ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಸೋಮವಾರ, 22 ಏಪ್ರಿಲ್ 2019 (07:04 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡ ಮುಂದುವರಿಯಲಿದೆ. ಆದರೆ ದೇವತಾ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ಕೌಟುಂಬಿಕವಾಗಿ ಬಂಧುಮಿತ್ರರ ಭೇಟಿಯಾಗುವಿರಿ. ಖರ್ಚುವೆಚ್ಚಗಳ ಬಗ್ಗೆ ಮಿತಿಯಿರಲಿ.
 
ವೃಷಭ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವ ಸಾಧ್ಯತೆಯಿದೆ. ನಿರುದ್ಯೋಗಿಗಳು ಉದ್ಯೋಗ ಅರಸಿಕೊಂಡು ದೂರ ಸಂಚಾರ ಮಾಡಬೇಕಾಗಬಹುದು. ವ್ಯವಹಾರ ಕ್ಷೇತ್ರದಲ್ಲಿ ವಂಚನೆಗೊಳಗಾದಂತೆ ಎಚ್ಚರವಹಿಸಿ.
 
ಮಿಥುನ: ಸಾಧು ಸಂತರ ಭೇಟಿಯಾಗುವಿರಿ. ಪೂರ್ವ ದಿಕ್ಕಿನ ಪ್ರಯಾಣ ಶುಭವುಂಟುಮಾಡುವುದು. ಕಳೆದು ಹೋದ ವಸ್ತುಗಳು ಮರಳಿ ಬರಲಿವೆ. ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ಆದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
 
ಕರ್ಕಟಕ: ಮನೆ, ವಾಸಸ್ಥಳ ಬದಲಾವಣೆಗೆ ಚಿಂತನೆ ನಡೆಸುವಿರಿ. ಹೊಸ ಭೂಮಿ ಖರೀದಿಸಲು ಸ್ವಲ್ಪ ದಿನ ಕಾಯುವುದು ಒಳ್ಳೆಯದು. ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ನೆರವಾಗುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.
 
ಸಿಂಹ: ವಿದ್ಯಾರ್ಥಿಗಳು ನಿರೀಕ್ಷಿತ ಫಲಿತಾಂಶ ಪಡೆಯುವರು. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ಇದ್ದರೂ ಅಂತಿಮವಾಗಿ ಜಯ ನಿಮ್ಮದೇ. ಪಾಲು ವ್ಯವಹಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಡಿ.
 
ಕನ್ಯಾ: ಹಿರಿಯರ ತೀರ್ಥ ಯಾತ್ರೆಗೆ ವ್ಯವಸ್ಥೆ ಮಾಡುವಿರಿ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡುವಿರಿ. ಹೊಸ ವ್ಯವಹಾರಗಳಿಗೆ ಕೈ ಹಾಕುವ ಮೊದಲು ಹಿರಿಯರ ಸಲಹೆ ಪಡೆದು ಮುನ್ನಡೆಯುವುದು ಸೂಕ್ತ.
 
ತುಲಾ: ಆಸ್ತಿ ವಿವಾದ ವಿಚಾರದಲ್ಲಿ ಕೋರ್ಟು ಕಚೇರಿ ಎಂದು ಅಲೆದು ಸಮಯ ವ್ಯರ್ಥವಾಗುವುದು. ಹಿರಿಯರ ಆರೋಗ್ಯ ಹದಗೆಡಬಹುದು. ಕೌಟುಂಬಿಕವಾಗಿ ಜವಾಬ್ಧಾರಿಗಳು ಹೆಚ್ಚಲಿವೆ. ತಾಳ್ಮೆಯಿಂದ ಮುನ್ನಡೆಯಿರಿ.
 
ವೃಶ್ಚಿಕ: ನೂತನ ದಂಪತಿಗಳು ಪ್ರವಾಸ ತೆರಳುವರು. ಮನೆಯಲ್ಲಿ ಮಕ್ಕಳಿಂದ ಸಂತೋಷದ ವಾತಾವರಣವಿರುವುದು. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ, ಬಡ್ತಿ ಯೋಗವಿದೆ. ಹಿತ ಶತ್ರುಗಳ ಬಗ್ಗೆ ಎಚ್ಚರ ಅಗತ್ಯ.
 
