ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಗುರುವಾರ, 18 ಏಪ್ರಿಲ್ 2019 (06:34 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಮೇಲ್ನೋಟಕ್ಕೆ ಎಲ್ಲವೂ ಸುಗಮವಾಗಿದೆ ಎಂದರೂ ಒಳಗೊಳಗೇ ನಿಮ್ಮ ವಿರುದ್ಧ ಮಸಲತ್ತು ಮಾಡುವವರು ಇರಲಿದ್ದಾರೆ. ಎಚ್ಚರಿಕೆಯಿಂದಿರುವುದು ಮುಖ್ಯ. ಆರ್ಥಿಕವಾಗಿ ಬಾಕಿ ಹಣ ಬಾರದೇ ಚಿಂತೆಗೊಳಗಾಗುವಿರಿ. ಆರೋಗ್ಯ ಸುಧಾರಿಸುವುದು.
 
ವೃಷಭ: ಕೇವಲ ಭ್ರಮೆಯಲ್ಲಿ ಇರಬೇಡಿ. ಹಗಲುಗನಸು ಕಾಣುತ್ತಾ ಕಾರ್ಯದಲ್ಲಿ ಉದಾಸೀನ ಪ್ರವೃತ್ತಿ ತೋರಿದರೆ ತೊಂದರೆ ತಪ್ಪಿದ್ದಲ್ಲ. ಪರಿಶ್ರಮ ಪಟ್ಟು ದುಡಿದರೆ ತಕ್ಕ ಫಲ ಕಾಣುವಿರಿ. ಸಂಗಾತಿಯ ಮಾತಿಗೆ ಕಿವಿಗೊಡಬೇಕಾದೀತು.
 
ಮಿಥುನ: ಬ್ಯಾಂಕ್ ವ್ಯವಹಾರಗಳಲ್ಲಿ ವಂಚನೆ, ಕಳ್ಳತನದ ಭೀತಿಯಿದೆ. ಎಚ್ಚರಿಕೆ ಅಗತ್ಯ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವ ಸಾಧ್ಯತೆಯಿದೆ. ನಿರುದ್ಯೋಗಿಗಳು ಸ್ವಲ್ಪ ದಿನ ಕಾಯಬೇಕಾಗುತ್ತದೆ. 
 
ಕರ್ಕಟಕ: ಹಿರಿಯರ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಅಲೆದಾಡಬೇಕಾದೀತು. ಶುಭ ಮಂಗಲ ಕಾರ್ಯಗಳನ್ನು ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ. ಪಿತ್ರಾರ್ಜಿತ ಆಸ್ತಿ ವಿವಾದಗಳು ಧುತ್ತನೆ ಎದುರಾಗಲಿವೆ.
 
ಸಿಂಹ: ವಾಹನ ಚಾಲನೆ ಮಾಡುವವರಿಗೆ ಅಪಘಾತದ ಭಯವಿದೆ, ಹೀಗಾಗಿ ಎಚ್ಚರಿಕೆಯಿಂದ ಚಾಲನೆ ಮಾಡುವುದು ಅಗತ್ಯ. ಭಾವನೆಗಳ ಮೇಲೆ ನಿಯಂತ್ರಣ ಸಾಧಿಸುವುದು ಒಳ್ಳೆಯದು. ದುಡುಕು ವರ್ತನೆ ಸಂಬಂಧ ಹಾಳು ಮಾಡಬಹುದು.
 
ಕನ್ಯಾ: ನೀವು ಮಾಡುವ ಕೆಲಸ ಕಾರ್ಯಗಳಿಗೆ ಸಮಾಜದಲ್ಲಿ ಮನ್ನಣೆ ಸಿಕ್ಕಿ ಉತ್ತಮ ಸ್ಥಾನ ಮಾನ ಪಡೆಯುವಿರಿ. ಆದರೆ ಅನಿರೀಕ್ಷಿತವಾಗಿ ಖರ್ಚು ವೆಚ್ಚಗಳು ಎದುರಾಗಬಹುದು. ಕುಟುಂಬದ ಕೆಲವೊಂದು ಜವಾಬ್ಧಾರಿಗಳನ್ನು ಹೊರಬೇಕಾಗುತ್ತದೆ.
 
ತುಲಾ: ಇಂಜಿನಿಯರಿಂಗ್ ವೃತ್ತಿಯವರಿಗೆ ಲಾಭಕರ ದಿನ. ಕೈಗೊಂಡ ಕೆಲಸಗಳು ನೆರವೇರುವುದು. ವ್ಯಾಪಾರಿಗಳು ಕೊಂಚ ನಷ್ಟ ಅನುಭವಿಸಬೇಕಾಗಬಹುದು. ಆದರೆ ಮಿತ್ರರಿಂದ ಸಕಾಲದಲ್ಲಿ ನೆರವು ದೊರೆಯುವುದು.
 
