ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಶನಿವಾರ, 6 ಏಪ್ರಿಲ್ 2019 (08:48 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಅನಿರೀಕ್ಷಿತ ಖರ್ಚು ವೆಚ್ಚಗಳು ತಲೆದೋರಲಿವೆ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವಿರಿ. ಶೀತ ಸಂಬಂಧೀ ಆರೋಗ್ಯ ಸಮಸ್ಯೆ ಕಾಡುವುದು. ಇಷ್ಟ ಭೋಜನ ಮಾಡುವಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಬೇಕು.
 
ವೃಷಭ: ಧ‍ನಾಗಮನಕ್ಕೆ ಯಾವುದೇ ಕೊರತೆಯಿರದು. ಇದರಿಂದ ಕೈ ಹಿಡಿದ ಕೆಲಸಗಳನ್ನು ಪೂರ್ತಿ ಮಾಡುವಿರಿ. ವೃತ್ತಿ ರಂಗದಲ್ಲಿ ಮೇಲಧಿಕಾರಿಗಳ ಕಿರಿ ಕಿರಿ ಇರಲಿದ್ದು, ಮುನ್ನಡೆಗೆ ಇದುವೇ ಅಡ್ಡಗಾಲಾಗಲಿದೆ. ಎಚ್ಚರಿಕೆಯಿಂದ ಹೆಜ್ಜೆಯಿಡಿ.
 
ಮಿಥುನ: ಆರೋಗ್ಯ ಹದಗೆಡುವ ಸಂಭವವಿದೆ ಎಚ್ಚರಿಕೆ ಅಗತ್ಯ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ವರ್ಗಾವಣೆ ಭೀತಿಯಿದೆ. ಸಾಮಾಜಿಕ ರಂಗದಲ್ಲಿ ಉನ್ನತ ಸ್ಥಾನ ಮಾನ ಗಳಿಸುವಿರಿ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಮಾರ್ಗಗಳು ಕಾಣುವುದು.
 
ಕರ್ಕಟಕ: ಆರ್ಥಿಕವಾಗಿ ಉತ್ತಮ ಅಭಿವೃದ್ಧಿಯಿದ್ದು, ಮನೆ, ಆಸ್ತಿ ಖರೀದಿಗೆ ಚಿಂತನೆ ಮಾಡುವಿರಿ. ಕಚೇರಿ ವ್ಯವಹಾರಗಳಲ್ಲಿ ಜಯ ನಿಮ್ಮದಾಗುವುದು. ಆದರೆ ಓಡಾಟ ಹೆಚ್ಚು. ವಾಹನ ಖರೀದಿಗೆ ಇದು ಸಕಾಲವಲ್ಲ.
 
ಸಿಂಹ: ಕಷ್ಟದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗದೇ ಒದ್ದಾಡುವಿರಿ. ಈ ವೇಳೆ ಹಿರಿಯರ ಅಭಿಪ್ರಾಯಗಳಿಗೆ ಬೆಲೆಕೊಡುವುದು ಒಳ್ಳೆಯದು. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಕೆಲಸಗಳು ಕೊಂಚ ನಿಧಾನಗತಿಯಲ್ಲಿ ಸಾಗಲಿದೆ.
 
ಕನ್ಯಾ: ಅನಗತ್ಯ ಚಿಂತೆಗಳಿಂದ ಮನಸ್ಸಿಗೆ ಬೇಸರ ಮಾಡಿಕೊಳ್ಳುವಿರಿ. ಸತತ ಓಡಾಟದಿಂದ ದೇಹಾಯಾಸವಾಗುವುದು. ಆದರೆ ಅನಿರೀಕ್ಷಿತವಾಗಿ ಬರುವ ಬಂಧಮಿತ್ರರಿಂದ ಮನೆಯಲ್ಲಿ ಸಂತಸದ ವಾತಾವರಣವಿರುವುದು.
 
ತುಲಾ: ವೃತ್ತಿರಂಗದಲ್ಲಿ ನಿಮ್ಮ ಕೆಲಸಗಳಿಗೆ ಮನ್ನಣೆ ಸಿಕ್ಕಿ ಪ್ರಶಂಸೆ ಪಡೆಯಲಿದ್ದೀರಿ. ದೂರ ಸಂಚಾರ ಮಾಡುವಾಗ ಆರೋಗ್ಯ ಕೈಕೊಡುವ ಸಂಭವವಿದೆ. ಹಣಕಾಸಿಗೆ ಯಾವುದೇ ತೊಂದರೆಯಾಗದು. ಆದರೆ ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ.
 
