ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಶನಿವಾರ, 2 ಮಾರ್ಚ್ 2019 (09:02 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಇಂದು ನೀವು ಕಠಿಣ ಪರಿಶ್ರಮ ಪಡಬೇಕಾದ ದಿನ. ಆರ್ಥಿಕವಾಗಿ ಆದಾಯಕ್ಕೆ ಏನೂ ಕೊರತೆಯಾಗದು. ವ್ಯಾಪಾರ ವ್ಯವಹಾರಗಳಲ್ಲೂ ಜಯ ಗಳಿಸುವಿರಿ. ಆದರೆ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
 
ವೃಷಭ: ಕುಲದೇವರ ಹರಕೆ ತೀರಿಸಲು ದೂರದ ಊರಿಗೆ ಪ್ರಯಾಣ ಮಾಡುವಿರಿ. ಪೂರ್ವ ದಿಕ್ಕಿನ ಪ್ರಯಾಣ ನಿಮಗೆ ಶುಭವನ್ನುಂಟುಮಾಡುವುದು. ಉದ್ಯೋಗ ಕ್ಷೇತ್ರದಲ್ಲಿ ಮನ್ನಣೆ ಗಳಿಸುವಿರಿ. ವಿದ್ಯಾರ್ಥಿಗಳಿಗೆ ಶುಭ ದಿನ.
 
ಮಿಥುನ: ನಿಮ್ಮ ಕ್ರಿಯಾತ್ಮಕ ಕೆಲಸಗಳಿಗೆ ಮೆಚ್ಚುಗೆ ಪಡೆಯಲಿದ್ದೀರಿ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ಹೆಚ್ಚುವುದು. ಆಸ್ತಿ ವ್ಯವಹಾರಗಳಲ್ಲಿ ದಾಯಾದಿಗಳಿಂದ ಮೋಸವಾಗುವ ಸಾಧ್ಯತೆಯಿದೆ. ಎಚ್ಚರಿಕೆ ಅಗತ್ಯ.
 
ಕರ್ಕಟಕ: ಸಂಕಟಗಳು ಬಂದಾಗ ಸೂಕ್ತ ಸಮಯದಲ್ಲಿ ಹಿರಿಯರ ಸಲಹೆ ಪಡೆದರೆ ವಿಘ್ನಗಳು ನಿವಾರಣೆಯಾಗುವುದು. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವಿರಿ. ಅವಿವಾಹಿತರಿಗೆ ವಿವಾಹ ಭಾಗ್ಯ.
 
ಸಿಂಹ: ನೀವು ಬಾಯ್ತಪ್ಪಿ ಆಡುವ ಮಾತಿನಿಂದ ನಿಂದನೆಗೆ ಗುರಿಯಾಗಬೇಕಾಗುವುದು. ತಾಳ್ಮೆಯಿಂದ ನಿಭಾಯಿಸಿದರೆ ಎಲ್ಲಾ ಸಮಸ್ಯೆಗಳೂ ಪರಿಹಾರವಾಗುವುದು. ಕಾರ್ಯ ನಿಮಿತ್ತ ಸಂಚಾರ ಮಾಡುವಿರಿ.
 
ಕನ್ಯಾ: ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ಸಾಕಷ್ಟು ಲಾಭ ಗಳಿಸುವರು. ಆದರೆ ಹಿತಶತ್ರುಗಳು ನಿಮ್ಮ ಬಗ್ಗೆ ಚಾಡಿ ಮಾತು ಹಬ್ಬಿಸುವರು. ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗಕ್ಕೆ ಸ್ವಲ್ಪ ದಿನ ಕಾಯಬೇಕಾಗುತ್ತದೆ.
 
ತುಲಾ: ಆರೋಗ್ಯ ಸುಧಾರಣೆಯಾಗಲಿದೆ. ಮಹಿಳೆಯರಿಗೆ ಉದ್ಯೋಗದಲ್ಲಿ ಮುನ್ನಡೆ. ಕೋರ್ಟು ಕಚೇರಿ ವ್ಯವಹಾರಗಳಿಗೆ ಅಲೆದಾಡಬೇಕಾಗುತ್ತದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.
 