ವೃಶ್ಚಿಕ: ಅನಗತ್ಯವಾಗಿ ಮನಬಂದಂತೆ ಹಣದ ದುಂದುವೆಚ್ಚ ಮಾಡದಿರಿ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಬರಬಹುದಾದ ಕಷ್ಟಗಳಿಂದ ದೂರವಾಗುವಿರಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
 
ಧನು: ಹಳೆಯ ಕಾಗದ ಪತ್ರಗಳು, ಕಡತಗಳ ವಿಲೇವಾರಿ ಮಾಡುವಿರಿ. ಆಸ್ತಿ, ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರ ಅಗತ್ಯ. ಸಹೋದರರೊಂದಿಗೆ ಕಿರಿ ಕಿರಿ ಮಾಡಿಕೊಳ್ಳುವಿರಿ. ಮಕ್ಕಳ ಮೇಲೆ ಅತಿಯಾದ ನಿರೀಕ್ಷೆ ಬೇಡ.
 
ಮಕರ: ಹಿತಶತ್ರುಗಳು ಬೆನ್ನ ಹಿಂದೆಯೇ ಇದ್ದು ನಿಮ್ಮನ್ನು ಗಮನಿಸಲಿದ್ದಾರೆ. ವ್ಯಾಪಾರ ವ್ಯವಹಾರಗಳಿಗೆ ಕೈಹಾಕಬಹುದು, ಆದರೆ ಎಚ್ಚರಿಕೆ ಅಗತ್ಯ. ಹಿರಿಯರ ತೀರ್ಥ ಯಾತ್ರೆಗೆ ಸಿದ್ಧತೆ ನಡೆಸುವಿರಿ.
 
ಕುಂಭ: ಸರ್ಕಾರಿ ಕೆಲಸದಲ್ಲಿರುವವರಿಗೆ ಮೇಲಧಿಕಾರಿಗಳ ಹಸ್ತಕ್ಷೇಪ ಮನಸ್ಸಿಗೆ ಕಿರಿ ಕಿರಿ ಆಗಬಹುದು. ನಿಮ್ಮ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ನೂತನ ದಂಪತಿಗಳಿಗೆ ಪ್ರವಾಸ ಭಾಗ್ಯ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
 
ಮೀನ: ಕಾರ್ಯನಿಮಿತ್ತ ದೂರ ಸಂಚಾರ ಕೈಗೊಳ್ಳುವಿರಿ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ ಸಿಗುವುದು. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶವನ್ನು ಬಳಸಿಕೊಳ್ಳಬೇಕು. ಮಾನಸಿಕವಾಗಿ ಚಿಂತೆ ಕಾಡಲಿದೆ. ನೆಮ್ಮದಿಗಾಗಿ ಕುಲದೇವರನ್ನು ಪ್ರಾರ್ಥಿಸಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                         ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಶುಕ್ರ ಗ್ರಹದ ಪ್ರಭಾವ ಕಡಿಮೆಯಾಗಲು ಏನು ಮಾಡಬೇಕು?

ಬೆಂಗಳೂರು: ಜೀವನ ಶೈಲಿ ಸರಿಪಡಿಸಿಕೊಂಡರೆ ನವಗ್ರಹಗಳ ಪ್ರಭಾವ ಶಮನವಾಗುತ್ತದೆಯೇ? ಹೌದು. ಆರೋಗ್ಯಕರ ಜೀವನ ...

news

ದಿನಕ್ಕೊಂದು ದಾನ: ಫಲದಾನ ದಾನ ಮಾಡಿದರೆ ಏನು ಫಲ?

ಬೆಂಗಳೂರು: ದಾನ ಮಾಡುವುದು ಶ್ರೇಷ್ಠ ವಿಚಾರ ಎಂದು ನಮಗೆಲ್ಲಾ ಗೊತ್ತಿದೆ. ಆದರೆ ಯಾವ ದಾನ ಮಾಡಿದರೆ ಏನು ಫಲ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಗುರು ಗ್ರಹದ ಪ್ರಭಾವ ಕಡಿಮೆಯಾಗಲು ಏನು ಮಾಡಬೇಕು?

ಬೆಂಗಳೂರು: ಜೀವನ ಶೈಲಿ ಸರಿಪಡಿಸಿಕೊಂಡರೆ ನವಗ್ರಹಗಳ ಪ್ರಭಾವ ಶಮನವಾಗುತ್ತದೆಯೇ? ಹೌದು. ಆರೋಗ್ಯಕರ ಜೀವನ ...