ವೃಶ್ಚಿಕ: ಸಾಂಸಾರಿಕವಾಗಿ ನೆಮ್ಮದಿಯ ದಿನ. ಆದರೂ ಸಂಗಾತಿ ಬಗ್ಗೆ ಬೇರೆಯವರಿಂದ ಚಾಡಿ ಮಾಡು ಕೇಳಿಬರಬಹುದು. ಆರ್ಥಿಕವಾಗಿ ಖರ್ಚು ವೆಚ್ಚಗಳು ಹೆಚ್ಚಾಗಲಿವೆ, ಕಡಿವಾಣ ಅಗತ್ಯ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರಲಿದೆ.
 
ಧನು: ವೃತ್ತಿರಂಗದಲ್ಲಿ ಮುನ್ನಡೆ, ಬಡ್ತಿ ಯೋಗವಿದೆ. ಆದರೆ ಸಾಂಸಾರಿಕವಾಗಿ ಕೊಂಚ ಕಿರಿ ಕಿರಿ ಇರಬಹುದು. ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಆಲಸ್ಯ ತೋರುವರು. ದೇವತಾ ಪ್ರಾರ್ಥನೆ ಮಾಡಿ.
 
ಮಕರ: ಸಂಕಷ್ಟದ ಸಮಯದಲ್ಲಿ ಅಪರೂಪಕ್ಕೆ ಸಿಗುವ ಮಿತ್ರನಿಂದ ನೆರವು ಸಿಕ್ಕಿ ಕಾರ್ಯ ಸಿದ್ಧಿಯಾಗುವುದು. ಆರ್ಥಿಕವಾಗಿ ಸಮಧಾನಕರ ದಿನ. ಸಾಲ ಕೊಡಲು ಹೋಗಬೇಡಿ. ದೂರ ಸಂಚಾರ ಮಾಡುವುದಿದ್ದರೆ ಎಚ್ಚರಿಕೆ ಅಗತ್ಯ.
 
ಕುಂಭ: ಇಂದಿನ ದಿನ ಶುಭ ದಿನವಾಗಿದ್ದು, ಅವಿವಾಹಿತರಿಗೆ ಮನಸ್ಸಿಗೆ ಒಪ್ಪುವಂತಹ ವಿವಾಹ ಪ್ರಸ್ತಾಪಗಳು ಬರಲಿವೆ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ಆರ್ಥಿಕವಾಗಿ ಉತ್ತಮ ಚೇತರಿಕೆ ಕಂಡುಬರುವುದು.
 
ಮೀನ: ಹಠ ಬಿಡದೇ ಮುಂದುವರಿದರೆ ಅಂದುಕೊಂಡ ಕಾರ್ಯ ನೆರವೇರಿಸುತ್ತೀರಿ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡಿಕೊಳ್ಳಲಿದ್ದೀರಿ. ದಾಂಪತ್ಯದಲ್ಲಿ ಸುಂದರ ಕ್ಷಣಗಳು ನಿಮ್ಮದಾಗುವುದು. ಸಂತೃಪ್ತಿದಾಯಕ ದಿನ ನಿಮ್ಮದಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                         ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಸಂಸಾರದಲ್ಲಿ ನಿತ್ಯ ಕಲಹವೇ? ಹಾಗಿದ್ದರೆ ಈ ದೇವರ ಸೇವೆ ಮಾಡಿ

ಬೆಂಗಳೂರು: ಗಲಾಟೆಗಳಿಲ್ಲದ ಸಂಸಾರಗಳಿರುವುದಿಲ್ಲ. ಆದರೆ ಗಲಾಟೆಯೇ ಸಂಸಾರವಾದರೆ ಅಂತಹ ಮನೆ ಸುಖವಾಗಿರಲಾರದು. ...

news

ವಿದ್ಯಾರ್ಥಿಗಳಿಗೆ ಓದಿದ್ದು ತಲೆಗೆ ಹತ್ತುತ್ತಿಲ್ಲವೇ? ಹಾಗಿದ್ದರೆ ಹೀಗೆ ಮಾಡಿದರೆ ಸಾಕು

ಬೆಂಗಳೂರು: ಪರೀಕ್ಷಾ ಸಮಯದಲ್ಲಿ ಓದಿದ್ದು ತಲೆಗೆ ಹತ್ತುತ್ತಿಲ್ಲ, ಪರೀಕ್ಷೆಯಲ್ಲಿ ನಿರೀಕ್ಷಿಸಿದಷ್ಟು ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ವೃದ್ಧರ ಸೇವೆ ಮಾಡಿದರೆ ನಮಗೆ ಈ ಫಲ ಸಿಗುತ್ತದೆ!

ಬೆಂಗಳೂರು: ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ಎಲ್ಲರೂ ಅಲಕ್ಷಿಸುವುದೇ ಹೆಚ್ಚು. ವೃದ್ಧರ ಸೇವೆಗೆ ಹಿಂದೇಟು ...