ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ದೈವ ಭಕ್ತಿ ಹೆಚ್ಚುವುದು. ಕಚೇರಿಯಲ್ಲಿ ಉಲ್ಲಾಸದಾಯಕ ವಾತಾವರಣವಿರಲಿದೆ. ಆದರೆ ಸಂಗಾತಿ ಜತೆಗೆ ಕಿರಿ ಕಿರಿಯಾಗುವುದು. ಆರ್ಥಿಕವಾಗಿ ಧನಾಗಮನಕ್ಕೆ ಕೊರತೆಯಿರದು. ಹೊಸ ಉದ್ಯೋಗಾವಕಾಶಗಳಿಗಾಗಿ ಹುಡುಕಾಟ ನಡೆಸುವಿರಿ.ವೃಷಭ: ಆದಾಯ ಹೆಚ್ಚಿದಷ್ಟೇ ಖರ್ಚು ವೆಚ್ಚಗಳೂ ಹೆಚ್ಚುವುದು. ಹೊಸ ಯೋಜನೆಗಳಿಗೆ ಕೈ ಹಾಕುವಿರಿ. ಮಹಿಳೆಯರಿಗೆ ತವರು ಮನೆಯಿಂದ ಶುಭ ಸುದ್ದಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರಕಲಿದೆ.ಮಿಥುನ: ಕುಟುಂಬದ ಕಾರ್ಯ ನಿಮಿತ್ತ ದೂರ ಸಂಚಾರ ಕೈಗೊಳ್ಳಬೇಕಾಗುತ್ತದೆ.