ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಸೋಮವಾರ, 11 ಮಾರ್ಚ್ 2019 (08:41 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ನಿಮ್ಮ ಕ್ರಿಯಾತ್ಮಕ ಆಲೋಚನೆಗಳು ಹೆಚ್ಚು ಪ್ರಯೋಜನಕ್ಕೆ ಬರುವುದು. ವೃತ್ತಿರಂಗದಲ್ಲಿ ಸಮಾಧಾನಕರ ವಾತಾವರಣವಿರಲಿದೆ. ಹೊಸ ವ್ಯವಹಾರಕ್ಕೆ ಕೈಹಾಕಿದರೆ ಲಾಭವಾಗುವುದು.
 
ವೃಷಭ: ನಿಮ್ಮ ತ್ಯಾಗದ ಮನೋಭಾವ ನಿಮ್ಮನ್ನು ಸಾಮಾಜಿಕವಾಗಿ ಉನ್ನತ ಸ್ಥಾನಕ್ಕೆ ಕರೆದೊಯ್ಯಲಿದೆ. ಯಾವುದೇ ಕೆಲಸಕ್ಕೂ ಮುನ್ನ ದುಡುಕದೆ ತಾಳ್ಮೆಯಿಂದ ಮುಂದುವರಿದರೆ ಇಂದಿನ ದಿನ ಯಶಸ್ಸು ನಿಮ್ಮದಾಗುವುದು.
 
ಮಿಥುನ: ಯಾವುದೋ ಕೆಲಸಕ್ಕೆ ತೊಡಗುವ ಮುನ್ನ ಮಾಡಬೇಕೋ ಬೇಡವೋ ಎಂದ ಧ್ವಂದ್ವ ಕಾಡಲಿದೆ. ನಿರುದ್ಯೋಗಿಗಳು ತಮಗೆ ಒದಗಿ ಬರುವ ತಾತ್ಕಾಲಿಕ ಉದ್ಯೋಗವನ್ನು ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿ. ಶ್ರೀದೇವರ ಪ್ರಾರ್ಥನೆ ಮಾಡಿ.
 
ಕರ್ಕಟಕ: ಹಣಕಾಸಿನ ಮುಗ್ಗಟ್ಟುಗಳು ದೂರವಾಗಿ ಲಾಭ ಕಾಣುವಿರಿ. ಆದರೆ ಗೃಹೋಪಯೋಗಿ ವಸ್ತುಗಳಿಗಾಗಿ ಖರ್ಚು ವೆಚ್ಚ ಮಾಡಬೇಕಾಗುತ್ತದೆ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ.
 
ಸಿಂಹ: ಜಾಣ್ಮೆಯಿಂದ ವರ್ತಿಸಿದರೆ ಎಂತಹ ಕಷ್ಟವೇ ಆದರೂ ಯಶಸ್ಸು ನಿಮ್ಮದಾಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಪ್ರೇಮಿಗಳಿಗೆ ಮನೆಯವರ ವಿರೋಧ ಕಂಡುಬರಬಹುದು.
 
ಕನ್ಯಾ: ಆರ್ಥಿಕ ಮುಗ್ಗಟ್ಟುಗಳು ತಲೆದೋರಿ ಕೈ ಹಿಡಿದ ಕಾರ್ಯಗಳು ಅರ್ಧಕ್ಕೇ ನಿಲ್ಲುವುದು. ಹೊಸ ವ್ಯಾಪಾರಕ್ಕೆ ಕೈ ಹಾಕಿದರೆ ನಷ್ಟ ಅನುಭವಿಸಬೇಕಾದೀತು. ಖರ್ಚು ವೆಚ್ಚಗಳ ಬಗ್ಗೆ ಲೆಕ್ಕ ಇಟ್ಟುಕೊಂಡಿರಿ.
 
