ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಉದ್ಯೋಗ ಕ್ಷೇತ್ರದಲ್ಲಿ ಹಿಂದಿನ ತಪ್ಪುಗಳನ್ನು ಸರಿಪಡಿಸುತ್ತಾ ಕೂರಬೇಕಾಗಬಹುದು. ಆರ್ಥಿಕವಾಗಿ ಕೆಲವರು ಸಾಲ ಕೇಳಿಕೊಂಡು ಬರುವರು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ.ವೃಷಭ: ವಿನಾಕಾರಣ ಪರರ ನಿಂದನೆಗೆ ಗುರಿಯಾಗಬೇಕಾಗಬಹುದು. ಅನಗತ್ಯವಾಗಿ ಇನ್ನೊಬ್ಬರ ವಿಚಾರದಲ್ಲಿ ಮೂಗು ತೂರಿಸಲು ಹೋಗದೇ ಇರುವುದೇ ಲೇಸು. ಅದರ ಹೊರತಾಗಿ ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ಉನ್ನತಿ ಕಾಣುವಿರಿ.ಮಿಥುನ: ವಿದ್ಯಾರ್ಥಿಗಳಿಗೆ ನಿರೀಕ್ಷೆಗೂ ಮೀರಿದ