ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಶುಕ್ರವಾರ, 8 ಮಾರ್ಚ್ 2019 (08:41 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಕಚೇರಿ ಕೆಲಸ ನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ. ಕೆಲಸದೊತ್ತಡದಿಂದ ದೇಹಾಯಾಸವಾಗುವುದು. ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಲಿದೆ. ಹೊಸ ವಾಹನ ಖರೀದಿಗೆ ಮುಂದಾಗುವಿರಿ.
 
ವೃಷಭ: ಸಂಕಷ್ಟದ ಸಮಯದಲ್ಲಿ ಅನಿರೀಕ್ಷಿತವಾಗಿ ಬರುವ ಬಂಧು ಮಿತ್ರರಿಂದ ಸಹಾಯವಾಗುವುದು. ಆಸ್ತಿ ವಿವಾದಗಳು ಕೋರ್ಟು ಮೆಟ್ಟಿಲೇರಿದ್ದರೆ ನಿಮ್ಮ ಪರವಾಗಿ ತೀರ್ಪು ಬರುವುದು. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದ ಅಗತ್ಯವಿದೆ.
 
ಮಿಥುನ: ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಿ, ಮನಸ್ಸಿಗೆ ಬೇಸರ ಮೂಡುವುದು. ಕುಟುಂಬದ ಸದಸ್ಯರೊಂದಿಗೆ ತಾಳ್ಮೆ ಸಮಾಧಾನದಿಂದ ವರ್ತಿಸಬೇಕು.ಆರ್ಥಿಕವಾಗಿ ಧನಾಗಮನಕ್ಕೆ ಕೊರತೆಯಾಗದು. ದಿನದಂತ್ಯಕ್ಕೆ ಶುಭ ಸುದ್ದಿ.
 
ಕರ್ಕಟಕ: ಬಹುದಿನಗಳಿಂದ ಬಾಕಿಯಿದ್ದ ಹರಕೆ ಪೂರೈಸುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗುವುದು. ಹಿರಿಯರೊಂದಿಗೆ ವಾಗ್ವಾದಕ್ಕಿಳಿಯುವುದು ಬೇಡ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
 
ಸಿಂಹ: ಅಂದುಕೊಂಡ ಕಾರ್ಯಗಳಿಗೆ  ಹಿರಿಯರ ಆಶೀರ್ವಾದ ಸಿಗಲಿದೆ. ಆದರೆ ಅನಿರೀಕ್ಷಿತವಾಗಿ ಖರ್ಚು ಬರಲಿದೆ. ಬಂಧು ಮಿತ್ರರೊಂದಿಗೆ ಪ್ರವಾಸ ಕೈಗೊಳ್ಳುವಿರಿ. ಸಂಗಾತಿ ಜತೆಗೆ ಸುಂದರ ಕ್ಷಣ ಕಳೆಯುವಿರಿ.
 
ಕನ್ಯಾ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸುವಿರಿ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಲಭಿಸಲಿದೆ. ಸಾಂಸಾರಿಕವಾಗಿ ಕಷ್ಟದ ಸಮಯದಲ್ಲಿ ಸಹಕಾರ ಸಿಗಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕಾಗುತ್ತದೆ.
 
ತುಲಾ: ಮನೆಗೆ ಬೇಕಾದ ನೂತನ ವಸ್ತುಗಳ ಖರೀದಿಗೆ ಮುಂದಾಗುವಿರಿ. ಮನೆಯಲ್ಲಿ ಶುಭ ಕಾರ್ಯ ನೆರವೇರಿಸುವಿರಿ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನೆರೆಹೊರೆಯವರೊಂದಿಗೆ ಕಿರಿ ಕಿರಿಯಾಗಬಹುದು. ತಾಳ್ಮೆಯಿಂದ ಮುನ್ನಡೆಯಬೇಕು.
 
