ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಗುರುವಾರ, 11 ಏಪ್ರಿಲ್ 2019 (07:33 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ವಿಪರೀತ ಧನವ್ಯಯವಾಗಲಿದ್ದು, ಆದಾಯವೂ ಕಡಿಮೆಯಾಗಿ ನಿಮ್ಮ ಚಿಂತೆಗೆ ಕಾರಣವಾಗಲಿದೆ. ಬಾಕಿ ಹಣ ವಸೂಲಾತಿಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳುವಿರಿ. ಉದ್ಯೋಗ ಕ್ಷೇತ್ರದಲ್ಲಿ ಕಿರಿ ಕಿರಿ. ಆದರೆ ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ.
 
ವೃಷಭ: ಕಲೆ, ಸಾಹಿತ್ಯ, ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಸ್ಥಾನ ಮಾನಗಳು ವೃದ್ಧಿಯಾಗಿ ಮನ್ನಣೆ ಸಿಗಲಿದೆ. ಸಾಂಸಾರಿಕವಾಗಿ ದಾಯಾದಿಗಳಿಂದ ಕಿರಿ ಕಿರಿ ಇರಲಿದೆ. ಅವಿವಾಹಿತರು ಸ್ವಲ್ಪ ದಿನ ಕಾಯಬೇಕಾಗುತ್ತದೆ.
 
ಮಿಥುನ: ಕಾರ್ಯ ನಿಮಿತ್ತ ದೂರ ಸಂಚಾರ ಮಾಡಿದರೆ ಹಲವು ವಿಘ‍್ನಗಳು ಎದುರಾಗಲಿವೆ. ಆರ್ಥಿಕವಾಗಿ ಕೊಂಚ ಮುಗ್ಗಟ್ಟು ಎದುರಿಸಬೇಕಾಗುತ್ತದೆ. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಪಡೆಯುವರು. ದಿನದಂತ್ಯಕ್ಕೆ ಶುಭ ಸುದ್ದಿ.
 
ಕರ್ಕಟಕ: ಸಕಾಲದಲ್ಲಿ ಧನಾಗಮನವಾಗಿ ಉದ್ದೇಶಿತ ಕಾರ್ಯಗಳು ಸಫಲವಾಗುವುದು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ವಿದೇಶ ಪ್ರಯಾಣ ಮಾಡುವ ಯೋಗವಿದೆ. ವಿವಾಹಾಪೇಕ್ಷಿಗಳಿಗೆ ಪ್ರಯತ್ನಕ್ಕೆ ಫಲ ದೊರೆಯಲಿದೆ.
 
ಸಿಂಹ: ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ವ್ಯವಹಾರದಲ್ಲಿ ಸಮಸ್ಥಿತಿ ಇರಲಿದೆ. ಬಂಧು ಮಿತ್ರರಿಂದ ಸಹಕಾರ ಸಿಗಲಿದ್ದು, ನೆಮ್ಮದಿ ಮೂಡುವುದು. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರುವುದು.
 
ಕನ್ಯಾ: ಸಾಂಸಾರಿಕ ಜೀವನದಲ್ಲಿ ಸಂಗಾತಿ, ಮಕ್ಕಳಿಂದ ಸಹಕಾರ ಸಿಕ್ಕಿ ನೆಮ್ಮದಿ ಸಿಗಲಿದೆ. ಕುಲದೇವರ ಪ್ರಾರ್ಥನೆಯಿಂದ ಮತ್ತಷ್ಟು ಯಶಸ್ಸು, ನೆಮ್ಮದಿ ಸಿಗಲಿದೆ. ಹಿರಿಯರ ಆರೋಗ್ಯ ನಿಮಿತ್ತ ಆಸ್ಪತ್ರೆಗೆ ಅಲೆದಾಡಬೇಕಾದೀತು.
 
ತುಲಾ: ದುಡುಕುತನ ಒಳ್ಳೆಯದಲ್ಲ. ವ್ಯಾಪಾರ, ವ್ಯವಹಾರಗಳಲ್ಲಿ ತೀವ್ರ ಸ್ಪರ್ಧೆ ಕಂಡುಬರುವುದು. ಹಿತ ಶತ್ರುಗಳನ್ನು ಜಾಣ್ಮೆಯಿಂದ ನಿಭಾಯಿಸುವುದು ಒಳ್ಳೆಯದು. ವಿದ್ಯಾರ್ಥಿಗಳು ನಿರೀಕ್ಷೆಗೆ ತಕ್ಕ ಫಲ ಪಡೆಯುವರು.
 
