ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಶನಿವಾರ, 23 ಫೆಬ್ರವರಿ 2019 (08:46 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಕಾರ್ಯದೊತ್ತಡದಿಂದ ಹೈರಾಣಾಗಲಿದ್ದೀರಿ. ಇದರಿಂದ ಮನೆಯಲ್ಲೂ ಸಣ್ಣ ಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯ ಮಾಡಿಕೊಳ್ಳುವಿರಿ. ಆದರೆ ಕೋಪದ ಕೈಗೆ ಬುದ್ಧಿ ಕೊಟ್ಟು ಸಂಬಂಧ ಹಾಳುಮಾಡಿಕೊಳ್ಳಬೇಡಿ. ಹೊಸ ವ್ಯವಹಾರಗಳಿಗೆ ಸದ್ಯಕ್ಕೆ ಕೈ ಹಾಕುವುದು ಬೇಡ.
 
ವೃಷಭ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸಗಳಿಗೆ ಮನ್ನಣೆ ಸಿಕ್ಕಿ ಸ್ಥಾನ ಮಾನ ಉತ್ತಮಗೊಳ್ಳುವುದು. ಸಹೋದರರೊಂದಿಗೆ ಮನೆಯಲ್ಲಿ ಮಾಡಬೇಕಾದ ಶುಭ ಕಾರ್ಯಗಳಿಗೆ ಚಾಲನೆ ನೀಡುವಿರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಪರಿಹಾರ.
 
ಮಿಥುನ: ಎಷ್ಟೇ ಹಣ, ಯಶಸ್ಸು, ಕೀರ್ತಿ ಸಂಪಾದಿಸಿದರೂ ಮನಸ್ಸಿಗೆ ಯಾವುದೋ ಚಿಂತೆ ಕಾಡಿ ನೆಮ್ಮದಿ ಇರದು. ಆರ್ಥಿಕವಾಗಿ ಖರ್ಚುವೆಚ್ಚಗಳು ಅಧಿಕವಾಗುತ್ತದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುವುದು.
 
ಕರ್ಕಟಕ: ಕಾರ್ಯಗಳಿಗೆ ಅಡ್ಡಿ ಕಂಡುಬಂದರೂ ಅಂತಿಮವಾಗಿ ಜಯ ನಿಮ್ಮದಾಗುತ್ತದೆ. ವ್ಯವಹಾರಗಳಲ್ಲಿ ಕೊಂಚ ಚೇತರಿಕೆ ಕಂಡುಬರುತ್ತದೆ. ಮಕ್ಕಳ ಭವಿಷ್ಯಕ್ಕೆ ದಾರಿ ಮಾಡುವಿರಿ. ದೂರ ಸಂಚಾರ ಕೈಗೊಳ್ಳುವಿರಿ.
 
ಸಿಂಹ: ಉದ್ಯೋಗದಲ್ಲಿ ಯಶಸ್ಸು ನಿಮ್ಮದಾಗುವುದು. ಆದರೆ ಬೇಡದ ಮಾತುಗಳಿಗೆ ಕಿವಿಗೊಡುತ್ತಿದ್ದರೆ ಚಿಂತೆ ಕಾಡುವುದು. ಹಣಕಾಸಿನ ಮುಗ್ಗಟ್ಟುಗಳು ತಲೆದೋರುತ್ತವೆ. ಆದರೆ ಆಪ್ತ ಮಿತ್ರರಿಂದ ಸಕಾಲದಲ್ಲಿ ನೆರವು ದೊರೆಯುವುದು.
 
ಕನ್ಯಾ: ನಿಮ್ಮದೇ ಉದಾಸೀನ ಪ್ರವೃತ್ತಿ ನಿಮಗೆ ಮುಳುವಾಗಲಿದೆ.  ಕಾರ್ಯದಲ್ಲಿ ವಿಳಂಬ, ವಿಘ್ನಗಳು ಎದುರಾಗುತ್ತವೆ. ಆದರೆ ಆಕಸ್ಮಿಕವಾಗಿ ಧನಾಗಮನವಾಗಲಿದೆ. ವೃತ್ತಿ ಬದಲಾವಣೆ ಬಗ್ಗೆ ಯೋಚನೆ ಮಾಡುವಿರಿ.
 
ತುಲಾ: ದೈವಾನುಗ್ರಹ ನಿಮ್ಮ ಮೇಲೆ ಇಂದು ಹೆಚ್ಚಾಗಿದೆ. ಹೀಗಾಗಿ ಕಾರ್ಯದಲ್ಲಿ ಜಯ, ಕೀರ್ತಿ ಸಂಪಾದಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಅತೀವ ಪ್ರಗತಿ ಕಂಡುಬರಲಿದೆ. ಆರೋಗ್ಯ ಭಾಗ್ಯವೂ ಸುಧಾರಿಸುವುದು.
 
