ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಮಂಗಳವಾರ, 9 ಏಪ್ರಿಲ್ 2019 (09:05 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಮನೆಯಲ್ಲಿ ಶುಭಮಂಗಲ ಕಾರ್ಯಗಳು ನೆರವೇರುವುದು. ಆದರೆ ಆರೋಗ್ಯ ಕೈಕೊಡುವುದು. ಆರ್ಥಿಕವಾಗಿ ಸಾಲ ಕೊಂಡು ಹೋದವರಿಂದ ಹಣ ಪಡೆಯುವ ಬಗ್ಗೆ ಚಿಂತೆಯಾಗಲಿದೆ.
 
ವೃಷಭ: ಪತಿ-ಪತ್ನಿಯರಲ್ಲಿ ಕಲಹ ಸಂಭವವಿದೆ. ಮಾನಸಿಕ ನೆಮ್ಮದಿಗೆ ಭಂಗವಾಗುವುದು. ಆದರೆ ಆದಾಯಕ್ಕೆ ಯಾವುದೇ ಕೊರತೆಯಿಲ್ಲ. ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ, ಮುನ್ನಡೆ ಸಾಧ್ಯತೆಯಿದೆ. ನೆನೆಗುದಿಗೆ ಬಿದ್ದಿದ್ದ ಕಾರ್ಯಗಳಿಗೆ ಚಾಲನೆ ದೊರೆಯಲಿದೆ.
 
ಮಿಥುನ: ಕಾರ್ಯದೊತ್ತಡಗಳು ಅಧಿಕವಾಗಲಿದ್ದು, ನಿರೀಕ್ಷಿತ ಜಯ ಸಿಗದೇ ನಿರಾಶೆಯಾಗುವುದು. ಹಿತ ಶತ್ರುಗಳಿಂದ ವಂಚನೆಯ ಭೀತಿಯಿದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ.
 
ಕರ್ಕಟಕ: ಹಠವಾದಿ ಮಕ್ಕಳು ಮಾತು ಕೇಳದೇ ಚಿಂತೆಯಾಗುವುದು. ಸನ್ಮಿತ್ರರ ಸಹಕಾರದಿಂದ ಕಷ್ಟಗಳು ದೂರವಾಗುವುದು. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗಿ ಬರುತ್ತದೆ. ನಿರುದ್ಯೋಗಿಗಳಿಗೆ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ.
 
ಸಿಂಹ: ಸಾಮಾಜಿಕ ಕೆಲಸಗಳಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದು. ಜನರ ಪ್ರೀತಿಗೆ ಪಾತ್ರರಾಗಲಿದ್ದೀರಿ. ಆರ್ಥಿಕವಾಗಿಯೂ ಚೇತರಿಕೆ ಕಾಣುವಿರಿ. ಪ್ರತಿಭೆಗೆ ತಕ್ಕ ಫಲ ದೊರೆಯುವುದು. ಹಾಗಿದ್ದರೂ ಯಾವುದೋ ಮಾನಸಿಕ ಕೊರಗು ಕಾಡಲಿದೆ.
 
ಕನ್ಯಾ: ಉದ್ದೇಶಿತ ಕೆಲಸಗಳು ನಿಧಾನವಾಗಿ ಸಾಗಿದರೂ, ನೀವಂದುಕೊಂಡಂತೆ ನಡೆದು ಮನಸ್ಸಿಗೆ ನೆಮ್ಮದಿಯಾಗುವುದು. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಪ್ರಗತಿ ಕಂಡು ಸಹೋದ್ಯೋಗಿಗಳೂ ಅಸೂಯೆ ಪಡುವರು.
 
ತುಲಾ: ಆರ್ಥಿಕವಾಗಿ ಆರಂಭದಲ್ಲಿ ಕೊಂಚ ಮುಗ್ಗಟ್ಟು ಎದುರಿಸಬೇಕಾದೀತು. ಆದರೆ ಸಕಾಲದಲ್ಲಿ ಹಣ ಪಾವತಿಯಾಗಿ ಕೆಲಸಗಳು ಸುಗಮವಾಗಿ ನಡೆಯುವುದು. ಒಂದು ರೀತಿಯ ಮಿಶ್ರಫಲ ನೀವು ಅನುಭವಿಸಬೇಕಾಗುತ್ತದೆ. ಎಚ್ಚರವಾಗಿರಿ.
 
ವೃಶ್ಚಿಕ: ಹಂತ ಹಂತವಾಗಿ ಅಭಿವೃದ್ಧಿ ಕಾಣುವಿರಿ. ಇದರಿಂದ ನೆಮ್ಮದಿಯ ವಾತಾವರಣವಿರಲಿದೆ. ಕುಟುಂಬದವರು, ಮಿತ್ರರೊಂದಿಗೆ ಸಂತಸದ ಸಮಯ ಕಳೆಯುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಆದರೆ ಆರೋಗ್ಯದ ಬಗ್ಗೆ ಕಾಳಜಿ ಇರಲಿ.
 