ವೃಶ್ಚಿಕ: ಹಣಕಾಸಿನ ಸಮಸ್ಯೆಗಳು ನಿಮ್ಮನ್ನು ಹೈರಾಣಾಗಿಸಲಿದೆ. ಇದರಿಂದ ಕಾರ್ಯ ಹಾನಿ. ಆದರೆ ಸಕಾಲದಲ್ಲಿ ಮಿತ್ರರ ನೆರವು ಸಿಗಲಿದೆ. ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಕುಟುಂಬದಲ್ಲಿ ಕೆಲವೊಂದು ಜವಾಬ್ಧಾರಿಗಳನ್ನು ನಿಭಾಯಿಸಬೇಕಾಗುತ್ತದೆ.
 
ಧನು: ಬಂಧು ಮಿತ್ರರ ಆಗಮನದಿಂದ ಖರ್ಚುಗಳು ಅಧಿಕವಾದರೂ ಸಂತೋಷಕ್ಕೆ ಕೊನೆಯಿರದು. ಆದರೆ ಮಹಿಳೆಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ, ವಿನಾಕಾರಣ ಅಪವಾದಕ್ಕೆ ಗುರಿಯಾಗುವಿರಿ. ಹೊಸ ವ್ಯವಹಾರಗಳಿಗೆ ಬಂಡವಾಳ ಹೂಡುವಾಗ ಎಚ್ಚರಿಕೆ.
 
ಮಕರ: ನಿರುದ್ಯೋಗಿಗಳಿಗೆ ಯಾವುದೋ ರೂಪದಲ್ಲಿ ಸಹಾಯ ಸಿಗಲಿದೆ. ವೈಯಕ್ತಿಕವಾಗಿ ಆರೋಗ್ಯ ಹದಗೆಡುವುದು, ಆದರೆ ಸಂಗಾತಿಯ ಸಹಕಾರ ಸಿಗುವುದು. ಮಕ್ಕಳು ಸಂತೋಷಕ್ಕೆ ಕಾರಣರಾಗುವರು. ನೂತನ ದಂಪತಿಗಳು ಸುಂದರ ಕ್ಷಣ ಕಳೆಯುವರು.
 
ಕುಂಭ: ಜೀವನದಲ್ಲಿ ಬರುವ ಅಪರಿಚಿತ ವ್ಯಕ್ತಿಯಿಂದ ಹೊಸ ತಿರುವು ಸಿಗಲಿದೆ. ಅನವಶ್ಯಕ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ. ಕೋರ್ಟು, ಕಚೇರಿ ವ್ಯವಹಾರಗಳಲ್ಲಿ ಜಯ ಸಿಗುವುದು. ಹಿರಿಯರ ಸಲಹೆಗಳಿಗೆ ಮನ್ನಣೆ ಕೊಡಿ.
 
ಮೀನ: ಸಂಗಾತಿಯ ಸಲಹೆಗಳನ್ನು ಉಪೇಕ್ಷಿಸದಿರಿ. ನೀವು ಇಂದು ಕ್ರಿಯಾಶೀಲರಾಗಿರುತ್ತೀರಿ. ಆದರೆ ಕಾರ್ಯದೊತ್ತಡದಿಂದ ದೇಹ ಹೈರಾಣಾಗುವುದು. ಹಾಗಿದ್ದರೂ ಕುಟುಂಬದ ನೆಮ್ಮದಿಯಲ್ಲಿ ನಿಮ್ಮ ನೆಮ್ಮದಿ ಕಾಣುವಿರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ದಿನಕ್ಕೊಂದು ದಾನದ ಮಹತ್ವ: ಅರಸಿನ, ಕುಂಕುಮ ದಾನ ಮಾಡಿದರೆ ಏನು ಫಲ?

ಬೆಂಗಳೂರು: ಇಂದಿನಿಂದ ದಿನಕ್ಕೊಂದರಂತೆ ವಸ್ತುಗಳ ದಾನ ಮಾಡುವುದರ ಫಲಾಫಲಗಳ ಬಗ್ಗೆ ತಿಳಿಯುತ್ತಾ ಸಾಗೋಣ. ...

news

ದೇವರ ದರ್ಶನ ಹೇಗೆ ಪಡೆಯಬೇಕು?

ಬೆಂಗಳೂರು: ಯಾವುದಾದರೂ ದೇವಸ್ಥಾನಕ್ಕೆ ಹೋದಾಗ ದೇವರ ದರ್ಶನ ಹೇಗೆ ಪಡೆಯಬೇಕು ಎನ್ನುವುದಕ್ಕೆ ನಮ್ಮ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಬೇಗನೇ ವಿವಾಹ ನಿಶ್ಚಯವಾಗಲು ಅಶ್ವತ್ಥ ಮರಕ್ಕೆ ಹೀಗೆ ಮಾಡಿ

ಬೆಂಗಳೂರು: ಕನ್ಯಾ ಕುಮಾರಿಯರು ಅಶ್ವತ್ಥ ಮರಕ್ಕೆ ಸುತ್ತು ಹಾಕುವುದನ್ನು ನಾವು ನೋಡುತ್ತೇವೆ. ಬೇಗ ...