ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಮಂಗಳವಾರ, 26 ಮಾರ್ಚ್ 2019 (08:46 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಮಕ್ಕಳ ಪ್ರಗತಿ ಸಂತಸ ನೀಡಲಿದೆ. ಆದರೆ ಆಸ್ತಿ ವಿವಾದಗಳು ತಲೆದೋರಬಹುದು. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡ ಮುಂದುವರಿಯಲಿದೆ.
 
ವೃಷಭ: ಇದುವರೆಗೆ ಇದ್ದ ಆರೋಗ್ಯ ಸಮಸ್ಯೆಗಳು ದೂರವಾಗಿ ನೆಮ್ಮದಿ ಕಾಣುವಿರಿ. ಆದರೆ ಉದಾಸೀನ ಪ್ರವೃತ್ತಿ ಬೇಡ. ನಿಮ್ಮ ಹಠವಾದಿ ಧೋರಣೆಗಳು ಇತರರಿಗೆ ನೋವುಂಟು ಮಾಡಬಹುದು. ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ.
 
ಮಿಥುನ: ಪಾಲು ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ಹೀಗಾಗಿ ಹೊಸ ಆಸ್ತಿ ಖರೀದಿಗೆ ಮನಸ್ಸು ಮಾಡುವಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳು ನೆರವೇರಿಸಬೇಕಾಗುತ್ತದೆ.
 
ಕರ್ಕಟಕ: ದೈವಾನುಕೂಲ ನಿಮ್ಮ ಮೇಲಿದ್ದು, ವಿವಿಧ ರೀತಿಯಲ್ಲಿ ಅಭಿವೃದ್ಧಿ ಕಾಣುವಿರಿ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನಗಳಲ್ಲಿ ಉನ್ನತಿ ಇರುತ್ತದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಒದಗಿಬರುವುದು.
 
ಸಿಂಹ: ಚಾಲನೆ ವೃತ್ತಿಯಲ್ಲಿರುವವರು ಕೊಂಚ ಜಾಗರೂಕತೆ ವಹಿಸುವುದು ಸೂಕ್ತ. ಅನಿರೀಕ್ಷಿತವಾಗಿ ಕೆಲವು ಖರ್ಚು ವೆಚ್ಚಗಳು ತಲೆದೋರುವುದು. ಕುಟುಂಬದಲ್ಲಿ ಕೆಲವೊಂದು ಜವಾಬ್ಧಾರಿಗಳು ಹೆಗಲಿಗೇರಲಿವೆ. ತಾಳ್ಮೆ ಅಗತ್ಯ.
 
ಕನ್ಯಾ: ಅಂದುಕೊಂಡ ಕೆಲಸ ಕಾರ್ಯಗಳಿಗೆ ಕೆಲವೊಂದು ವಿಘ್ನಗಳು ಎದುರಾಗಲಿವೆ. ವಿಘ್ನೇಶ್ವರನ ಪ್ರಾರ್ಥನೆಯೊಂದಿಗೆ ದಿನದ ಆರಂಭ ಮಾಡಿ. ನಿರುದ್ಯೋಗಿಗಳಿಗೆ ತಾತ್ಕಾಲಿಕವಾಗಿ ಉದ್ಯೋಗ ಸಿಗಲಿದೆ.
 
ತುಲಾ: ಉದ್ಯೋಗ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳ ಕಿರಿ ಕಿರಿ ಇರಲಿದೆ.  ಹಾಗಿದ್ದರೂ ಆರ್ಥಿಕವಾಗಿ ಧನಾಗಮನವಾಗಿ ಚೇತರಿಕೆ ಕಾಣುವಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ದಿನದಂತ್ಯಕ್ಕೆ ಶುಭ ಸುದ್ದಿಯೊಂದು ಕಾದಿದೆ.
 
ವೃಶ್ಚಿಕ: ಆರ್ಥಿಕ ಪ್ರಗತಿಯಾಗಿ ಗೃಹೋಪಯೋಗಿ ವಸ್ತುಗಳ ಖರೀದಿಗೆ ಮನಸ್ಸು ಮಾಡುವಿರಿ. ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯವಿರುವುದು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರುವುದು. ಆದರೆ ದೇಹಾರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
 
ಧನು: ಸಾಂಸಾರಿಕವಾಗಿ ಕೆಲವೊಂದು ದುಃಖ ದುಗುಡ ತರುವ ವಾರ್ತೆಗಳು ಕೇಳಿಬಂದೀತು. ವಿದ್ಯಾರ್ಥಿಗಳು ಶಿಕ್ಷಕರಿಂದ ಪ್ರಶಂಸೆಗೊಳಗಾಗುವರು. ಹಳೇ ಮಿತ್ರರ ಭೇಟಿಯಾಗುವುದು. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
 
ಮಕರ: ಮನೋಕಾಮನೆಗಳ ಪೂರೈಕೆಗೆ ಹಣ ಸಂಪಾದನೆಯ ಮಾರ್ಗಗಳು ಯಾವುವಿದೆ ಎಂದು ಲೆಕ್ಕಾಚಾರ ಹಾಕುವಿರಿ. ಹಿರಿಯರ ತೀರ್ಥ ಯಾತ್ರೆಗೆ ತಯಾರಿ ನಡೆಸುವಿರಿ. ವ್ಯಾಪಾರಿಗಳು ತುಸು ನಷ್ಟ ಅನುಭವಿಸಬೇಕಾಗಬಹುದು. ಎಚ್ಚರಿಕೆ ಅಗತ್ಯ.
 
ಕುಂಭ: ಉದಾಸೀನ ಪ್ರವೃತ್ತಿಯಿಂದ ಬಂದ ಅವಕಾಶವನ್ನು ಬಾಚಿಕೊಳ್ಳದೇ ನಿರಾಶೆ ಅನುಭವಿಸಬೇಕಾಗಬಹುದು. ಸಂಸಾರದಲ್ಲಿ ಹೊಂದಾಣಿಕೆ ಅಗತ್ಯ. ಮಿತ್ರರೊಂದಿಗೆ ಭೋಜನ, ಪ್ರವಾಸ ಸಾಧ್ಯತೆಯಿದೆ. ಖರ್ಚಿನ ಬಗ್ಗೆ ಹಿಡಿತವಿರಲಿ.
 
ಮೀನ: ಸಂತಾನ ಹೀನ ದಂಪತಿಗಳು ದೇವರ ಮೊರೆ ಹೋಗುವರು. ಕುಟುಂಬದಲ್ಲಿ ಕುಲದೇವರಿಗೆ ಸಂಬಂಧಿಸಿದ ಪೂಜೆ ಪುನಸ್ಕಾರಗಳನ್ನು ನಡೆಸಿದರೆ ಉತ್ತಮ ಫಲ ಪಡೆಯಬಹುದು.  ದೂರ ಸಂಚಾರ ಯೋಗವಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                         ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಧನಿಷ್ಠ ನಕ್ಷತ್ರದವರು ಯಾವ ದೇವರನ್ನು ಪೂಜೆ ಮಾಡಿದರೆ ಏನು ಫಲ?

ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ದರಿದ್ರ ಯೋಗ ಕಳೆಯಲು ಈ ಪೂಜೆ ಮಾಡಿ

ಬೆಂಗಳೂರು: ಮನೆಯಲ್ಲಿ ಸುಖ, ಐಶ್ವರ್ಯ ಸಮೃದ್ಧಿಯಾಗಿರಬೇಕು, ಅದೃಷ್ಟ ಲಕ್ಷ್ಮಿ ತಾಂಡವವಾಡಬೇಕು ಎಂಬುದು ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.