ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶುಕ್ರವಾರ, 22 ಮಾರ್ಚ್ 2019 (08:47 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 
ಮೇಷ: ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿಸಿರದ ರೀತಿಯಲ್ಲಿ ಬಡ್ತಿ, ಮುನ್ನಡೆ ತೋರಿಬರಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶದಿಂದ ಸಂತಸವಾಗಲಿದೆ. ಚಾಲನೆ ವೃತ್ತಿ ಮಾಡುವವರಿಗೆ ಅಪಘಾತದ ಭಯವಿದೆ. ಎಚ್ಚರ ಅಗತ್ಯ.
 
ವೃಷಭ: ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚಿನ ಗಮನಕೊಡಬೇಕಾಗುತ್ತದೆ. ವ್ಯಾಪಾರಿಗಳಿಗೆ ಉತ್ತಮ ಆದಾಯವಿದ್ದರೂ ಅಷ್ಟೇ ಖರ್ಚೂ ಕಂಡುಬರುವುದು. ಕೃಷಿ ಕ್ಷೇತ್ರದಲ್ಲಿರುವವರಿಗೆ ಬೆಳೆ ಹಾನಿ ಸಂಭವವಿದೆ. ತಾಳ್ಮೆಯಿಂದಿರಿ.
 
ಮಿಥುನ: ಸಂಸಾರಸದಲ್ಲಿ ನೋವು-ನಲಿವಿನ ಸಮಚಿತ್ತದ ದಿನ ಇಂದು ನಿಮ್ಮದಾಗಲಿದೆ. ಮಾತಿನ ಮೇಲೆ ನಿಗಾ ಅಗತ್ಯ. ಅರ್ಧಕ್ಕೆ ನಿಂತಿದ್ದ ಹಳೆಯ ಕೆಲಸವೊಂದಕ್ಕೆ ಮರು ಜೀವ ನೀಡಲಿದ್ದೀರಿ. ದಿನದಂತ್ಯಕ್ಕೆ ಶುಭ ಸುದ್ದಿ.
 
ಕರ್ಕಟಕ: ವಿನಾಕಾರಣ ಇನ್ನೊಬ್ಬರಿಗೆ ಸಹಾಯ ಮಾಡಲು ಹೋಗಿ ಅಪವಾದ ಮೈಮೇಲೆಳೆದುಕೊಳ್ಳುವಿರಿ. ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಲ್ಲಿ ಉದಾಸೀನ ಪ್ರವೃತ್ತಿ ಕಂಡುಬರುವುದು.
 
ಸಿಂಹ: ಅಂದುಕೊಂಡ ಕಾರ್ಯಗಳಿಗೆ ಕೆಲವೊಂದು ವಿಘ್ನಗಳು ಎದುರಾಗಲಿವೆ. ಸ್ತ್ರೀ ಸಂಬಂಧವಾಗಿ ಅಪವಾದ ಕೇಳಿಬಂದೀತು. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ಖರ್ಚು ವೆಚ್ಚಗಳು ಮಿತಿಯಲ್ಲಿರಲಿ.
 
ಕನ್ಯಾ: ಮನೆ, ಆಸ್ತಿ ಖರೀದಿ ಬಗ್ಗೆ ಚಿಂತನೆ ಮಾಡುವಿರಿ. ಕೆಲವೊಂದು ಬಾರಿ ಸಂಗಾತಿಯ ಸಲಹೆಗಳಿಗೂ ಕಿವಿಗೊಡಬೇಕಾಗುತ್ತದೆ. ಆದರೆ ವ್ಯವಹಾರ ನಡೆಸುವಾಗ ವಂಚನೆಗೊಳಗಾದಂತೆ ಎಚ್ಚರಿಕೆ ವಹಿಸುವುದು ಅಗತ್ಯ.
 
ತುಲಾ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗುವುದು. ಕುಟುಂಬದ ಕೆಲವೊಂದು ಜವಾಬ್ಧಾರಿಗಳು ಹೆಗಲಿಗೇರಲಿವೆ. ದಿನದಂತ್ಯಕ್ಕೆ ಶುಭ ಸುದ್ದಿಯೊಂದು ಕೇಳಲಿದ್ದೀರಿ.
 
ವೃಶ್ಚಿಕ: ಆರ್ಥಿಕ ಸ್ಥಿತಿಯಲ್ಲಿ ಏರುಪೇರಾಗಬಹುದು. ಧೃತಿಗೆಡಬೇಡಿ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳು ನಿಮ್ಮ ಬೆಳವಣಿಗೆಗೆ ತೊಡಕಾಗುವರು. ಕೆಟ್ಟ ಮಿತ್ರರ ಸಂಘ ಮಾಡಬೇಡಿ. ಆರೋಗ್ಯದ ಬಗ್ಗೆ ಕಾಳಜಿವಹಿಸಿ.
 
ಧನು: ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳಲಿದ್ದೀರಿ. ಆದರೆ ಆರ್ಥಿಕವಾಗಿ ಧನಾಗಮನಕ್ಕೇನೂ ಕೊರತೆಯಾಗದು. ಹಾಗಂತ ಸಾಲ ಕೊಡಲು ಹೋಗಬೇಡಿ. ಮರಳಿ ಬಾರದು. ವೃತ್ತಿ ರಂಗದಲ್ಲಿ ಸಫಲತೆ ಸಾಧಿಸುತ್ತೀರಿ.
 
ಮಕರ: ಅನಿರೀಕ್ಷಿತವಾಗಿ ಮನೆಗೆ ಬಂಧು ಮಿತ್ರರ ಆಗಮನವಾಗಲಿದೆ. ನೂತನ ದಂಪತಿಗಳು ಸಂತಾನ ಪ್ರಾಪ್ತಿಗಾಗಿ ದೇವರ ಮೊರೆ ಹೋಗಬೇಕಾಗುತ್ತದೆ. ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ಸಮಾಜದಲ್ಲಿ ಗೌರವ ಹೆಚ್ಚುವುದು.
 
ಕುಂಭ:  ನೆಂಟರೊಂದಿಗೆ ಮನಸ್ತಾಪಗಳು ಬರುವುದು. ಆರೋಗ್ಯದಲ್ಲಿ ಕಾಳಜಿ ಅಗತ್ಯ. ವಿದ್ಯಾರ್ಥಿಗಳು ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಉದ್ಯೋಗಾರ್ಥಿಗಳಿಗೆ ವಿದೇಶ ಪ್ರಯಾಣದ ಯೋಗವಿದೆ. ದೂರ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.
 
ಮೀನ: ಮೇಲ್ವರ್ಗದ ಅಧಿಕಾರಿಗಳಿಗೆ ಬಡ್ತಿ ಯೋಗವಿದೆ. ಗೃಹೋಪಯೋಗಿ ವಸ್ತುಗಳು, ವಾಹನ ಖರೀದಿಗೆ ಮನಸ್ಸು ಮಾಡುವಿರಿ. ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರುವುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             


ಇದರಲ್ಲಿ ಇನ್ನಷ್ಟು ಓದಿ :