ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಶನಿವಾರ, 30 ಮಾರ್ಚ್ 2019 (08:10 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಕಾಣುವಿರಿ. ಆದರೆ ಉದ್ಯೋಗ ನಿಮಿತ್ತ ಸಂಚಾರ ಮಾಡುವಾಗ ಏನಾದರೂ ತೊಂದರೆಗಳಾಗುವ ಸಂಭವವಿದೆ. ಸಾಂಸಾರಿಕವಾಗಿ ಹೆಚ್ಚಿನ ನೆಮ್ಮದಿ ಕಾಣುವಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
 
ವೃಷಭ: ಅನಿರೀಕ್ಷಿತವಾಗಿ ಕೆಲವು ಘಟನೆಗಳು ನಡೆಯಲಿದ್ದು, ನಿಮ್ಮ ಜೀವನದ ದಿಕ್ಕು ಬದಲಾಯಿಸಲಿದೆ. ಕೋಪದ ಕೈಗೆ ಬುದ್ಧಿ ಕೊಟ್ಟು ಸಂಬಂಧ ಹಾಳು ಮಾಡಿಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಜಯ.
 
ಮಿಥುನ: ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಸ್ಥಾನಪಲ್ಲಟವಾಗಿದೆ. ಮನೆಯಲ್ಲಿ ಆಂತರಿಕ ಕಲಹಗಳು ಮನಸ್ಸಿಗೆ ಬೇಸರವುಂಟುಮಾಡಲಿದೆ. ಆದರೆ ಆರ್ಥಿಕವಾಗಿ ಧನಾಗಮನಕ್ಕೆ ಕೊರತೆಯಾಗದು. ವಿದ್ಯಾರ್ಥಿಗಳಿಗೆ ನಿರುತ್ಸಾಹ ತೋರಿಬರಲಿದೆ.
 
ಕರ್ಕಟಕ: ಉತ್ತಮ ಧನಾಗಮನವಾಗಲಿದ್ದು, ಕಾರ್ಯ ಸಿದ್ಧಿಯಾಗಲಿದೆ. ಮನೆಯಲ್ಲಿ ಸಂತಸದ ವಾತಾವರಣವಿರಲಿದ್ದು, ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯುವಿರಿ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರವುದು.
 
ಸಿಂಹ: ಸಂಗಾತಿಗಾಗಿ ಆಭರಣ, ವಸ್ತ್ರ ಖರೀದಿ ಮಾಡಲು ಮುಂದಾಗುವಿರಿ. ಖರ್ಚು ವೆಚ್ಚಗಳ ಬಗ್ಗೆ ಹಿಡಿತ ಅಗತ್ಯ. ದೂರ ಸಂಚಾರ ಯೋಗವಿದ್ದು ಪೂರ್ವ ದಿಕ್ಕಿನ ಪ್ರಯಾಣ ನಿಮಗೆ ಶುಭವುಂಟು ಮಾಡಲಿದೆ. ಕಾರ್ಯಸಿದ್ಧಿಗೆ ದೇವತಾ ಪ್ರಾರ್ಥನೆ ಮಾಡಿ.
 
ಕನ್ಯಾ: ಮನೆಯಲ್ಲಿ ಒಂದು ರೀತಿಯ ಕಿರಿ ಕಿರಿ ಉಂಟಾಗುತ್ತದೆ. ಯಾವುದೋ ಹಳೆಯ ಸಮಸ್ಯೆಗಳು ಮತ್ತೆ ಎದುರಾಗುವುದು. ಕಾರ್ಯದೊತ್ತಡದಿಂದ ದೇಹಾಯಾಸವಾಗುವುದು. ಹಳೇ ಬಾಕಿಗಳು ಪಾವತಿಸಬೇಕಿದ್ದರೆ ಇಂದೇ ಮಾಡಿ.
 