ಧನು: ಬಂಧು ಮಿತ್ರರ ಭೇಟಿ ಮನಸ್ಸಿಗೆ ಖುಷಿ ನೀಡುವುದು. ಸಂಗಾತಿಯ ಸಲಹೆಗಳಿಗೆ ಕಿವಿಗೊಡಬೇಕಾಗಬಹುದು. ದುಡುಕಿನ ವರ್ತನೆ ಬೇಡ. ಕಾರ್ಯದೊತ್ತಡ ಹೆಚ್ಚಾಗಬಹುದು. ತಾಳ್ಮೆ ಅಗತ್ಯ.
 
ಮಕರ: ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಮಾಡಬೇಕಾದೀತು. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಧನವಿನಿಯೋಗ ಮಾಡಬೇಕಾಗುತ್ತದೆ. ಮನೆಯವರೊಂದಿಗೆ ಆದಷ್ಟು ತಾಳ್ಮೆಯಿಂದ ವರ್ತಿಸಿ.
 
ಕುಂಭ: ಅನಿರೀಕ್ಷಿತವಾಗಿ ಬರುವ ಬಂಧು ಮಿತ್ರರಿಂದ ಸಂತೋಷದ ವಾರ್ತೆ ಸಿಗುವುದು. ಇಷ್ಟಮಿತ್ರರೊಂದಿಗೆ ಭೋಜನ ಯೋಗವಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭ. ದಿನದಂತ್ಯಕ್ಕೆ ಶುಭ ಸುದ್ದಿ.
 
ಮೀನ: ಕುಲದೇವರ ಹರಕೆ ತೀರಿಸಲು ಪುಣ್ಯ ಕ್ಷೇತ್ರಗಳ ಭೇಟಿ. ಹಿರಿಯರೊಂದಿಗೆ ಕೊಂಚ ಮನಸ್ತಾಪ ಮಾಡಿಕೊಳ್ಳುವಿರಿ. ಆದರೆ ಸಹನೆಯಿಂದ ಇದ್ದರೆ ಎಲ್ಲವೂ ಶುಭ. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಗೆ ಅವಕಾಶ ಮಾಡಿಕೊಡದಿರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

ತೊಡೆಯ ಮೇಲೆ ತಟ್ಟೆ ಇಟ್ಟುಕೊಂಡು ಊಟಮಾಡಬಾರದು ಯಾಕೆ ಗೊತ್ತಾ?

ಬೆಂಗಳೂರು: ಅನ್ನವು ಪೂರ್ಣ ಬ್ರಹ್ಮವಾಗಿರುವುದರಿಂದ ಅದಕ್ಕೆ ದೇವತ್ವದ ಗೌರವವನ್ನು ಕೊಡಬೇಕು. ತೊಡೆಯ ಮೇಲೆ ...

news

ಕೇತು ಗ್ರಹದ ಪ್ರಭಾವ ಕಡಿಮೆಯಾಗಲು ಏನು ಮಾಡಬೇಕು?

ಬೆಂಗಳೂರು: ಜೀವನ ಶೈಲಿ ಸರಿಪಡಿಸಿಕೊಂಡರೆ ನವಗ್ರಹಗಳ ಪ್ರಭಾವ ಶಮನವಾಗುತ್ತದೆಯೇ? ಹೌದು. ಆರೋಗ್ಯಕರ ಜೀವನ ...

news

ದಿನಕ್ಕೊಂದು ದಾನ: ವಸ್ತ್ರ ದಾನ ಮಾಡಿದರೆ ಏನು ಫಲ?

ಬೆಂಗಳೂರು: ದಾನ ಮಾಡುವುದು ಶ್ರೇಷ್ಠ ವಿಚಾರ ಎಂದು ನಮಗೆಲ್ಲಾ ಗೊತ್ತಿದೆ. ಆದರೆ ಯಾವ ದಾನ ಮಾಡಿದರೆ ಏನು ಫಲ ...

news

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.