ತುಲಾ: ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಕಾಣಲಿದ್ದೀರಿ. ನೀವು ಮಾಡುವ ಕೆಲಸದಿಂದ ಬೇರೆಯವರಿಗೂ ಉಪಕಾರವಾಗಲಿದೆ. ಆದರೆ ಬೆನ್ನ ಹಿಂದೆ ಕಾಡುವ ಹಿತಶತ್ರುಗಳ ಬಗ್ಗೆ ಎಚ್ಚರ  ಅಗತ್ಯ. ವಿದ್ಯಾರ್ಥಿಗಳು ಪ್ರಯತ್ನ ಬಲ ಮುಂದುವರಿಸಬೇಕು.
 
ವೃಶ್ಚಿಕ: ಎಂದೋ ಆರಂಭ ಮಾಡಿದ್ದ ಕೆಲಸ ಕಾರ್ಯಗಳಿಗೆ ಚಾಲನೆ ನೀಡಿ ಲಾಭ ಕಾಣಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಜಾಣ್ಮೆಯ ಕೆಲಸಗಳಿಗೆ ಮೆಚ್ಚುಗೆ ಪಡೆಯಲಿದ್ದೀರಿ. ಆದರೆ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
 
ಧನು: ಪರಿಶ್ರಮ, ಪ್ರಯತ್ನ ಬಲವಿಲ್ಲದೇ ಅಂದುಕೊಂಡ ಕಾರ್ಯ ನೆರವೇರದು. ನಿರುದ್ಯೋಗಿಗಳು ಸ್ವಲ್ಪ ದಿನ ಕಾಯಬೇಕಾಗುತ್ತದೆ. ದೂರ ಸಂಚಾರ ಮಾಡಬೇಕಾಗಿ ಬರುತ್ತದೆ. ಶೀತ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬರಬಹುದು.
 
ಮಕರ: ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ಹೊಸ ವಸ್ತು, ಆಸ್ತಿ ಖರೀದಿಗೆ ಚಿಂತನೆ ಮಾಡುವಿರಿ. ಅವಿವಾಹಿತರಿಗೆ ಮನಸ್ಸಿಗೆ ಒಪ್ಪಿಗೆಯಾಗುವ ಸಂಬಂಧಗಳು ಕೂಡಿಬರುವುದು. ನೂತನ ದಂಪತಿಗಳಿಗೆ ಸಂತಾನ ಭಾಗ್ಯದ ಸೂಚನೆ ಸಿಗಲಿದೆ.
 
ಕುಂಭ:  ತಾಳ್ಮೆಯಿಂದ ಮುನ್ನಡೆಯಿರಿ. ಕೋಪದ ಕೈಗೆ ಬುದ್ಧಿ ಕೊಟ್ಟರೆ ಕಾರ್ಯ ಹಾನಿ ಎಂಬುದನ್ನು ಮರೆಯಬೇಡಿ. ಸಮಯಕ್ಕೆ ಸರಿಯಾಗಿ ಧನಾಗಮನವಾಗಿ ಚೇತರಿಕೆ ಕಾಣುವಿರಿ. ಹಿರಿಯರು ತೀರ್ಥ ಯಾತ್ರೆ ಕೈಗೊಳ್ಳುವರು.
 
ಮೀನ: ನಯವಾಗಿ ಮಾತನಾಡುತ್ತಾ ಬರುವ ನಯವಂಚಕರನ್ನು ದೂರವಿಡಿ. ಉದ್ಯೋಗ, ಆರ್ಥಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತೀರಿ. ಸಂಗಾತಿಯಿಂದ ಸಹಕಾರ ಸಿಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸುವಿರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಮಘಾ ನಕ್ಷತ್ರದವರು ಯಾವ ದೇವರನ್ನು ಪೂಜೆ ಮಾಡಿದರೆ ಏನು ಫಲ?

ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಶುಭ ಮುಹೂರ್ತ ಲೆಕ್ಕ ಹಾಕುವುದು ಹೇಗೆ?

ಬೆಂಗಳೂರು: ಯಾವುದೇ ಶುಭ ಕಾರ್ಯಕ್ಕೆ ತೊಡಗಬೇಕಾದರೂ ಶುಭ ಮುಹೂರ್ತ ನೋಡಿ ಮುಂದುವರಿದರೆ ಕೆಲಸ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.