ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಮಂಗಳವಾರ, 26 ಫೆಬ್ರವರಿ 2019 (08:59 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ವೃತ್ತಿರಂಗದಲ್ಲಿ ನಿರೀಕ್ಷಿತ ಮನ್ನಡೆ ಸಾಧಿಸುತ್ತೀರಿ. ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುವುದು. ಆದರೆ ಆರೋಗ್ಯ ಕೈ ಕೊಟ್ಟು ದೇಹಾಯಾಸವಾಗುವುದು. ಹಿರಿಯರ ಆರೋಗ್ಯ ಚಿಂತೆಗೀಡು ಮಾಡುವುದು.
 
ವೃಷಭ: ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಬೇಕಾದರೂ ಕಠಿಣ ಪರಿಶ್ರಮ ಅಗತ್ಯ. ಅವಿವಾಹಿತರಿಗೆ ವಿವಾಹ ಭಾಗ್ಯ. ರಾಜಕೀಯವಾಗಿ ನಿಮ್ಮ ಸ್ಥಾನ ಮಾನ ಹೆಚ್ಚುವುದು. ಕಷ್ಟದ ಸಂದರ್ಭದಲ್ಲಿ ಮಿತ್ರರ ಸಹಕಾರ ದೊರೆಯುವುದು.
 
ಮಿಥುನ: ಅಂದುಕೊಂಡ ಕಾರ್ಯಗಳು ಅಡೆತಡೆಗಳ ನಡುವೆಯೂ ನೆರವೇರುವುದು. ನಿರುದ್ಯೋಗಿಗಳಿಗೆ ಕೊಂಚ ನಿರಾಶಾದಾಯಕ ದಿನ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಸಿಗುವುದು. ಖರ್ಚು ವೆಚ್ಚಗಳು ಅಧಿಕವಾಗುವುದು.
 
ಕರ್ಕಟಕ: ಅನಿರೀಕ್ಷಿತವಾಗಿ ಬರುವ ನೆಂಟರು ಶುಭ ಸುದ್ದಿ ತರಲಿದ್ದಾರೆ. ವ್ಯವಹಾರದಲ್ಲಿ ವಿಘ್ನಗಳು ತೋರಿಬಂದೀತು. ಹಿತಶತ್ರುಗಳಿಂದ ವಂಚನೆಗೊಳಗಾಗುವ ಸಂಭವವಿದೆ. ಎಚ್ಚರ ಅಗತ್ಯ.
 
ಸಿಂಹ: ಅವಿವಾಹಿತರಿಗೆ ಮನಸ್ಸಿಗೆ ಒಪ್ಪುವ ಸಂಬಂಧ ಕೂಡಿಬರಲಿದೆ. ವ್ಯವಹಾರದಲ್ಲಿ ಕೊಂಚ ಹಿನ್ನಡೆ ಅನುಭವಿಸಬೇಕಾದೀತು. ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ. ಮಕ್ಕಳಿಂದ ಶುಭ ಸುದ್ದಿ.
 
ಕನ್ಯಾ: ಅಂದುಕೊಂಡ ಕಾರ್ಯ ನೆರವೇರಲು  ದೂರ ಸಂಚಾರ ಮಾಡುವಿರಿ. ನಿಮ್ಮದೇ ಜಾಣ್ಮೆಯಿಂದ ಕಚೇರಿಯಲ್ಲಿ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಆರೋಗ್ಯದಲ್ಲಿ ಹೆಚ್ಚಿನ ಕಾಳಜಿ ಅಗತ್ಯ. ಸಹೋದ್ಯೋಗಿಗಳು ನಿಮ್ಮ ಏಳಿಗೆ ಕಂಡು ಅಸೂಯೆ ಪಡುವರು.
 
ತುಲಾ: ಇದುವರೆಗೆ ಮಾಡಬೇಕೆಂದಿದ್ದ ಕಾರ್ಯಗಳು ನೆರವೇರಿ ಮನಸ್ಸಿಗೆ ನೆಮ್ಮದಿ ಮೂಡುವುದು. ಆಸ್ತಿ ವ್ಯವಹಾರಕ್ಕೆ ಕೈ ಹಾಕಿದರೆ ಲಾಭ ನಿಮ್ಮದಾಗುವುದು. ಹೊಸ ವಸ್ತುಗಳನ್ನು ಖರೀದಿ ಮಾಡುವಿರಿ. ಆದರೆ ಖರ್ಚಿನ ಬಗ್ಗೆ ಮಿತಿ ಇರಲಿ.
 