ವೃಶ್ಚಿಕ: ಅಂದುಕೊಂಡ ಕಾರ್ಯಗಳಿಗೆ ವಿಘ್ನಗಳು ಎದುರಾಗಿ ಅರ್ಧಕ್ಕೆ ನಿಲ್ಲುವುದು. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುವುದು. ಸಹೋದರರೊಂದಿಗೆ ಮನಸ್ತಾಪ ಸಾಧ್ಯತೆ. ಕುಲದೇವರ ಆರಾಧನೆಯಿಂದ ಶುಭ ಫಲ ಸಿಗುವುದು.
 
ಧನು: ಹಿರಿಯರ ಆರೋಗ್ಯ ನಿಮ್ಮ ಚಿಂತೆಗೆ ಕಾರಣವಾಗುವುದು. ಪುರುಷ ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಕಾಣುವಿರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.
 
ಮಕರ: ನಿಮ್ಮ ಸನ್ನಡತೆಯಿಂದ ಎಲ್ಲರ ಮನಸ್ಸು ಗೆಲ್ಲುವಿರಿ. ಇದುವೇ ನಿಮಗೆ ಕಷ್ಟದ ಸಮಯದಲ್ಲೂ ಸಹಾಯಕ್ಕೆ ಬರಲಿದೆ. ವಾಹನ ಖರೀದಿ ಯೋಗವಿದೆ. ಆಸ್ತಿ ವ್ಯವಹಾರ ನಡೆಸಲು ಸ್ವಲ್ಪ ದಿನ ಕಾಯಿರಿ.
 
ಕುಂಭ: ಸಂಗಾತಿಯ ಬೇಡಿಕೆಗಳನ್ನು ಪೂರೈಸಿ. ಅವಿವಾಹಿತರಿಗೆ ಮನಸ್ಸಿಗೆ ಒಪ್ಪುವ ಸಂಬಂಧ ಕೂಡಿಬರಲಿದೆ. ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರುವುದು.
 
ಮೀನ: ನಿಮ್ಮ ಅನುಮಾನವೇ ನಿಮಗೆ ಅನಾನುಕೂಲ ಉಂಟುಮಾಡಲಿದೆ. ಯಾರನ್ನೂ ನಂಬದ ನಿಮ್ಮ ಸ್ವಭಾವ ನಿಮಗೆ ಕಾರ್ಯಾನುಕೂಲಕ್ಕೆ ಅಡ್ಡಿ ಉಂಟು ಮಾಡಲಿದೆ. ಆಕಸ್ಮಿಕವಾಗಿ ಮಿತ್ರರಿಂದ ಸಹಾಯ ಒದಗಿಬರುತ್ತದೆ. ವಿದ್ಯಾರ್ಥಿಗಳಿಗೆ ಶುಭ ದಿನ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಕೃತ್ತಿಕಾ ನಕ್ಷತ್ರದವರು ಯಾರ ದೇವರನ್ನು ಪೂಜೆ ಮಾಡಿದರೆ ಏನು ಫಲ?

ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ...

news

ಕನ್ಯಾ ರಾಶಿಯವರ ಲವ್ ಲೈಫ್ ಹೇಗಿರುತ್ತದೆ ಗೊತ್ತಾ?

ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ...

news

ಆಗಸ್ಟ್ ತಿಂಗಳಲ್ಲಿ ಹುಟ್ಟಿದವರಿಗೆ ಬರುವ ರೋಗಗಳು ಯಾವುವು ಗೊತ್ತಾ?

ಬೆಂಗಳೂರು: ನಮ್ಮ ದೇಹದ ಆರೋಗ್ಯಕ್ಕೂ ಹುಟ್ಟಿದ ತಿಂಗಳಿಗೂ ಸಂಬಂಧವಿದೆ ಎನ್ನುವುದು ಕೇವಲ ಜ್ಯೋತಿಷ್ಯ ...

news

ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿಮ್ಮ ವೃತ್ತಿ ಬದುಕಿನ ಭವಿಷ್ಯ ಹೀಗಿರುತ್ತದೆ

ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ...