ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಶುಕ್ರವಾರ, 19 ಏಪ್ರಿಲ್ 2019 (05:45 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಶುಭ ಮಂಗಲ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಹಳೆಯ ಮಿತ್ರರು, ಬಂಧುಗಳನ್ನು ಭೇಟಿಯಾಗುವಿರಿ. ಆದರೆ ಪ್ರಯಾಣದಿಂದ ದೇಹಾಯಾಸವಾದೀತು. ಆರ್ಥಿಕವಾಗ ಕೊಂಚ ಮುಗ್ಗಟ್ಟು ಎದುರಿಸುವಿರಿ.
 
ವೃಷಭ: ಅನಿರೀಕ್ಷಿತವಾಗಿ ಬರುವ ಬಂಧುಮಿತ್ರರಿಂದ ಮನಸ್ಸಿಗೆ ಸಂತಸ. ಮನೆಯಲ್ಲಿ ಸಂತಸದ ವಾತಾವರಣವಿರುವುದು. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರುವುದು. ಹಿಡಿತ ಅಗತ್ಯ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿ.
 
ಮಿಥುನ: ಹಿರಿಯರಿಂದ ಬಂದ ಅಮೂಲ್ಯ ವಸ್ತುವೊಂದು ಕಳೆದುಕೊಳ್ಳುವ ಭೀತಿಯಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವಿರಿ. ದಿನದಂತ್ಯಕ್ಕೆ ಶುಭ ಸುದ್ದಿಯಿದೆ.
 
ಕರ್ಕಟಕ: ಆಸ್ತಿ, ದಾಯಾದಿ ಕಲಹದ ವಿಚಾರದಲ್ಲಿ ಹಿರಿಯರ ಮಾತಿಗೆ ಬೆಲೆ ಕೊಟ್ಟು ಮುನ್ನಡೆದರೆ ಯಶಸ್ಸು. ವಾಹನ, ಭೂಮಿ ಖರೀದಿಗೆ ಮನಸ್ಸು ಮಾಡುವಿರಿ. ಆದರೆ ವಂಚನೆಗೊಳಗಾಗುವ ಅಪಾಯವಿದ್ದು, ಎಚ್ಚರಿಕೆ ಅಗತ್ಯ.
 
ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ರಾಜನಂತೆ ಮೆರೆಯುವ ಯೋಗ ಇಂದು ನಿಮ್ಮದು. ಹಿರಿಯ ಅಧಿಕಾರಿಗಳಿಗೂ ನೆರವಾಗಬೇಕಾದ ಪರಿಸ್ಥಿತಿ ಬರಲಿದೆ. ಇದರಿಂದ ನಿಮ್ಮ ಬೆಲೆ ಹೆಚ್ಚಲಿದೆ. ಕೌಟುಂಬಿಕವಾಗಿ ಸಮಾಧಾನಕರ ದಿನ.
 
ಕನ್ಯಾ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರವುದು. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡ ಹೆಚ್ಚುವುದು. ಅನಗತ್ಯ ಖರ್ಚು ವೆಚ್ಚಗಳು ಮಾಡುವಿರಿ. ಸಂಕಷ್ಟದ ಸಮಯದಲ್ಲಿ ಮಿತ್ರರು ನೆರವಿಗೆ ಬರಲಿದ್ದಾರೆ.
 
ತುಲಾ: ವ್ಯಾಪಾರ ವ್ಯವಹಾರದಲ್ಲಿ ಕೊಂಚ ಚೇತರಿಕೆ ಕಂಡುಬರುವುದು. ಸಹೋದರರೊಂದಿಗೆ ವಾಗ್ವಾದಕ್ಕಿಳಿಯುವ ಪ್ರಸಂಗ ಎದುರಾಗಲಿದೆ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.
 
ವೃಶ್ಚಿಕ: ಆಸ್ತಿ ವಿವಾದಗಳು ಕೋರ್ಟು ಮೆಟ್ಟಿಲೇರಿದ್ದರೆ ಜಯ ನಿಮ್ಮದಾಗುವುದು. ಹೊಸ ವ್ಯವಹಾರಕ್ಕೆ ಬಂಡವಾಳ ಹೂಡಿಕೆ ಮಾಡಲು ಹೇಳಿ ಮಾಡಿಸಿದ ದಿನ. ಆರ್ಥಿಕವಾಗಿ ನಾನಾ ರೀತಿಯಿಂದ ಧನಾಗಮನವಾಗಲಿದೆ.
 