ವೃಶ್ಚಿಕ: ಶನಿಯ ವಕ್ರದೃಷ್ಟಿ ನಿಮ್ಮ ಮೇಲಿದೆ. ಹೀಗಾಗಿ ಕಾರ್ಯದಲ್ಲಿ ವಿಘ್ನ, ತೊಂದರೆಗಳನ್ನು ಎದುರಿಸುವಿರಿ. ಆದರೆ ತಾಳ್ಮೆಯಿಂದ ಮುನ್ನಡೆದರೆ ಮುಂದೊಂದು ದಿನ ಯಶಸ್ಸು ನಿಮ್ಮದಾಗುತ್ತದೆ. ಮನಸ್ಸಿಗೆ ಕಿರಿ ಕಿರಿಯಾಗುತ್ತಿದ್ದರೆ ದೇವತಾ ಪ್ರಾರ್ಥನೆ ಮಾಡಿ.
 
ಧನು: ಮಕ್ಕಳಿಂದ ಬೇರಾಗುವ ಬೇಸರ ಮೂಡಲಿದೆ. ಹಿರಿಯರ ಆರೋಗ್ಯ ಚಿಂತೆಗೀಡುಮಾಡಲಿದೆ. ಸಂಗಾತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ. ಹೊಸ ಉದ್ಯೋಗ ಕಂಡುಕೊಳ್ಳುವಿರಿ.
 
ಮಕರ: ಯಾವುದೇ ಹೊಸ ವ್ಯವಹಾರಕ್ಕೆ ಕೈ ಹಾಕುವ ಮೊದಲು ನಾಲ್ಕು ಬಾರಿ ಯೋಚನೆ ಮಾಡಿ. ನಿಮ್ಮ ಸುತ್ತಲಿರುವ  ನಯವಂಚಕರು ನಿಮಗೆ ಮೋಸ ಮಾಡುವ ಸಾಧ‍್ಯತೆಯಿದೆ. ಪ್ರೇಮಿಗಳು ಮನೆಯವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಎಚ್ಚರವಾಗಿರಿ.
 
ಕುಂಭ: ಮನೆಯಲ್ಲಿ ಶುಭಮಂಗಲ ಕಾರ್ಯ ನೆರವೇರಿಸಲು ತಯಾರಿ ನಡೆಸುವಿರಿ. ಸಂಗಾತಿಯ ಅಸಹಕಾರ ಕಿರಿ ಕಿರು ಉಂಟು ಮಾಡುವುದು. ಆದರೆ ತಾಳ್ಮೆಯಿಂದ ಎದುರಿಸಿ. ಕಚೇರಿಯಲ್ಲೂ ಹೆಚ್ಚಿನ ಜವಾಬ್ಧಾರಿ ನಿಮ್ಮ ಹೆಗಲೇರಲಿದೆ.
 
ಮೀನ: ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ  ಫಲ ದೊರೆಯಲಿದೆ. ಸಾಕಷ್ಟು ಖರ್ಚು ವೆಚ್ಚಗಳಿದ್ದು, ಯೋಚಿಸಿ ಮುನ್ನಡೆಯಿರಿ. ಏನೇ ಮಾಡುವ ಮೊದಲು ಸಂಗಾತಿಯ ಗಮನಕ್ಕೆ ತಂದು ಮುಂದುವರಿಯುವುದು ಒಳಿತು. ದಿನದಂತ್ಯಕ್ಕೆ ಶುಭ ಸುದ್ದಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                  ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಸಾಡೇ ಸಾತ್, ಶನಿಪ್ರಭಾವ ಕಡಿಮೆಯಾಗಲು ಶನಿವಾರ ಹೀಗೆ ಮಾಡಿದರೆ ಸಾಕು

ಬೆಂಗಳೂರು: ಸಾಡೇ ಸಾತ್ ಶನಿಪ್ರಭಾವದಿಂದ ಕೈ ಹಿಡಿದ ಕಾರ್ಯಗಳು ನೆರವೇರುತ್ತಿಲ್ಲ, ಜೀವನದಲ್ಲಿ ಕಷ್ಟಗಳ ...

news

ಮಿಥುನ ರಾಶಿಯವರ ಲವ್ ಲೈಫ್ ಹೇಗಿರುತ್ತದೆ ಗೊತ್ತಾ?

ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ...

news

ಮೇ ತಿಂಗಳಲ್ಲಿ ಹುಟ್ಟಿದವರಿಗೆ ಬರುವ ರೋಗಗಳು ಯಾವುವು ಗೊತ್ತಾ?

ಬೆಂಗಳೂರು: ನಮ್ಮ ದೇಹದ ಆರೋಗ್ಯಕ್ಕೂ ಹುಟ್ಟಿದ ತಿಂಗಳಿಗೂ ಸಂಬಂಧವಿದೆ ಎನ್ನುವುದು ಕೇವಲ ಜ್ಯೋತಿಷ್ಯ ...

news

ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿಮ್ಮ ವೃತ್ತಿ ಬದುಕಿನ ಭವಿಷ್ಯ ಹೀಗಿರುತ್ತದೆ

ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ...