ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಭಾನುವಾರ, 17 ಮಾರ್ಚ್ 2019 (08:25 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 
ಮೇಷ: ಉದ್ಯೋಗ ಕ್ಷೇತ್ರದ ಕಾರ್ಯದೊತ್ತಡ ಇಂದೂ ಬೆಂಬಿಡದು. ಹಾಗಿದ್ದರೂ ಕೆಲಸದಲ್ಲಿ ಯಶಸ್ಸಿನ ಖುಷಿ ನಿಮ್ಮದಾಗುವುದು. ಸಾಲಗಾರರಿಗೆ ಬಾಕಿ ಪಾವತಿ ಮಾಡುವುದಿದ್ದರೆ ಅದರ ಮರುಪಾವತಿ ಚಿಂತೆ ಕಾಡುವುದು.
 
ವೃಷಭ: ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ಹಿರಿಯರಿಂದ ಅನಾದರಣೆಗೊಳಗಾಗಬೇಕಾಗುತ್ತದೆ. ಖರ್ಚು ವೆಚ್ಚಗಳ ಬಗ್ಗೆ ಮಿತಿಯಿರಲಿ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.
 
ಮಿಥುನ: ಅವಿವಾಹಿತರಿಗೆ ಮನಸ್ಸಿಗೆ ಒಪ್ಪುವಂತಹ ವಿವಾಹ ಪ್ರಸ್ತಾಪಗಳು ಬರುವುದು. ಆದರೆ ಅದರಲ್ಲಿ ಯಶಸ್ಸು ಕಾಣಬೇಕಾದರೆ ಸುಬ್ರಹ್ಮಣ್ಯ ಪ್ರಾರ್ಥನೆ ಅಗತ್ಯ. ನೆರೆಹೊರೆಯವರೊಂದಿಗೆ ಗಡಿ ತಂಟೆ ತಕರಾರು ಎದುರಾಗುವುದು. ತಾಳ್ಮೆ ಅಗತ್ಯ.
 
ಕರ್ಕಟಕ: ಸಾಮಾಜಿಕವಾಗಿ ಸ್ಥಾನ ಮಾನ ಪಡೆಯುವಿರಿ ಮತ್ತು ನಿಮ್ಮ ಕೆಲಸಗಳು ಪ್ರಶಂಸೆಗೊಳಗಾಗುವುದು. ಆದರೆ ಕುಟುಂಬದಲ್ಲಿ ಸಂಗಾತಿಯೊಂದಿಗೆ ಮನಸ್ತಾಪಗಳು ಬರುವುದು. ನೆಮ್ಮದಿಗಾಗಿ ಕುಲದೇವರ ಪ್ರಾರ್ಥನೆ ಮಾಡಿ.
 
ಸಿಂಹ: ಹಿರಿಯರ ಅನಾರೋಗ್ಯ ಸಂಬಂಧ ಆಸ್ಪತ್ರೆ ಅಲೆದಾಟ ತಪ್ಪದು. ವೃತ್ತಿಯಲ್ಲಿ ನೀವು ಅಂದುಕೊಂಡ ಕೆಲಸಗಳು ನೆರವೇರುವುದು. ಆದಾಯಕ್ಕೆ ಯಾವುದೇ ಕೊರತೆಯಿಲ್ಲ. ಮಿತ್ರರ ಭೇಟಿಯಾಗುವಿರಿ.
 
ಕನ್ಯಾ: ಇಷ್ಟಾರ್ಥ ಸಿದ್ಧಿಗಾಗಿ ಭಗವಂತನ ಪ್ರಾರ್ಥನೆ ಅಗತ್ಯ. ದೈವಾನುಕೂಲ ನಿಮ್ಮ ಮೇಲಿರುವುದರಿಂದ ಆರ್ಥಿಕವಾಗಿ ಲಾಭ ಕಾಣುವಿರಿ. ನೂತನ ದಂಪತಿಗೆ ಮಧುಚಂದ್ರ ಭಾಗ್ಯವಿದೆ.
 
ತುಲಾ: ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಆದರೆ ಕೈಗೊಳ್ಳುವ ಕಾರ್ಯಗಳಲ್ಲಿ ಕೆಲವು ವಿಘ್ನಗಳು ಎದುರಾಗಲಿವೆ. ವಿಘ್ನೇಶ್ವರನ ಪ್ರಾರ್ಥನೆ ಮಾಡಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
 
ವೃಶ್ಚಿಕ: ದಾಯಾದಿಗಳೊಂದಿಗೆ ಆಸ್ತಿ ಸಂಬಂಧ ಕಲಹವೇರ್ಪಡಬಹುದು. ಆದರೆ ಹಿರಿಯರ ಮಧ್ಯಸ್ಥಿಕೆಯಿಂದ ಎಲ್ಲವೂ ಸರಿಯಾಗುವುದು. ಪ್ರೇಮಿಗಳಿಗೆ ಮನೆಯವರಿಂದ ವಿರೋಧ ವ್ಯಕ್ತವಾಗಲಿದೆ.
 
ಧನು: ವಿದ್ಯಾರ್ಥಿಗಳು ಪರೀಕ್ಷೆ ತಯಾರಿ ನಡೆಸಬೇಕಾಗುವುದು. ಬಂಧು ಮಿತ್ರರ ಭೇಟಿ ಸಂತಸ ನೀಡಲಿದೆ. ಹಾಗಿದ್ದರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.
 
ಮಕರ: ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಯೋಗವಿದೆ. ಪೂರ್ವ ದಿಕ್ಕಿನ ಪ್ರಯಾಣ ಶುಭ ಉಂಟುಮಾಡಲಿದೆ. ಇಷ್ಟಪಟ್ಟ ವಧು/ವರನೊಂದಿಗೆ ವಿವಾಹ ಭಾಗ್ಯ. ಅಂದುಕೊಂಡ ಕಾರ್ಯಗಳಿಗೆ ವಿಘ್ನಗಳು ಎದುರಾದರೂ ಅಂತಿಮವಾಗಿ ಜಯ ನಿಮ್ಮದೇ.
 
ಕುಂಭ:  ಗೃಹೋಪಯೋಗಿ ವಸ್ತುಗಳ ಖರೀದಿಗೆ ಮುಂದಾಗುವಿರಿ. ಶೀತ ಸಂಬಂಧೀ ಆರೋಗ್ಯ ಸಮಸ್ಯೆ ಕಾಡಲಿದೆ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದ್ದು, ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.
 
ಮೀನ: ವ್ಯಾಪಾರ, ವ್ಯವಹಾರದಲ್ಲಿ ಲಾಭ ಕಾಣುವಿರಿ. ಎಷ್ಟೋ ದಿನದಿಂದ ಬಾಕಿಯಿದ್ದ ಸಾಲ ಮರುಪಾವತಿಯಾಗಿ ಆದಾಯಕ್ಕೆ ಕೊರತೆಯಾಗದು. ಆದರೆ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
 
ಇದರಲ್ಲಿ ಇನ್ನಷ್ಟು ಓದಿ :