ಧನು: ನೂತನ ದಂಪತಿಗಳಿಗೆ ಮಧುಚಂದ್ರದ ಭಾಗ್ಯ. ನಿಮ್ಮ ಹಠಮಾರಿತನ ಧೋರಣೆಯಿಂದ ನಿಮಗೇ ತೊಂದರೆಯಾಗಲಿದೆ. ಅಪರಿಚಿತರ ಮಾತಿಗೆ ಮರಳಾಗದಿರಿ. ಆದಾಯಕ್ಕೆ ನಾನಾ ಮಾರ್ಗಗಳನ್ನು ಕಂಡುಕೊಳ್ಳುವಿರಿ.
 
ಮಕರ: ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗಿ ಬರುತ್ತದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಆದರೆ ಮನಸ್ಸಿಗೆ ಬೇಸರವಾಗುವಂತಹ ಅನಿರೀಕ್ಷಿತ ವಾರ್ತೆಯೊಂದನ್ನು ಕೇಳಲಿದ್ದೀರಿ. ತಾಳ್ಮೆಯಿಂದಿರಿ.
 
ಕುಂಭ: ಕುಟುಂಬದಲ್ಲಿ ಜವಾಬ್ಧಾರಿಗಳು ಹೆಚ್ಚಲಿವೆ. ಆದರೆ ನಿಮ್ಮ ಉದಾಸೀನ ಪ್ರವೃತ್ತಿಯಿಂದ ಕಾರ್ಯದಲ್ಲಿ ವಿಳಂಬವಾಗಲಿದೆ. ಉದ್ಯೋಗಾರ್ಥಿಗಳಿಗೆ ವಿದೇಶ ಪ್ರಯಾಣದ ಯೋಗವಿದೆ. ಪಾಲಿಗೆ ಬಂದಿದ್ದನ್ನು ಬಳಸಿಕೊಳ್ಳುವ ವಿವೇಚನೆ ಅಗತ್ಯ.
 
ಮೀನ: ಕಾರ್ಯದೊತ್ತಡ ಹೆಚ್ಚಿ ದೇಹ ಹೈರಾಣಾಗುವುದು. ಧನ ಹಾನಿ ಸಂಭವವಿದೆ. ಆದರೆ ಸನ್ಮಿತ್ರರ ಸಹಾಯ ದೊರಕಲಿದೆ. ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊ‍ಳ್ಳುತ್ತೀರಿ. ಹೆಚ್ಚಿನ ಶುಭ ಫಲಗಳಿಗೆ ಕುಲದೇವರ ಪ್ರಾರ್ಥನೆ ಮಾಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಶನಿ ಗ್ರಹದ ಪ್ರಭಾವ ಕಡಿಮೆಯಾಗಲು ಏನು ಮಾಡಬೇಕು?

ಬೆಂಗಳೂರು: ಜೀವನ ಶೈಲಿ ಸರಿಪಡಿಸಿಕೊಂಡರೆ ನವಗ್ರಹಗಳ ಪ್ರಭಾವ ಶಮನವಾಗುತ್ತದೆಯೇ? ಹೌದು. ಆರೋಗ್ಯಕರ ಜೀವನ ...

news

ದಿನಕ್ಕೊಂದು ದಾನ: ಬೆಲ್ಲ ದಾನ ಮಾಡಿದರೆ ಏನು ಫಲ?

ಬೆಂಗಳೂರು: ದಾನ ಮಾಡುವುದು ಶ್ರೇಷ್ಠ ವಿಚಾರ ಎಂದು ನಮಗೆಲ್ಲಾ ಗೊತ್ತಿದೆ. ಆದರೆ ಯಾವ ದಾನ ಮಾಡಿದರೆ ಏನು ಫಲ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಶುಕ್ರ ಗ್ರಹದ ಪ್ರಭಾವ ಕಡಿಮೆಯಾಗಲು ಏನು ಮಾಡಬೇಕು?

ಬೆಂಗಳೂರು: ಜೀವನ ಶೈಲಿ ಸರಿಪಡಿಸಿಕೊಂಡರೆ ನವಗ್ರಹಗಳ ಪ್ರಭಾವ ಶಮನವಾಗುತ್ತದೆಯೇ? ಹೌದು. ಆರೋಗ್ಯಕರ ಜೀವನ ...