ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಸೋಮವಾರ, 4 ಮಾರ್ಚ್ 2019 (08:49 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಕೌಟುಂಬಿಕವಾಗಿ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ. ಕುಲದೇವರ ದರ್ಶನ ಪಡೆಯುವಿರಿ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಲಭಿಸುವುದು. ಆರ್ಥಿಕವಾಗಿ ಹಣಕಾಸಿಗೆ ತೊಂದರೆಯಾಗದು.
 
ವೃಷಭ: ಉದ್ಯೋಗ ಬದಲಾವಣೆ ಮಾಡುವಿರಿ. ಅಂದುಕೊಂಡ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವುದು. ಸಾಲ ಪಡೆದಿದ್ದರೆ ತೀರಿಸಿ. ಹೊಸ ವ್ಯವಹಾರಕ್ಕೆ ಕೈ ಹಾಕಿದರೆ ನಷ್ಟ ಅನುಭವಿಸಬೇಕಾಗುತ್ತದೆ.
 
ಮಿಥುನ: ಕಾರ್ಯನಿಮಿತ್ತ ದೂರ ಸಂಚಾರ ಕೈಗೊಳ್ಳಲಿದ್ದೀರಿ. ಆದರೆ ಅಡೆತಡೆಗಳು ತೋರಿಬಂದಾವು. ಮಕ್ಕಳ ವಿಚಾರದಲ್ಲಿ ಚಿಂತೆ ಮಾಡಬೇಕಾಗಬಹುದು. ಉದ್ಯೋಗದಲ್ಲಿ ಕಿರಿ ಕಿರಿ ಮತ್ತು ಆರ್ಥಿಕ ಮುಗ್ಗಟ್ಟುಗಳು ತೋರಿಬರುತ್ತವೆ.
 
ಕರ್ಕಟಕ: ಕುಟುಂಬದಲ್ಲಿ ನಿಮ್ಮ ಇಷ್ಟಪ್ರಕಾರವೇ ಕೆಲಸ ಕಾರ್ಯಗಳು ನಡೆಯಲಿವೆ. ಉದ್ಯೋಗದಲ್ಲಿ ಜವಾಬ್ಧಾರಿ ಹೆಚ್ಚಾಗಲಿದೆ. ಆದರೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ. ವಾದ ವಿವಾದಗಳಿಂದ ದೂರವಿರಿ.
 
ಸಿಂಹ: ಆದಾಯವಿದ್ದಷ್ಟೇ ಖರ್ಚುಗಳೂ ತಲೆದೋರಲಿವೆ. ಯಾವುದೋ ಬೇಡದ ವಿಚಾರಕ್ಕೆ ತಲೆಕೆಡಿಸಿಕೊಳ್ಳುವಿರಿ. ಅಧಿಕಾರಿ ವರ್ಗದವರಿಗೆ ಅಪವಾದದ ಭೀತಿ. ಅವಿವಾಹಿತರಿಗೆ ಕಂಕಣ ಭಾಗ್ಯ ಒದಗಿಬರಲಿದೆ.
 
ಕನ್ಯಾ: ಸಮಾಜದಲ್ಲಿ ನಿಮ್ಮ ಸ್ಥಾನ ಮಾನಕ್ಕೆ ಕುಂದು ತರುವಂತಹ ಘಟನೆಗಳು ನಡೆಯಲಿವೆ. ತಾಳ್ಮೆಯಿಂದ ಹೆಜ್ಜೆಯಿಡಬೇಕು. ಅನವಶ್ಯಕ ಕಲಹದಿಂದ ದೂರವಿರಿ. ಆರೋಗ್ಯದಲ್ಲಿ ಏರುಪೇರಾಗಬಹುದು.
 
ತುಲಾ: ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯುವಿರಿ. ಕುಟುಂಬದಲ್ಲಿ ನೆಮ್ಮದಿ ನೆಲೆಸಲಿದೆ. ನೂತನ ದಂಪತಿಗಳಿಗೆ ಸಂತಾನ ಭಾಗ್ಯದ ಸೂಚನೆಗಳಿರುತ್ತವೆ. ಹೊಸ ಉದ್ಯೋಗಕ್ಕಾಗಿ ಹುಡುಕಾಟ ನಡೆಸಿ ಯಶಸ್ವಿಯಾಗುವಿರಿ.
 
