ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಶೀತ ಸಂಬಂಧೀ ರೋಗ ಬಾಧೆಗಳು ಕಂಡುಬರವುದು. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡವಿರುವುದು. ಆದರೆ ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು.ವೃಷಭ: ಬಾಕಿ ಹಣ ಸಂದಾಯವಾಗದೇ ಹಣಕಾಸಿಗೆ ಪರದಾಡುವಿರಿ. ಹೊಸ ಕೆಲಸಗಳಿಗೆ ಕೈ ಹಾಕಲು ಹೊರಟರೆ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಕೇಳಿಬಂದೀತು. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು.ಮಿಥುನ: ಅತಿಯಾದ ಆತ್ಮವಿಶ್ವಾಸದಿಂದ ವಂಚನೆಗೊಳಗಾಗುವಿರಿ. ಆದರೆ ನಿಮ್ಮ ಒಳ್ಳೆಯ ಗುಣನಡತೆಯಿಂದಲೇ