ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಗುರುವಾರ, 28 ಫೆಬ್ರವರಿ 2019 (08:46 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಹೊಸ ಆಸ್ತಿ ಖರೀದಿ ವ್ಯವಹಾರ ಮಾಡುವಿರಿ. ಹಿರಿಯರಿಂದ ಸೂಕ್ತ ಸಲಹೆಗಳು ಬರುವುದು. ಆದರೆ ಉದ್ಯೋಗದಲ್ಲಿ ಕಾರ್ಯದೊತ್ತಡ ಹೆಚ್ಚುವುದು ಮತ್ತು ಅರೋಗ್ಯ ಕೈ ಕೊಡುವುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ.
 
ವೃಷಭ: ದೂರ ಸಂಚಾರ ಮಾಡಬೇಕಾಗಿ ಬರುವುದು. ಆದರೆ ಮಾರ್ಗ ಮಧ್ಯದಲ್ಲಿ ವಾಹನ ಕೈ ಕೊಟ್ಟು ತೊಂದರೆ ಎದುರಿಸಬೇಕಾದೀತು. ನೀರಿಗೆ ಸಂಬಂಧಿಸಿದಂತೆ ನೆರೆ ಹೊರೆಯವರೊಡನೆ ಕಲಹವಾಗಲಿದೆ. ಸಂಗಾತಿಯ ಅಭಿಪ್ರಾಯಗಳನ್ನು ಆಲಿಸಿರಿ.
 
ಮಿಥುನ: ಆರ್ಥಿಕ ಪರಿಸ್ಥಿತಿ ಕೊಂಚ ಮಟ್ಟಿಗೆ ಏರುಪೇರಾಗುವುದು. ನಿಮ್ಮ ಕೆಲಸಗಳಿಗೆ ಹಿರಿಯರಿಂದ ವಿರೋಧ ವ್ಯಕ್ತವಾಗುವುದು. ಇದರಿಂದ ಮನೆಯಲ್ಲಿ ಒಂದು ರೀತಿಯ ಬೇಸರದ ವಾತಾವರಣವಿರುವುದು. ತಾಳ್ಮೆಯಿಂದ ಹೆಜ್ಜೆಯಿಡಬೇಕು.
 
ಕರ್ಕಟಕ: ಆಸ್ತಿಗೆ ಸಂಬಂಧಿಸಿದಂತೆ ಕೋರ್ಟಿನಲ್ಲಿ ವ್ಯಾಜ್ಯಗಳಿದ್ದರೆ ಅದು ನಿಮ್ಮ ಪರವಾಗಿ ಬರುವುದು. ನೂತನ ದಂಪತಿಗಳು ಸರಸಮಯ ಕ್ಷಣ ಕಳೆಯುವರು. ಆರ್ಥಿಕವಾಗಿಯೂ ಚೇತರಿಕೆ ಕಾಣುವಿರಿ. ಒಟ್ಟಾರೆ ಇಂದು ನಿಮಗೆ ಶುಭದಿನ.
 
ಸಿಂಹ: ಮಹಿಳೆಯರಿಂದ ತೊಂದರೆಗೆ ಸಿಲುಕಿಕೊಳ್ಳಬೇಕಾದೀತು. ಮಕ್ಕಳ ಕೆಟ್ಟವರೊಂದಿಗಿನ  ಸ್ನೇಹದ ಬಗ್ಗೆ ಚಿಂತೆಯಾಗುವುದು. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ. ಮಿತ್ರರೂ ಇಂದು ಶತ್ರುಗಳಾಗುವರು. ಎಚ್ಚರಿಕೆ ಅಗತ್ಯ.
 
ಕನ್ಯಾ: ಆಯ-ವ್ಯಯ ಲೆಕ್ಕಾಚಾರಗಳನ್ನು ಸರಿಯಾಗಿಟ್ಟುಕೊಳ್ಳಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವಿರಿ. ಶಿಕ್ಷಕರಿಗೆ ಇಂದು ಶುಭ ದಿನ. ಹಾಗೆಯೇ ವಿದ್ಯಾರ್ಥಿಗಳೂ ನಿರೀಕ್ಷಿತ ಫಲ ಕಾಣುವರು.
 
ತುಲಾ: ಆರೋಗ್ಯದಲ್ಲಿ ಸುಧಾರಣೆಯಾಗದೇ ಚಿಂತೆಯಾಗುವುದು. ಇದರಿಂದ ನಿಮ್ಮ ದೈನಂದಿನ ಕೆಲಸಕ್ಕೂ ತೊಂದರೆ. ವಾಹನ ಚಲಾಯಿಸುವಾಗ ಎಚ್ಚರವಿರಲಿ. ಹೊಸ ಕಾರ್ಯಗಳಿಗೆ ಕೈ ಹಾಕುವಾಗ ವಿಘ್ನಗಳು ಎದುರಾದೀತು.
 