ವೃಶ್ಚಿಕ: ಆರ್ಥಿಕ ಮುಗ್ಗಟ್ಟು ಎದುರಾಗಿ ಹಣ ಸಂಪಾದನೆಗೆ ಕೆಟ್ಟ ಮಾರ್ಗದ ಬಗ್ಗೆ ಮನಸ್ಸು ಚಿಂತನೆ ನಡೆಸೀತು. ಆದರೆ ನಿಮ್ಮ ಮೇಲೆ ನಿಮಗೆ ಹಿಡಿತ ಅಗತ್ಯ. ಹಿರಿಯರೊಂದಿಗೆ ಅಭಿಪ್ರಾಯಬೇಧ ಬರುತ್ತದೆ. ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಿ.
 
ಧನು: ಕುಟುಂಬದಲ್ಲಿ ಶಾಂತಿ, ಸಮಾಧಾನ ನೆಲೆಸಲಿದೆ. ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವಿರಿ. ಕಷ್ಟ ಬಂದಾಗ ಮಿತ್ರರ ಸಹಾಯ ಒದಗಿಬರಲಿದೆ. ಸಂಚಾರ ಮಾಡುವಿರಿ.
 
ಮಕರ: ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ನಿಧಾನವಾಗಿ ಚೇತರಿಕೆ ಕಾಣುವಿರಿ. ಹಿತಶತ್ರುಗಳಿಂದ ವಂಚನೆಗೊಳಗಾದಂತೆ ಎಚ್ಚರವಹಿಸಿ. ಕಾರ್ಯಾನುಕೂಲಕ್ಕಾಗಿ ದೂರ ಸಂಚಾರ ಮಾಡಬೇಕಾಗಿ ಬರುತ್ತದೆ.
 
ಕುಂಭ: ಇಂದು ನಿಮ್ಮ ಕೆಲಸಗಳಿಗೆ ಅಡ್ಡಿ, ಶತ್ರುಭಯ ಕಂಡುಬರುತ್ತದೆ. ತೊಂದರೆಗಳು ಬಂದಾಗ ತಾಳ್ಮೆಯಿಂದ ನಿಭಾಯಿಸಿ. ವೃತ್ತಿರಂಗದಲ್ಲಿ ಕಾರ್ಯದೊತ್ತಡದಿಂದ ಹೈರಾಣಾಗುವಿರಿ. ನೆಮ್ಮದಿಗಾಗಿ ಕುಲದೇವರ ಪ್ರಾರ್ಥನೆ ಮಾಡಿ.
 
ಮೀನ: ಆರ್ಥಿಕ ಮುಗ್ಗಟ್ಟಿನಿಂದಾಗಿ ಕುಟುಂಬದಲ್ಲಿ ನೆರವೇರಿಸಬೇಕಿದ್ದ ಕಾರ್ಯಗಳು ಅರ್ಧಕ್ಕೆ ಮೊಟಕುಗೊಳಿಸುವಿರಿ. ಮಾತು, ಕೃತಿಯಲ್ಲಿ ದುಡುಕಿನ ವರ್ತನೆ ಬೇಡ. ಬಂಧು ಮಿತ್ರರ ಸಹಾಯ ಸಿಗಲಿದೆ. ಎಚ್ಚರ ಅಗತ್ಯ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ರೋಹಿಣಿ ನಕ್ಷತ್ರದವರು ಯಾರ ದೇವರನ್ನು ಪೂಜೆ ಮಾಡಿದರೆ ಏನು ಫಲ?

ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ...

news

ತುಲಾ ರಾಶಿಯವರ ಲವ್ ಲೈಫ್ ಹೇಗಿರುತ್ತದೆ ಗೊತ್ತಾ?

ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ...

news

ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿದವರಿಗೆ ಬರುವ ರೋಗಗಳು ಯಾವುವು ಗೊತ್ತಾ?

ಬೆಂಗಳೂರು: ನಮ್ಮ ದೇಹದ ಆರೋಗ್ಯಕ್ಕೂ ಹುಟ್ಟಿದ ತಿಂಗಳಿಗೂ ಸಂಬಂಧವಿದೆ ಎನ್ನುವುದು ಕೇವಲ ಜ್ಯೋತಿಷ್ಯ ...