ವೃಶ್ಚಿಕ: ಕಚೇರಿ ಕೆಲಸ ನಿಮಿತ್ತ ಸಂಚಾರ ನಡೆಸಬೇಕಾಗುತ್ತದೆ. ವಾಹನ ಚಲಾವಣೆ ಮಾಡುವಾಗ ಎಚ್ಚರವಿರಲಿ, ಅಪಘಾತದ ಭಯವಿದೆ. ಹಿತಶತ್ರುಗಳು ಬೆನ್ನ ಹಿಂದೆಯೇ ಇದ್ದಾರೆ. ಹಾಗಾಗಿ ಹೊಸ ವ್ಯವಹಾರಗಳಿಗೆ ಕೈ ಹಾಕುವಾಗ ಎಚ್ಚರವಿರಲಿ.
 
ಧನು: ಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಓಡಾಟದಿಂದ ಖರ್ಚು ವೆಚ್ಚಗಳು ಹೆಚ್ಚುವುದು. ವಿದ್ಯಾರ್ಥಿಗಳು ಅಭ್ಯಾಸದ ಕಡೆಗೆ ಗಮನ ಕಳೆದುಕೊಳ್ಳುವರು. ವಾಸ ಸ್ಥಳ ಬದಲಾವಣೆಗೆ ಚಿಂತನೆ ಮಾಡುವಿರಿ.
 
ಮಕರ: ಅರ್ಧಕ್ಕೆ ನಿಂತ ಕೆಲಸ ಕಾರ್ಯಗಳನ್ನು ಪುನರಾರಂಭಿಸಲು ಇದು ಸಕಾಲ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸಗಳಿಗೆ ತಕ್ಕ ಫಲ ಸಿಗುವುದು. ಆರ್ಥಿಕವಾಗಿ ಸಬಲರಾಗುತ್ತೀರಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
 
ಕುಂಭ: ಮಕ್ಕಳ ಭವಿಷ್ಯಕ್ಕೆ ಹಣ ಕೂಡಿಡುವ ಚಿಂತೆ ಕಾಡಲಿದೆ. ಸಹೋದರ ಅಥವಾ ಸಹೋದರಿಯ ಮದುವೆ ವಿಷಯವಾಗಿ ಓಡಾಟ ನಡೆಸಬೇಕಾಗುತ್ತದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.
 
ಮೀನ: ಇದುವರೆಗೆ ಇದ್ದ ಹಣಕಾಸಿನ ಮುಗ್ಗಟ್ಟುಗಳು ದೂರವಾಗಲಿದೆ. ಉದ್ಯಮಿಗಳು ನಷ್ಟ ಅನುಭವಿಸುವರು. ನೀರಿನ ವಿಚಾರಕ್ಕಾಗಿ ನೆರೆಹೊರೆಯವರೊಂದಿಗೆ ಕಚ್ಚಾಟ ನಡೆಯಬಹುದು. ದೇವರ ಪ್ರಾರ್ಥನೆ ಮಾಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಪುಷ್ಯಾ ನಕ್ಷತ್ರದವರು ಯಾರ ದೇವರನ್ನು ಪೂಜೆ ಮಾಡಿದರೆ ಏನು ಫಲ?

ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ...

news

ಕುಂಭ ರಾಶಿಯವರ ಲವ್ ಲೈಫ್ ಹೇಗಿರುತ್ತದೆ ಗೊತ್ತಾ?

ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ...

news

ಶಿವನಿಗೆ ಮಾಡುವ ರುದ್ರಾಭಿಷೇಕದ ಹಿನ್ನಲೆ ಗೊತ್ತಾ?

ಬೆಂಗಳೂರು: ಶಿವ ದೇವಾಲಯಕ್ಕೆ ಹೋದರೆ ರುದ್ರಾಭಿಷೇಕ ಮಾಡುವುದು ನಮ್ಮ ಪದ್ಧತಿ. ಶಿವನಿಗೆ ಅತ್ಯಂತ ...

news

ಈ ಪೂಜೆ ಮಾಡಿದರೆ ಪಾಪಗಳಿಂದ ಮುಕ್ತಿ ಸಿಗಬಹುದು

ಬೆಂಗಳೂರು: ಯಾವುದೇ ದೇವಾಲಯಕ್ಕೆ ಹೋದರೆ ಅಲ್ಲಿ ಪ್ರದೋಷ ಪೂಜೆ ಎಂಬ ಫಲಕ ಕಾಣುತ್ತೇವೆ. ಅಸಲಿಗೆ ಪ್ರದೋಷ ...