ವೃಶ್ಚಿಕ: ಆಸ್ತಿ ವ್ಯಾಜ್ಯಗಳು ಕೋರ್ಟು ಮೆಟ್ಟಿಲೇರಲಿವೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಲಿವೆ. ಕಾರ್ಯನಿಮಿತ್ತ ಸಂಚಾರ ಮಾಡಿದರೆ ಜಯ ಸಿಗುವುದು. ಆದರೆ ಹೊಸ ಕಾರ್ಯಗಳಿಗೆ ಕೈ ಹಾಕುವ ಮುನ್ನ ಸರಿಯಾಗಿ ಆಲೋಚಿಸಿ ಮುನ್ನಡೆಯುವುದು ಒಳ್ಳೆಯದು.
 
ಧನು: ಆದಾಯವಿದ್ದಷ್ಟೇ ಖರ್ಚೂ ಹೆಚ್ಚುವುದು. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ. ಆದರೆ ಕುಟುಂಬದಲ್ಲಿ ಸಂಗಾತಿಯೊಂದಿಗೆ ಮನಸ್ತಾಪವಾಗುವುದು. ಮಕ್ಕಳ ಆರೋಗ್ಯ ಚಿಂತೆಗೀಡುಮಾಡುವುದು.
 
ಮಕರ: ಉದ್ಯೋಗಸ್ಥರಿಗೆ ವಿದೇಶ ಪ್ರವಾಸದ ಯೋಗವಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ದೊರಕುವುದು. ಮನೆಯಲ್ಲಿ ವಿವಾಹಕ್ಕೆ ಸಂಬಂಧಿಸಿದ ಶುಭ ಕಾರ್ಯ ನೆರವೇರಿಸುವಿರಿ.
 
ಕುಂಭ: ಬಹುದಿನಗಳಿಂದ ಬಾಕಿಯಿದ್ದ ಸಾಲ ಪಾವತಿಯಾಗಿ ಚೇತರಿಕೆ ಕಾಣುವಿರಿ. ದೇವತಾ ಕಾರ್ಯಗಳನ್ನು ಕೈಗೊಳ್ಳುವಿರಿ. ಅವಿವಾಹಿತರು ಸ್ವಲ್ಪ ದಿನ ಕಾಯಬೇಕು. ಮನೆಗೆ ಅನಿರೀಕ್ಷಿತವಾಗಿ ಬರುವ ನೆಂಟರಿಂದ ಶುಭ ಸುದ್ದಿ.
 
ಮೀನ: ದೇಹದ ಆರೋಗ್ಯ ಸ್ಥಿತಿ ಮಾನಸಿಕ ಚಿಂತೆಯನ್ನುಂಟುಮಾಡುವುದು. ಕೊಂಚ ಆಲಸ್ಯ ತೋರಿಬರಲಿದೆ. ಹಿರಿಯರೊಂದಿಗೆ ವಾಗ್ವಾದಕ್ಕಿಳಿಯಬೇಡಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಹುದ್ದೆ ಸಿಗುವುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                  ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಅಶ್ವಿನಿ ನಕ್ಷತ್ರದವರು ಯಾರ ದೇವರನ್ನು ಪೂಜೆ ಮಾಡಿದರೆ ಏನು ಫಲ?

ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ...

news

ಕರ್ಕಟಕ ರಾಶಿಯವರ ಲವ್ ಲೈಫ್ ಹೇಗಿರುತ್ತದೆ ಗೊತ್ತಾ?

ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ...

news

ಮೇ ತಿಂಗಳಲ್ಲಿ ಹುಟ್ಟಿದವರಿಗೆ ಬರುವ ರೋಗಗಳು ಯಾವುವು ಗೊತ್ತಾ?

ಬೆಂಗಳೂರು: ನಮ್ಮ ದೇಹದ ಆರೋಗ್ಯಕ್ಕೂ ಹುಟ್ಟಿದ ತಿಂಗಳಿಗೂ ಸಂಬಂಧವಿದೆ ಎನ್ನುವುದು ಕೇವಲ ಜ್ಯೋತಿಷ್ಯ ...

news

ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿಮ್ಮ ವೃತ್ತಿ ಬದುಕಿನ ಭವಿಷ್ಯ ಹೀಗಿರುತ್ತದೆ

ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ...