ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಗುರುವಾರ, 25 ಏಪ್ರಿಲ್ 2019 (06:53 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಸ್ನೇಹಿತರ ಮಾತಿಗೆ ಕಿವಿಗೊಡಬೇಕಾಗುತ್ತದೆ. ಕೌಟುಂಬಿಕವಾಗಿ ಜವಾಬ್ಧಾರಿಗಳು ಹೆಚ್ಚಲಿವೆ. ಆರ್ಥಿಕವಾಗಿ ಸಮಾಧಾನಕರ ದಿನ. ಹಾಗಿದ್ದರೂ ಕಾರ್ಯಾರಂಭಕ್ಕೆ ಕೆಲವೊಂದು ಅಡೆತಡೆಗಳು ತೋರಿಬಂದೀತು.
 
ವೃಷಭ: ಅನಿರೀಕ್ಷಿತವಾಗಿ ಬರುವ ಬಂಧು ಮಿತ್ರರಿಂದ ಸಂತಸದ ಸುದ್ದಿ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ. ಅನಿರೀಕ್ಷಿತವಾಗಿ ಖರ್ಚು ವೆಚ್ಚಗಳು ತಲೆದೋರುವುದು.
 
ಮಿಥುನ: ದುರ್ಜನರ ಸಂಗ ನಿಮ್ಮ ಕಾರ್ಯಕ್ಕೆ ಭಂಗ ತಂದೀತು. ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿರಲಿ. ಕೋರ್ಟು, ಕಚೇರಿ ವ್ಯವಹಾರಗಳನ್ನು ಕೆಲವು ದಿನ ಮುಂದೂಡುವುದು ಒಳಿತು. ನೀರಿಗಾಗಿ ಪರದಾಟ ತಪ್ಪದು. ದಿನದಂತ್ಯಕ್ಕೆ ಶುಭ ಸುದ್ದಿ.
 
ಕರ್ಕಟಕ: ಬಂಧು ಮಿತ್ರರೊಂದಿಗೆ ಪ್ರವಾಸ ತೆರಳುವಿರಿ. ಸಂತಾನ ಭಾಗ್ಯಕ್ಕಾಗಿ ಪರಿತಪಿಸುವ ದಂಪತಿ ದೇವತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವರು. ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ಆದಾಯ ಹೆಚ್ಚುವುದು.
 
ಸಿಂಹ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯುವುದು. ನಿರುದ್ಯೋಗಿಗಳು ಹೊಸ ಉದ್ಯೋಗ ಅವಕಾಶ ಅರಸಿಕೊಂಡು ದೂರ ಪ್ರಯಾಣ ಮಾಡುವರು. ಮಿತ್ರರಿಂದ ಸಂಕಷ್ಟದ ಸಮಯದಲ್ಲಿ ಸಹಾಯ ಸಿಗುವುದು.
 
ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಏಳಿಗೆಗೆ ಮೇಲಧಿಕಾರಿಗಳಿಂದ ಅಡ್ಡಿ ಆತಂಕಗಳು ಎದುರಾಗಬಹುದು. ಆದರೆ ಸಾಮಾಜಿಕವಾಗಿ ನೀವು ಮಾಡಿದ ಕೆಲಸಗಳಿಗೆ ಮನ್ನಣೆ ಸಿಕ್ಕಿ ಗೌರವ ಸಂಪಾದಿಸುವಿರಿ.
 
ತುಲಾ: ದಾಯಾದಿಗಳೊಂದಿಗೆ ಕಲಹವೇರ್ಪಡುವ ಸಾಧ್ಯತೆಯಿದೆ. ಹಿರಿಯರ ಮಧ್ಯಸ್ಥಿಕೆಯಿಂದ ಬಗೆಹರಿಸಿ. ಅನಾಯಾಚಿತವಾಗಿ ಅವಕಾಶವೊಂದು ಬರಲಿದ್ದು, ಸದುಪಯೋಗಪಡಿಸಿಕೊಳ್ಳಿ. ಮಿತ್ರರ ಭೇಟಿ ಸಾಧ‍್ಯತೆ.
 
