ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶನಿವಾರ, 16 ಮಾರ್ಚ್ 2019 (08:55 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 
ಮೇಷ: ಮನೆಗೆ ಬೇಕಾದ ವಸ್ತುಗಳಿಗೆ ಖರ್ಚು ವೆಚ್ಚಗಳಾಗುವುದು. ಬಂಧು ಮಿತ್ರರ ಭೇಟಿ ಸಂತಸ ನೀಡುವುದು. ಆದರೆ ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡ ಹೆಚ್ಚಾಗುವುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಬೇಕಾಗುತ್ತದೆ.
 
ವೃಷಭ: ಆರ್ಥಿಕವಾಗಿ ಆದಾಯಕ್ಕೇನೂ ಕೊರತೆಯಾಗದು. ಅಂದುಕೊಂಡ ಕಾರ್ಯಗಳು ನೆರವೇರುವುದು. ವಾಹನ ಚಾಲನೆ ಮಾಡುವವರಿಗೆ ಅಪಘಾತದ ಭಯವಿದೆ. ಮನೆಯಲ್ಲಿ ಶುಭ ಕಾರ್ಯ ನೆರವೇರಿಸುವಿರಿ.
 
ಮಿಥುನ: ಹಿರಿಯರ ಆರೋಗ್ಯ ಕೈಕೊಡುವುದು. ಆಸ್ತಿ ವಿವಾದಗಳಲ್ಲಿ ಜಯ ನಿಮ್ಮದಾಗಲಿದೆ. ಸಹೋದರರೊಂದಿಗೆ ಕಿರಿ ಕಿರಿ ಆಗಬಹುದು. ವಿದ್ಯಾರ್ಥಿಗಳು ಉದಾಸೀನತೆ ಬಿಟ್ಟು ಕಠಿಣ ಪರಿಶ್ರಮಪಡಬೇಕಾಗಿದೆ.
 
ಕರ್ಕಟಕ: ರಾಜಕೀಯ ಕ್ಷೇತ್ರದವರಿಗೆ ಯಶಸ್ಸು, ಕಾರ್ಯಸಿದ್ಧಿಯಾಗಲಿದೆ. ಆಸ್ತಿ ವಿವಾದಗಳು ತಲೆದೋರಲಿವೆ. ದಾಯಾದಿಗಳೊಂದಿಗೆ ಕಲಹವೇರ್ಪಟ್ಟೀತು. ಆದರೆ ಆದಾಯಕ್ಕೆ ಯಾವುದೇ ಕೊರತೆಯಿಲ್ಲ.
 
ಸಿಂಹ: ಆರೋಗ್ಯ ಹದಗೆಡಬಹುದು. ವ್ಯಾಪಾರ, ವ್ಯವಹಾರ ಮಾಡುವವರಿಗೆ ಕಾರ್ಯಸಿದ್ಧಿಯಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರಿಗಳೊಂದಿಗೆ ಕಿರಿ ಕಿರಿ ಆಗಬಹುದು. ವೃತ್ತಿರಂಗದಲ್ಲಿ ಕಾರ್ಯದೊತ್ತಡದಿಂದ ದೇಹಾಯಾಸವಾದೀತು.
 
ಕನ್ಯಾ: ನಿಮ್ಮ ಇಷ್ಟು ದಿನದ ರಹಸ್ಯ ಮನೆಯವರ ಮುಂದೆ ಬಹಿರಂಗವಾಗಲಿದೆ. ಸಂಗಾತಿಯೊಡನೆ ಮನಸ್ತಾಪವಾದೀತು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆಯಾದೀತು. ನೀರಿಗೆ ಸಂಬಂಧಿಸಿದಂತೆ ನೆರೆಹೊರೆಯವರೊಂದಿಗೆ ಕಲಹ ಸಾಧ್ಯತೆ.
 
ತುಲಾ: ಆರೋಗ್ಯ ಸುಧಾರಣೆಯಾಗಲಿದೆ. ಕಚೇರಿಯಲ್ಲಿ ಬಿಡುವಿಲ್ಲದ ಕೆಲಸ. ಆದರೆ ನಿಮ್ಮ ಪರಿಶ್ರಮ ಮೇಲಧಿಕಾರಿಗಳ ಪ್ರಶಂಸೆಗೊಳಗಾಗಲಿದೆ. ಆರ್ಥಿಕವಾಗಿ ಲಾಭ ಕಾಣುವಿರಿ. ದೂರ ಸಂಚಾರ ಮಾಡಬೇಕಾಗಬಹುದು.
 
ವೃಶ್ಚಿಕ: ಹಿತಶತ್ರುಗಳ ಕಾಟದಿಂದ ಹೈರಾಣಾಗುವಿರಿ. ವೃತ್ತಿರಂಗದಲ್ಲಿ ಹೆಚ್ಚಿನ ಜವಾಬ್ಧಾರಿ ನಿಮ್ಮ ಹೆಗಲೇರಲಿದೆ. ಮನೆಯಲ್ಲಿ ಶುಭ ಕಾರ್ಯ ನಡೆಸಲು ಖರ್ಚು ವೆಚ್ಚಗಳಾಗುವುದು. ದೇವತಾ ಪ್ರಾರ್ಥನೆಯಿಂದ ನೆಮ್ಮದಿ.
 
ಧನು: ಸಾಂಸಾರಿಕವಾಗಿ ಮಕ್ಕಳು, ಸಂಗಾತಿಗೆ ಕಿರಿ ಕಿರಿ ಮಾಡುವಿರಿ. ಹೊಂದಾಣಿಕೆಯಿಂದ ನಡೆಯುವುದು ಮುಖ್ಯ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ, ಬಡ್ತಿ ಯೋಗವಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ.
 
ಮಕರ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸವೊಂದು ಮೆಚ್ಚುಗೆಗೆ ಪಾತ್ರವಾಗಲಿದೆ. ಇದೇ ಒಳ್ಳೆಯ ಸಮಯ, ಮೇಲಧಿಕಾರಿಗಳ ಸದಭಿಪ್ರಾಯವನ್ನು ಲಾಭಕ್ಕೆ ಬಳಸಿಕೊಳ್ಳಿ. ಅವಿವಾಹಿತರಿಗೆ ವಿವಾಹ ಯೋಗವಿದೆ.
 
ಕುಂಭ:  ಮಾತಿನಲ್ಲಿ ತಾಳ್ಮೆಯಿರಲಿ. ದುಡುಕಿನ ಮಾತಿನಿಂದ ಕುಟುಂಬ ಸದಸ್ಯರ ಮನ ನೋಯಿಸುವಿರಿ. ಅರ್ಧಕ್ಕೆ ನಿಂತ ಕೆಲಸಗಳನ್ನು ಪುನರಾರಂಭಿಸಲು ಸೂಕ್ತ ಸಮಯ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
 
ಮೀನ: ಮನೆ ಬದಲಾವಣೆಗೆ ಚಿಂತನೆ ಮಾಡುವಿರಿ. ಸಂಗಾತಿಯ ಅಲಂಕಾರಿಕ ವಸ್ತುಗಳಿಗೆ ಖರ್ಚು ವೆಚ್ಚ ಮಾಡಬೇಕಾಗುತ್ತದೆ. ನೂತನ ದಂಪತಿಗಳಿಗೆ ಸಂತಾನ ಭಾಗ್ಯದ ಸೂಚನೆಯಿರುತ್ತದೆ. ದೇವರ ಪ್ರಾರ್ಥನೆ ಮಾಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             


ಇದರಲ್ಲಿ ಇನ್ನಷ್ಟು ಓದಿ :