು. ಉದ್ಯೋಗದಲ್ಲಿ ಮುನ್ನಡೆ ಕಾಣುವಿರಿ.
 
ವೃಷಭ: ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗಿ ಬರಬಹುದು. ದೇಹಾಯಾಸ ಅಥವಾ ಆರೋಗ್ಯ ಸಮಸ್ಯೆಗಳು ಕಂಡುಬಂದೀತು. ಖರ್ಚು  ವೆಚ್ಚಗಳು ಅಧಿಕವಾಗಲಿದೆ. ಮನೆಯಲ್ಲಿ ಶುಭ ಕಾರ್ಯಗಳಿಗೆ ಸಿದ್ಧತೆ ಮಾಡುವಿರಿ.
 
ಮಿಥುನ: ಅವಿವಾಹಿತ ಮಕ್ಕಳ ವಿವಾಹ ಪ್ರಸ್ತಾಪಗಳಿಗೆ ಓಡಾಟ ನಡೆಸಲಿದ್ದೀರಿ. ಖರ್ಚು ವೆಚ್ಚಗಳು ಮಿತಿಯಲ್ಲಿದ್ದರೆ ಒಳಿತು. ಉದ್ಯೋಗದಲ್ಲಿ ವರ್ಗಾವಣೆಯಾಗಲಿದೆ. ಆದಷ್ಟು ಮಾತಿಗೆ ಕಡಿವಾಣ ಹಾಕಿ. ಬಂಧು ಮಿತ್ರ ಸಹಕಾರ ದೊರಕಲಿದೆ.
 
ಕರ್ಕಟಕ: ಮನೆಗೆ ಬೇಕಾದ ಹೊಸ ವಸ್ತುಗಳ ಖರೀದಿ ಮಾಡುವಿರಿ. ಆರ್ಥಿಕವಾಗಿ ಲಾಭವಿದ್ದಷ್ಟೇ ಖರ್ಚು ವೆಚ್ಚಗಳೂ ಅಧಿಕವಾದೀತು. ಸಾಮಾಜಿಕವಾಗಿ ನೀವು ಮಾಡುವ ಕೆಲಸಗಳಿಗೆ ಮನ್ನಣೆ ದೊರಕಲಿದೆ.
 
ಸಿಂಹ: ಮನೆಯಲ್ಲಿ ಹಿರಿಯರಿದ್ದರೆ ಅವರ ಆರೋಗ್ಯದ ಬಗ್ಗೆ ಅಲಕ್ಷ್ಯ ಬೇಡ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗದಿದ್ದರೂ ತಾತ್ಕಾಲಿಕವಾಗಿ ಸಮಸ್ಯೆಗೆ ಪರಿಹಾರ ದೊರಕಲಿದೆ. ಹಿತಶತ್ರುಗಳ ಬಗ್ಗೆ ಎಚ್ಚರ ಅಗತ್ಯ.
 
ಕನ್ಯಾ: ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಯೋಗವಿದೆ. ವೃತ್ತಿ ರಂಗದಲ್ಲಿ ನಿಮ್ಮ ಸ್ಥಾನದಲ್ಲಿ ಬದಲಾವಣೆಯಾಗಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ಆದರೆ ಸಂಗಾತಿಯೊಡನೆ ಸಮಯ ಕಳೆಯಲು ಅವಕಾಶ ಸಿಗದೇ ಬೇಸರಗೊಳ್ಳುವಿರಿ.
 
ತುಲಾ: ಮಕ್ಕಳಿಂದ ಶುಭವಾರ್ತೆ ಸಿಗಲಿದೆ. ಸಂಸಾರದಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ಇಂಜಿನಿಯರಿಂಗ್ ವೃತ್ತಿಯವರಿಗೆ ಮುನ್ನಡೆ, ಬಡ್ತಿ ಯೋಗವಿದೆ. ಪ್ರೇಮಿಗಳಿಗೆ ಶುಭ ದಿನ. ಆದರೆ ಆರೋಗ್ಯದ ಬಗ್ಗೆ ಎಚ್ಚರ ಅಗತ್ಯ.
 
ವೃಶ್ಚಿಕ: ಸಂಗಾತಿಯ ಮಾತಿಗೆ ಕಿವಿಗೊಡಬೇಕಾಗುತ್ತದೆ. ಹೊಸ ವ್ಯವಹಾರಗಳು, ಕೋರ್ಟು, ಕಚೇರಿ ವ್ಯಾಜ್ಯಗಳನ್ನು ಸ್ವಲ್ಪ ದಿನ ಮುಂದೂಡುವುದು ಒಳ್ಳೆಯದು. ಕಾರ್ಯಗಳಲ್ಲಿ ವಿಘ್ನ ಎದುರಾದೀತು. ನೆಮ್ಮದಿಗಾಗಿ ದೇವರ ಆರಾಧನೆ ಮಾಡಿ.
 