ತುಲಾ: ಉದ್ಯೋಗ ಕ್ಷೇತ್ರದಲ್ಲಿ ಅನವಶ್ಯಕವಾಗಿ ಸಹೋದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗುವಿರಿ. ಆರ್ಥಿಕವಾಗಿ ಚೇತರಿಕೆ ಇರುತ್ತದೆ. ಹೊಸ ಆಸ್ತಿ, ಮನೆ ಖರೀದಿಗೆ ಚಿಂತನೆ ಮಾಡುವಿರಿ. ವಿದ್ಯಾರ್ಥಿಗಳು ಪ್ರಯತ್ನ ಬಲ ಮುಂದುವರಿಸಬೇಕು.
 
ವೃಶ್ಚಿಕ: ಸಂಚಾರದಿಂದ ದೇಹಾಯಾಸವಾಗುವುದು. ಮನೆಯಲ್ಲಿ ಹಿರಿಯರಿದ್ದರೆ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಕೌಟುಂಬಿಕ ಜವಾಬ್ಧಾರಿಗಳು ಹೆಚ್ಚುವುದು. ಕೃಷಿಕರು ಲಾಭ ಪಡೆಯುವರು.
 
ಧನು: ಮನೆಯಲ್ಲಿ ಶುಭ ಕಾರ್ಯಗಳನ್ನು ನೆರವೇರಿಸಲು ಚಿಂತನೆ ಮಾಡುವಿರಿ. ಶತ್ರು ಭಯ ಇದ್ದೇ ಇರುತ್ತದೆ. ಆದರೆ ಬೇಡದ ಆಲೋಚನೆಗಳಿಂದ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ಉದ್ಯೋಗಿಗಳು ಮುನ್ನಡೆ ಕಾಣುವರು.
 
ಮಕರ: ಅನಿರೀಕ್ಷಿತವಾಗಿ ಬರುವ ಬಂಧುಮಿತ್ರರಿಂದ ಶುಭ ವಾರ್ತೆ ನಿರೀಕ್ಷಿಸಬಹುದು. ಆರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ದೂರವಾಗಿ ನೆಮ್ಮದಿ ಕಾಣುವಿರಿ. ವಿದ್ಯಾರ್ಥಿಗಳು ಪೋಷಕರ ಮೆಚ್ಚುಗೆ ಪಡೆಯುವ ಕೆಲಸ ಮಾಡುವರು.
 
ಕುಂಭ: ನಿರುದ್ಯೋಗಿಗಳು ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಆರೋಗ್ಯದ ಬಗ್ಗೆ ಅಲಕ್ಷ್ಯ ಬೇಡ. ದಾಯಾದಿಗಳಿಂದ ಆಸ್ತಿ ಸಂಬಂಧಿತ ವಿವಾದ, ಕಿರಿ ಕಿರಿ ಉಂಟಾಗಲಿದೆ. ದೇವತಾ ಪ್ರಾರ್ಥನೆ ಮಾಡಿದರೆ ನೆಮ್ಮದಿ.
 
ಮೀನ: ದೇವತಾನುಗ್ರಹ ನಿಮ್ಮ ಮೇಲಿದ್ದು, ಕೈಗೊಂಡ ಕಾರ್ಯಗಳು ನೆರವೇರುವುದು. ಮನೆಯಲ್ಲಿ ಮದುವೆ ಮಾತುಕತೆಗಳು ನಡೆಯಲಿದ್ದು, ಹೆಚ್ಚಿನ ಓಡಾಟ ನಡೆಸಲಿದ್ದೀರಿ. ವೃತ್ತಿರಂಗದಲ್ಲಿ ಮೇಲ್ಮಟ್ಟಕ್ಕೆ ಏರುವಿರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ರೇವತಿ ನಕ್ಷತ್ರದವರು ಯಾವ ದೇವರನ್ನು ಪೂಜೆ ಮಾಡಿದರೆ ಏನು ಫಲ?

ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಉತ್ತಾರಭದ್ರ ನಕ್ಷತ್ರದವರು ಯಾವ ದೇವರನ್ನು ಪೂಜೆ ಮಾಡಿದರೆ ಏನು ಫಲ?

ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.