ಧನು: ಯಾವುದೇ ಕೆಲಸವಾಗಿದ್ದರೂ ಪರಿಶ್ರಮ ಅಗತ್ಯವಿದೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆತೀತು. ಹಾಗಿದ್ದರೂ ದುಡುಕಿನ ವರ್ತನೆ ತೋರಿದರೆ ಅಪವಾದ ತಪ್ಪದು. ತಾಳ್ಮೆ ಅಗತ್ಯ.
 
ಮಕರ: ವಿವಾಹಾಪೇಕ್ಷಿಗಳಿಗೆ ಶುಭ ದಿನ. ಮನಸ್ಸಿಗೆ ಹಿಡಿಸಿದ ಸಂಬಂಧಗಳು ಕೂಡಿಬರಲಿದೆ. ಪ್ರೇಮಿಗಳಿಗೂ ಮನೆಯವರ ಒಪ್ಪಿಗೆ ಸಿಗಲಿದೆ. ಕೌಟುಂಬಿಕವಾಗಿ ಶುಭ ದಿನ. ಉದ್ಯೋಗ ಕ್ಷೇತ್ರದಲ್ಲಿ ಕೆಲವೊಂದು ಅಡೆತಡೆಗಳು ಎದುರಾದೀತು, ಹಾಗಿದ್ದರೂ ಚಿಂತೆ ಬೇಡ.
 
ಕುಂಭ: ಅನವಶ್ಯಕ ಆತಂಕ ಚಿಂತೆ ಮಾಡುವಿರಿ. ನಿರುದ್ಯೋಗಿಗಳು ಉದ್ಯೋಗಾವಕಾಶ ನಿಮಿತ್ತ ದೂರ ಸಂಚಾರ ಮಾಡುವರು. ದಾಯಾದಿಗಳೊಂದಿಗೆ ಕಿರಿ ಕಿರಿ ಆಗಬಹುದು. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಸೂಕ್ತ.
 
ಮೀನ: ಇಂದು ಆರಂಭಿಸುವ ಕೆಲಸದಲ್ಲಿ ಜಯ ಪಡೆಯುವಿರಿ. ಅವಿವಾಹಿತರಿಗೆ ಕಂಕಣ ಕೂಡಿಬರಲಿದೆ. ಆರ್ಥಿಕವಾಗಿಯೂ ಚೇತರಿಕೆ ಕಾಣುವಿರಿ. ಕುಲದೇವರಿಗೆ ಸಂಬಂಧಪಟ್ಟ ಧಾರ್ಮಿಕ ಕೆಲಸಗಳಲ್ಲಿ ಭಾಗಿಯಾಗುವಿರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ದೇವರು ಬೇಡಿದ ವರ ಕೊಡಬೇಕಾದರೆ ಹೀಗೆ ಮಾಡಿ

ಬೆಂಗಳೂರು: ಭಗವಂತನನ್ನ ಕಾಣಲು, ಸಂಪ್ರೀತಗೊಳಿಸಲು ಪ್ರಾಚಿನ ಕಾಲದಿಂದಲೂ ಋಷಿ ಮುನಿಗಳು ಕಂಡುಕೊಂಡ ಉಪಾಯಗಳು ...

news

ಭಗವಂತನಿಗೆ ಮಾಡುವ ವಿವಿಧ ಆರತಿಗಳು ಮತ್ತು ಅವುಗಳ ಫಲಗಳು

ಬೆಂಗಳೂರು: ಭಗವಂತನಿಗೆ ನಾವು ಮಾಡುವ ವಿವಿಧ ಆರತಿಯಿಂದ ಸಂತುಷ್ಠನಾಗುತ್ತಾನೆಂಬ ನಂಬಿಕೆಯಿದೆ. ಯಾವ ಯಾವ ...

news

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

news

ದೀಪದ ವಿವಿಧ ಭಾಗಗಳಲ್ಲಿ ಯಾವ ಯಾವ ದೇವರು ನೆಲೆಸಿರುತ್ತಾರೆ?

ಬೆಂಗಳೂರು: ಪ್ರತಿದಿನ ದೀಪ ಹಚ್ಚುವ ಸಂಪ್ರದಾಯ ಹಿಂದೂ ಧರ್ಮೀಯರಲ್ಲಿರುತ್ತದೆ. ಆದರೆ ಆ ದೀಪದಲ್ಲಿ ಯಾವೆಲ್ಲಾ ...