ಧನು: ಮಕ್ಕಳ ಉಪೇಕ್ಷೆ ಮನಸ್ಸಿಗೆ ಬೇಸರವುಂಟು ಮಾಡೀತು. ಆದರೆ ನಿಮ್ಮ ಹಠದ ಸ್ವಭಾವ ಬಿಟ್ಟರೆ, ಎಲ್ಲವೂ ನೀವಂದುಕೊಳ್ಳುವಂತೆ ನಡೆಯಲಿದೆ. ಸ್ವ ಉದ್ಯೋಗಿಗಳು ಉತ್ತಮ ಆದಾಯ ಗಳಿಸುವರು.
 
ಮಕರ: ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಹಿರಿಯರಿಂದ ಸಲಹೆ, ಸೂಚನೆ ಸಿಕ್ಕಿ ಸಂಭಾವ್ಯ ಅಪಾಯಗಳು ತಪ್ಪಲಿವೆ. ಉದ್ಯೋಗದಲ್ಲಿ ನಿಮ್ಮ ಮೇಲೆ ಗುರುತರ ಜವಾಬ್ಧಾರಿ ಬೀಳಲಿದೆ. ಆದರೆ ಸಹೋದ್ಯೋಗಿಗಳ ಸಹಕಾರ ನಿಮಗೆ ಜಯ ತಂದುಕೊಡುವುದು.
 
ಕುಂಭ: ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚುಗಳೂ ಅಧಿಕವಾಗುವುದು. ಮಹಿಳೆಯರೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ. ಮನೆಯಲ್ಲಿ ಶುಭ ಕಾರ್ಯಗಳನ್ನು ನಡೆಸಲು ಚಿಂತನೆ ನಡೆಸುವಿರಿ. ವಿವೇಚನೆಯಿಂದ ಹೆಜ್ಜೆಯಿಡಿ.
 
 
ಮೀನ: ಆರ್ಥಿಕವಾಗಿ ಧನಾಗಮನವಾಗಿ ಚೇತರಿಕೆ ಕಾಣುವಿರಿ. ಆದರೆ ಪುಕ್ಸಟೆ ಸಲಹೆ ನೀಡುವವರ ಬಗ್ಗೆ ಉಪೇಕ್ಷೆ ಬೇಡ. ಸಂಗಾತಿಯ ಮಾತಿಗೆ ಕಿವಿಗೊಡದಿದ್ದರೆ ತಕ್ಕ ಬೆಲೆ ತೆರಬೇಕಾದೀತು. ತಾಳ್ಮೆಯಿಂದ ವ್ಯವಹರಿಸಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಪೂಜೆಗೆ ಮೊದಲು ಸಂಕಲ್ಪ ಮಾಡುವುದರ ಮಹತ್ವವೇನು ಗೊತ್ತಾ?

ಬೆಂಗಳೂರು: ದೇವಾಲಯವಿರಲಿ, ಮನೆಯಲ್ಲೇ ಏನಾದರೂ ಪೂಜೆ ಮಾಡಿಸುತ್ತಿರಲಿ, ಪೂಜೆಗೆ ಮೊದಲು ಸಂಕಲ್ಪ ಮಾಡುವ ...

news

ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿಮ್ಮ ವೃತ್ತಿ ಬದುಕಿನ ಭವಿಷ್ಯ ಹೀಗಿರುತ್ತದೆ

ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ...

news

ಜನ್ಮ ದಿನಾಂಕಕ್ಕೆ ಅನುಗುಣವಾಗಿ ಈ ವರ್ಷ ನಿಮ್ಮ ಭವಿಷ್ಯ ಹೇಗಿರುತ್ತದೆ ಗೊತ್ತಾ?

ಬೆಂಗಳೂರು: ಜನ್ಮ ದಿನಾಂಕಕ್ಕೆ ಅನುಗುಣವಾಗಿ ಒಬ್ಬೊಬ್ಬರಿಗೆ ಅದೃಷ್ಟ ಸಂಖ್ಯೆ ಎಂದಿರುತ್ತದೆ. ಆಯಾ ಜನ್ಮ ...

news

ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ಉತ್ತಮ ಮತ್ತು ಕೆಟ್ಟ ಸ್ವಭಾವಗಳು ಹೀಗಿರುತ್ತವೆ!

ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ಒಂದೊಂದು ರೀತಿಯಿರುತ್ತದೆ. ದಿನಕ್ಕೊಂದು ರಾಶಿಯವರ ಗುಣ ಮತ್ತು ...