ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಶುಕ್ರವಾರ, 26 ಏಪ್ರಿಲ್ 2019 (06:52 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಅನಿರೀಕ್ಷಿತವಾಗಿ ಬಂಧುಮಿತ್ರರ ಭೇಟಿ ಮನಸ್ಸಿಗೆ ಮುದ ನೀಡಲಿದೆ. ಇಷ್ಟಭೋಜನ ಮಾಡುವಿರಿ. ಆದರೆ ಆರೋಗ್ಯದ ಚಿಂತೆ ಕಾಡುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.
 
ವೃಷಭ: ನೆರೆಹೊರೆಯವರೊಂದಿಗೆ ಗಡಿ ತಂಟೆ ತಕರಾರುಗಳು ಏರ್ಪಡುವುದು. ದುಡುಕಿನ ವರ್ತನೆ ತೋರದಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ. ದಿನದಂತ್ಯಕ್ಕೆ ಶುಭ ಸುದ್ದಿ.
 
ಮಿಥುನ: ಕಾರ್ಯಾರಂಭಕ್ಕೆ ನೂರೆಂಟು ವಿಘ್ನಗಳು ತಲೆದೋರುವುದು. ವಿಘ್ನೇಶ್ವರನ ಪ್ರಾರ್ಥನೆಯೊಂದಿಗೆ ದಿನದ ಆರಂಭ ಮಾಡಿ. ಮಕ್ಕಳ ಭವಿಷ್ಯ ಹಸನುಗೊಳಿಸಲು ಹೊಸ ದಾರಿ ಹುಡುಕುವಿರಿ.
 
ಕರ್ಕಟಕ: ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳೇ ನಿಮ್ಮ ಕೆಲಸಕ್ಕೆ ಅಡ್ಡಿಯಾಗುವರು. ಹಾಗಿದ್ದರೂ ಸ್ವಂತ ಪರಿಶ್ರಮದಿಂದ ಜಯ ಸಾಧಿಸುವಿರಿ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಾಗದು.
 
ಸಿಂಹ: ಮಿತ್ರರಿಂದ ಸಂತೋಷ ವೃದ್ಧಿ. ಮಕ್ಕಳ ವಿಚಾರಕ್ಕೆ ಚಿಂತೆಯಾಗಬಹುದು. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯುವಿರಿ. ದೇವತಾ ಪ್ರಾರ್ಥನೆಯಿಂದ ಮತ್ತಷ್ಟು ಶುಭ ಫಲ.
 
ಕನ್ಯಾ: ಹೊಸ ವ್ಯವಹಾರಗಳಿಗೆ ಕೈ ಹಾಕಿದರೆ ಕೆಲವೊಂದು ಅಡೆತಡೆಗಳು ಎದುರಾದರೂ ಅಂತಿಮವಾಗಿ ಜಯ ಸಿಗುವುದು. ಗೃಹೋಪಯೋಗಿ ವಸ್ತುಗಳಿಗಾಗಿ ಖರ್ಚು ವೆಚ್ಚ ಮಾಡುವಿರಿ. ಆದರೆ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
 
ತುಲಾ: ಕಾರ್ಯ ನಿಮಿತ್ತ ದೂರ ಸಂಚಾರ ಮಾಡಬೇಕಾಗಬಹುದು. ಪ್ರಯಾಣದಲ್ಲಿ ಕಳ್ಳತನದ ಭೀತಿಯಿದ್ದು ಎಚ್ಚರಿಕೆ ಅಗತ್ಯ. ಹಿರಿಯರ ಆರೋಗ್ಯ ಸಂಬಂಧ ಆಸ್ಪತ್ರೆಗೆ ಅಲೆದಾಡಬೇಕಾಗುತ್ತದೆ.
 
ವೃಶ್ಚಿಕ: ಎಷ್ಟೋ ದಿನದಿಂದ ಬಾಕಿಯಿದ್ದ ದೇವತಾ ಹರಕೆಗಳನ್ನು ಪೂರ್ತಿ ಮಾಡುವಿರಿ. ನೂತನ ದಂಪತಿಗಳಿಗೆ ಸಂತಾನ ಭಾಗ್ಯದ ಸೂಚನೆಯಿದೆ. ಸಂಗಾತಿಯ ಮಾತಿಗೆ ಕಿವಿಗೊಡಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ.
 