ವೃಶ್ಚಿಕ: ದೈವಾನುಕೂಲದಿಂದ ನೀವು ಇಂದು ಕೈಗೊಂಡ ಕಾರ್ಯಗಳು ನೆರವೇರಲಿವೆ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ಕೌಟುಂಬಿಕವಾಗಿಯೂ ಸಂಗಾತಿ, ಮಕ್ಕಳೊಂದಿಗೆ ಸಂತಸದ ಕ್ಷಣ ಕಳೆಯುವಿರಿ.
 
ಧನು: ಮಕ್ಕಳ ವಿಚಾರಕ್ಕೆ ತಲೆಕೆಡಿಸಿಕೊಳ್ಳಬೇಕಾಗುತ್ತದೆ. ಕೌಟುಂಬಿಕ ಜವಾಬ್ಧಾರಿಗಳು ಹೆಚ್ಚಿ, ಕಾರ್ಯದೊತ್ತಡ ಅನುಭವಕ್ಕೆ ಬರಲಿದೆ. ಹಾಗಿದ್ದರೂ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದರಿಂದ ಮನಸ್ಸಿಗೆ ನೆಮ್ಮದಿಯಾಗುವುದು.
 
ಮಕರ: ಆರ್ಥಿಕವಾಗಿ ಆದಾಯಕ್ಕೆ ನಾನಾ ಮಾರ್ಗಗಳನ್ನು ಕಂಡುಕೊಳ್ಳುವಿರಿ. ಅಂದುಕೊಂಡ ಕಾರ್ಯಗಳಿಗೆ ಕೆಲವೊಂದು ವಿಘ್ನಗಳು ಎದುರಾದರೂ ಅಂತಿಮವಾಗಿ ಜಯ ನಿಮ್ಮದೇ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.
 
ಕುಂಭ: ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಕಿರಿ ಕಿರಿ. ವಾಸ ಸ್ಥಳ ಬದಲಾವಣೆಗೆ ಚಿಂತನೆ ಮಾಡುವಿರಿ. ವಿನಾಕಾರಣ ಅಪವಾದಕ್ಕೆ ಗುರಿಯಾಗಬೇಕಾದೀತು. ಎಚ್ಚರಿಕೆ ಅಗತ್ಯ.
 
ಮೀನ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಶುಭ ದಿನ. ಉದ್ಯೋಗದಲ್ಲಿ ಬಡ್ತಿ, ಮುನ್ನಡೆ ಸಿಗಲಿದೆ. ಕೌಟುಂಬಿಕವಾಗಿ ಮತ್ತಷ್ಟು ಜವಾಬ್ಧಾರಿಗಳು ಹೆಗಲಿಗೇರಲಿವೆ. ಕಾರ್ಯದೊತ್ತಡದಿಂದ ದೇಹ ಹೈರಾಣಾಗುವುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಯಾವ ನಕ್ಷತ್ರದಲ್ಲಿ ಯಾವ ದಾನ ಮಾಡಿದರೆ ಫಲ ಸಿಗುತ್ತದೆ?

ಬೆಂಗಳೂರು: ಕೆಲವೊಮ್ಮೆ ದೋಷ ನಿವಾರಣೆಗೆಂದು ಕೊಡುವ ದಾನಗಳಿಂದ ಫಲ ಸಿಗುತ್ತಿಲ್ಲ ಎನಿಸಬಹುದು. ಆದರೆ ಯಾವ ...

news

ಹನುಮಾನ್ ಚಾಲೀಸ್ ನ ಯಾವ ಪದ್ಯ ಓದಿದರೆ ಏನು ಫಲ?

ಬೆಂಗಳೂರು: ಹನುಮಾನ್ ಚಾಲೀಸ್ ನ ಅಗತ್ಯಕ್ಕೆ ಸರಿಯಾದ ಕೆಲವು ಪದ್ಯಗಳನ್ನು ಮಾತ್ರ ಓದಬಹುದು. ಅವುಗಳ ಮಹತ್ವ ...

news

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

news

ಮಾಟ ಮಾಡಿಸಿದಲ್ಲಿ ಕಂಡುಬರುವ ಲಕ್ಷಣಗಳು

ಬೆಂಗಳೂರು: ಕೆಟ್ಟ ಕನಸುಗಳು ಬೀಳುತ್ತಿದ್ದರೆ ತೀರಾ ಕೆಟ್ಟ ಕನಸುಗಳು ಬೀಳುತ್ತಿದ್ದರೆ, ಅದರಲ್ಲೂ ಯಾರೋ ಎದೆಯ ...