ವೃಶ್ಚಿಕ: ವ್ಯಾಪಾರ, ವ್ಯವಹಾರಗಲ್ಲಿ ಯಶಸ್ಸು. ಆರ್ಥಿಕವಾಗಿ ಚೇತರಿಕೆ ಕಂಡುಬರುತ್ತದೆ. ಅವಿವಾಹಿತರಿಗೆ ಮನಸ್ಸಿಗೆ ಒಪ್ಪುವಂತಹ ಸಂಬಂಧಗಳು ಕೂಡಿಬರುತ್ತವೆ. ಆದರೆ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
 
ಧನು: ಆರೋಗ್ಯ ಸಮಸ್ಯೆ ನಿಮ್ಮ ಚಿಂತೆಗೆ ಕಾರಣವಾಗುವುದು. ವಿದ್ಯಾರ್ಥಿಗಳು ತೀವ್ರ ಪ್ರಯತ್ನ ನಡೆಸಬೇಕಾಗುತ್ತದೆ. ಸಂಗಾತಿಯ ಸಹಕಾರ ದೊರೆಯಲಿದೆ. ಶುಭ ಮಂಗಲ ಕಾರ್ಯದ ಏರ್ಪಾಟಿನ ಬಗ್ಗೆ ಚಿಂತನೆ ನಡೆಸುವಿರಿ.
 
ಮಕರ: ಉತ್ಸಾಹದಿಂದ ನಿಮ್ಮ ವೃತ್ತಿಯಲ್ಲಿ ತೊಡಗಿಸಿಕೊಂಡರೂ ಅದಕ್ಕೆ ತಕ್ಕ ಯಶಸ್ಸು ಸಿಗದೇ ನಿರಾಸೆಯಾಗಬಹುದು. ಆದರೆ ಧನಾಗಮನಕ್ಕೆ ಕೊರತೆಯಿಲ್ಲ. ತಾಳ್ಮೆಯಿಂದಿದ್ದರೆ ನಿಧಾನವಾಗಿ ಅಭಿವೃದ್ಧಿ ಕಾಣುವಿರಿ.
 
ಕುಂಭ: ಆದಾಯದಷ್ಟೇ ಖರ್ಚು ವೆಚ್ಚಗಳೂ ಹೆಚ್ಚುವುದು. ಸಹೋದರರ ವಿವಾಹ ಸಂಬಂಧ ಓಡಾಟ ನಡೆಸುವಿರಿ. ಹಿರಿಯರ ಸಲಹೆ ಸೂಚನೆ ಪಡೆದೇ ಮುನ್ನಡೆಯಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.
 
ಮೀನ: ನಿಮ್ಮದೇ ವಿವೇಚನೆಯ ಕೊರತೆಯಿಂದ ಕೆಲವೊಂದು ತಪ್ಪುಗಳಾಗಬಹುದು. ಇದು ನಿಮ್ಮ ಜೀವನದ ದಿಕ್ಕು ಬದಲಾಯಿಸಲಿದೆ. ಮಾತಿಗೆ ಕೊಂಚ ಕಡಿವಾಣ ಹಾಕಿದರೆ ಒಳ್ಳೆಯದು. ತಾಳ್ಮೆಯಿಂದಿದ್ದರೆ ದಿನದಂತ್ಯಕ್ಕೆ ನೆಮ್ಮದಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಮೇಷ ರಾಶಿಯವರ ಲವ್ ಲೈಫ್ ಹೇಗಿರುತ್ತದೆ ಗೊತ್ತಾ?

ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ...

news

ಮಾರ್ಚ್ ತಿಂಗಳಲ್ಲಿ ಹುಟ್ಟಿದವರಿಗೆ ಬರುವ ರೋಗಗಳು ಯಾವುವು ಗೊತ್ತಾ?

ಬೆಂಗಳೂರು: ನಮ್ಮ ದೇಹದ ಆರೋಗ್ಯಕ್ಕೂ ಹುಟ್ಟಿದ ತಿಂಗಳಿಗೂ ಸಂಬಂಧವಿದೆ ಎನ್ನುವುದು ಕೇವಲ ಜ್ಯೋತಿಷ್ಯ ...

news

ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿಮ್ಮ ವೃತ್ತಿ ಬದುಕಿನ ಭವಿಷ್ಯ ಹೀಗಿರುತ್ತದೆ

ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ...

news

ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ಉತ್ತಮ ಮತ್ತು ಕೆಟ್ಟ ಸ್ವಭಾವಗಳು ಹೀಗಿರುತ್ತವೆ!

ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ಒಂದೊಂದು ರೀತಿಯಿರುತ್ತದೆ. ದಿನಕ್ಕೊಂದು ರಾಶಿಯವರ ಗುಣ ಮತ್ತು ...