ಧನು: ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಪ್ರೇಮಿಗಳಿಗೆ ಮನೆಯವರಿಂದ ವಿರೋಧ ವ್ಯಕ್ತವಾಗಬಹುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಭಿಸುವುದು. ಆರ್ಥಿಕವಾಗಿ ಕೊಂಚ ಮುಗ್ಗಟ್ಟು ಎದುರಾಗಬಹುದು. ಎಚ್ಚರಿಕೆ ಅಗತ್ಯ.
 
ಮಕರ: ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಭಾಗ್ಯ. ದಾಯಾದಿಗಳು ಆಸ್ತಿ ವಿಚಾರದಲ್ಲಿ ತಗಾದೆ ತೆಗೆಯುವರು. ಹಿರಿಯರ ಸಲಹೆಗಳಿಗೆ ಮನ್ನಣೆ ಕೊಡಿ. ಕೆಲಸದಲ್ಲಿ ವಿಘ್ನಗಳು ತೋರಿಬಂದೀತು. ಕುಲದೇವರ ಪ್ರಾರ್ಥನೆ ಮಾಡಿ ಮುನ್ನಡೆಯಿರಿ.
 
ಕುಂಭ: ಪ್ರೀತಿ ಪಾತ್ರರೊಂದಿಗೆ ಸಂತೋಷದ ಕ್ಷಣ ಕಳೆಯುವಿರಿ. ದುಡುಕಿನ ಮಾತಿನಿಂದ ಆಪ್ತೇಷ್ಟರ  ಮನಸ್ಸಿಗೆ ನೋವುಂಟು ಮಾಡುವಿರಿ. ತಾಳ್ಮೆಯಿಂದಿರುವುದು ಮುಖ್ಯ. ಆರ್ಥಿಕವಾಗಿ ಸಮಾಧಾನಕರ ದಿನ.
 
ಮೀನ: ಮನಸ್ಸಿಗೆ ಯಾವುದೋ ಒಂದು ರೀತಿಯ ಬೇಸರ ಕಾಡಲಿದೆ. ಕಾರ್ಯದೊತ್ತಡ ಹೆಚ್ಚುವುದು, ಓಡಾಟ ನಡೆಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯವಿರಲಿ. ಸಜ್ಜನರ ಸಂಗದಿಂದ ಕಾರ್ಯ ಸಿದ್ಧಿ, ಮನಸ್ಸಿಗೂ ನೆಮ್ಮದಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಶ್ರೀಕೃಷ್ಣ ದೇವರು ತನ್ನ ಶರೀರವನ್ನು ತ್ಯಜಿಸಿದ್ದು ಎಲ್ಲಿ ಗೊತ್ತಾ?

ಬೆಂಗಳೂರು: ಗುಜರಾತ್ ನಲ್ಲಿರುವ ಸೋಮನಾಥ ಮಂದಿರವು ದೇಶದಲ್ಲಿ ಒಂದು ಪ್ರಮುಖ ತೀರ್ಥ ಸ್ಥಳವಾಗಿದೆ. ಇದು ಕೇವಲ ...

news

ಕುಜ ಅಥವಾ ಮಂಗಳ ಗ್ರಹದ ಪ್ರಭಾವ ಹೆಚ್ಚಿದ್ದರೆ ಯಾವ ಪೂಜೆ ಮಾಡಬೇಕು?

ಬೆಂಗಳೂರು: ಹೆಚ್ಚಿನವರು ಕುಜ ಅಥವಾ ಮಂಗಳನ ದೋಷದಿಂದ ನಾನಾ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಿದ್ದರೆ ಈ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಯಾವ ನಕ್ಷತ್ರದಲ್ಲಿ ಯಾವ ದಾನ ಮಾಡಿದರೆ ಫಲ ಸಿಗುತ್ತದೆ?

ಬೆಂಗಳೂರು: ಕೆಲವೊಮ್ಮೆ ದೋಷ ನಿವಾರಣೆಗೆಂದು ಕೊಡುವ ದಾನಗಳಿಂದ ಫಲ ಸಿಗುತ್ತಿಲ್ಲ ಎನಿಸಬಹುದು. ಆದರೆ ಯಾವ ...